ಕರಾವಳಿ

ಲಾಕ್‌ಡೌನ್ ಮಧ್ಯೆಯೇ ಮಂಗಳೂರಿನಲ್ಲಿ ಯುವತಿ ನಾಪತ್ತೆ

Pinterest LinkedIn Tumblr

ಮಂಗಳೂರು ಮೇ 11 : ಕೊರೋನಾ ಸೋಂಕು ಹಿನ್ನೆಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದು, ವ್ಯಾಪಕ ಪೊಲೀಸ್ ಬಂದೋಬಸ್ತ್ ಇದ್ದರೂ ಮಂಗಳೂರಿನಲ್ಲಿ ಯುವತಿ ಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಿಯಾಂಕ (21) ಎಂಬ ಯುವತಿ ತನ್ನ ಮನೆಯಿಂದ ಕಾಣೆಯಾಗಿದ್ದಾರೆ. ಕಾಣೆಯಾದ ಯುವತಿಯ ಚಹರೆ ಇಂತಿವೆ:- ಹೆಸರು-ಪ್ರಿಯಾಂಕ, ಪ್ರಾಯ-21 ವರ್ಷ, ಎತ್ತರ- 5 ಅಡಿ 6 ಇಂಚು, ಗೋಧಿ ಮೈ ಬಣ್ಣ, ಧರಿಸಿದ ಬಟ್ಟೆ- ಹಳದಿ ಕಲರ್ ಟಾಪ್, ಬೂದು ಕಲರ್ ಪ್ಯಾಂಟ್, ಮಾತನಾಡುವ ಭಾಷೆ-ಕನ್ನಡ, ಇಂಗ್ಲೀಷ್.

ಕಾಣೆಯಾದ ಯುವತಿ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಠಾಣಾಧಿಕಾರಿ, ಮಂಗಳೂರು ಪೂರ್ವ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ : 0824-2220520, ಅಥವಾ ಜಿಲ್ಲಾ ಕಂಟ್ರೋಲ್ ದೂರವಾಣಿ ಸಂಖ್ಯೆ:-2220800-2220801 ನ್ನು ಸಂಪರ್ಕಿಸಲು ಮಂಗಳೂರು ಪೂರ್ವ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

Comments are closed.