ಕರಾವಳಿ

ದ.ಕ.ಜಿಲ್ಲೆಯಲ್ಲಿ ಮತ್ತೆ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ದೃಢ : ಉಡುಪಿಗೂ ತಟ್ಟಿದ ಫಸ್ಟ್ ನ್ಯೂರೊ ಹೊಡೆತ

Pinterest LinkedIn Tumblr

ಮಂಗಳೂರು,ಮೇ.12: ದ.ಕ.ಜಿಲ್ಲೆಯಲ್ಲಿ ಮತ್ತೆ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಕು ಪೀಡಿತರ ಸಂಖ್ಯೆ ಮತ್ತೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಧ್ಯಾಹ್ನದ ಬುಲೆಟಿನ್‌ನಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇಬ್ಬರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

52 ವರ್ಷದ ಮಹಿಳೆ ಮತ್ತು 26 ವರ್ಷದ ಯುವಕನಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಇಬ್ಬರು ಮಂಗಳೂರಿನ ಪಡೀಲ್ ನಲ್ಲಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ರೋಗಿ ಸಂಖ್ಯೆ P-507 ರ ಸಂಪರ್ಕದಿಂದ ಇಬ್ಬರಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಂಗಳೂರಿನ ಶಕ್ತಿನಗರದ 80 ವರ್ಷದ ವೃದ್ಧೆ P-507 ಸಂಪರ್ಕದಿಂದ ಸೋಕು ತಗುಲಿರುವುದು ಖಚಿತವಾಗಿದೆ.

ಮುಖ್ಯಂಶಗಳು :

ಫಸ್ಟ್ ನ್ಯೂರೊ ಆಸ್ಪತ್ರೆಯಿಂದ ಮತ್ತೆ ಎರಡು ಸೋಂಕು ಪತ್ತೆ

ಇಂದು ಉಡುಪಿ ಮೂಲದ ಕಾರ್ಕಳದ ಇಬ್ಬರಿಗೆ ಸೋಂಕು ದೃಢ

52 ವರ್ಷದ ಮಹಿಳೆ ಮತ್ತು 26 ವರ್ಷದ ಯುವಕನಿಗೆ ಕೊರೋನಾ ಸೋಂಕು

ಈ ಇಬ್ಬರು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು

ತನಿಖೆ ವೇಳೆ ಚಿಕಿತ್ಸೆ ಪಡೆದಿದ್ದವರ ಬಗ್ಗೆ ಮಾಹಿತಿ

ಕ್ವಾರಂಟೈನ್ ನಲ್ಲಿ ಇಟ್ಟು ಪರೀಕ್ಷೆ ಮಾಡಲಾಗಿತ್ತು

P-507 ರ ಸಂಪರ್ಕದಿಂದ ಇಬ್ಬರಿಗೂ ಸೋಂಕು

ಮಂಗಳೂರಿನ ಶಕ್ತಿನಗರದ 80 ವರ್ಷದ ವೃದ್ಧೆ P-507

Comments are closed.