ರಾಷ್ಟ್ರೀಯ

‘ಸಿಂಗಂ’ ಚಿತ್ರದ ಸಾಹಸ ದೃಶ್ಯದಂತೆ ಸ್ಟಂಟ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಪೊಲೀಸ್ ಸಬ್ ಇನ್ಸ್ ಪೆಕ್ಟರ್ !

Pinterest LinkedIn Tumblr

ಭೂಪಾಲ್: ಅಜಯ್ ದೇವಗನ್ ಅಭಿನಯದ ‘ಸಿಂಗಂ’ ಚಿತ್ರದಲ್ಲಿನ ಜನಪ್ರಿಯ ಸಾಹಸ ದೃಶ್ಯದಂತೆ ಸ್ಟಂಟ್ ಮಾಡಲು ಹೋಗಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ಎಡವಟ್ಟು ಮಾಡಿಕೊಂಡಿದ್ದಾರೆ.

ಖಾಕಿ ತೊಟ್ಟು ಚಲಿಸುತ್ತಿರುವ ಎರಡು ಕಾರುಗಳ ಮೇಲೆ ಸಮತೋಲನವಾಗಿ ನಿಲ್ಲುವ ಡೇರ್ ಡೆವಿಲ್ ಸಾಹಸ ಕೆಲಸ ಮಾಡಿದ ಮಧ್ಯಪ್ರದೇಶದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರಿಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ.

ದಮೋಹ್ ಜಿಲ್ಲೆ ನರಸಿಂಗ್ ಗಢ ಪೊಲೀಸ್ ಠಾಣೆ ಇನ್ ಚಾರ್ಜ್ ಮನೋಜ್ ಯಾದವ್ ಈ ರೀತಿಯ ಎಡವಟ್ಟು ಮಾಡಿಕೊಂಡ ಅಧಿಕಾರಿ. ಮುಂದೆ ಈ ರೀತಿಯ ಯಾವುದೇ ದುಸ್ಸಾಹಸಕ್ಕೆ ಮುಂದಾಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಮನೋಜ್ ಯಾದವ್ ಅವರ ಸ್ಟಂಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಯುವ ಜನತೆಗೆ ಇದು ಕೆಟ್ಟ ಸಂದೇಶ ರವಾನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಚಾರದ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಮಹಾನಿರ್ದೇಶಕ ಸಾಗರ್ ರಾಂಘೆ ಅನಿಲ್ ಶರ್ಮಾ ಪೊಲೀಸ್ ಅಧೀಕ್ಷಕ ಹೇಮಂತ್ ಚೌಹ್ಹಾಣ್ ಅವರಿಗೆ ನಿರ್ದೇಶಿಸಿದ್ದಾರೆ. ವಿಚಾರಣೆ ಬಳಿಕ ಚೌಹ್ಹಾಣ್ ಸಬ್ ಇನ್ಸ್ ಪೆಕ್ಟ್ ರ್ ಮೇಲೆ 5 ಸಾವಿರ ರೂ. ದಂಡ ವಿಧಿಸಿದ್ದು, ಮುಂದೆ ಈ ರೀತಿಯ ಮಾಡದಂತೆ ನಿರ್ದೇಶನ ನೀಡಿದ್ದಾರೆ.

Comments are closed.