ಮಂಗಳೂರು : ಶಕ್ತಿನಗರ 35 ನೇ ಕಕ್ಕೆಬೆಟ್ಟು ವಾರ್ಡ್ ಗೆ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಸೀಲ್ಡೌನ್ ನಿಂದ ಅಲ್ಲಿನ ಜನರಿಗೆ ಆದ ಸಮಸ್ಯೆಗಳನ್ನು ಸ್ಥಳೀಯ ಜನಪ್ರತಿನಿಧಿ ಮತ್ತು ಅಧಿಕಾರಿಗಳಿಂದ ಆಲಿಸಿದರು.
ಕೆಲವು ದಿನಗಳ ವರೆಗೆ ಇಲ್ಲಿನ ಜನರಿಗೆ ಹೊರಗೆ ಬರಲು ಸಾಧ್ಯವಿಲ್ಲ. ಆದ ಕಾರಣ ಅಗತ್ಯ ವಸ್ತುಗಳಾದ ಅಕ್ಕಿ, ದಿನಸಿ ಸಾಮಾಗ್ರಿಗಳು, ತರಕಾರಿ ಇತ್ಯಾದಿಗಳನ್ನು ರಾಜ್ಯ ಸರಕಾರ,ಸಂಸದರ ನೇತೃತ್ವದಲ್ಲಿ ಪಾಲಿಕೆ ಮೇಯರ್,ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಜಿಲ್ಲಾಢಳಿತದಿಂದ ನೇಮಿಸಲ್ಪಟ್ಟ ಈ ಕ್ಷೇತ್ರದ ಅಧಿಕಾರಿಯವರಾದ ಶಿವಲಿಂಗ ಅವರಿಗೆ ಹಸ್ತಾಂತರಿಸಲಾಗಿದ್ದು ಅವರು ಮನೆ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಿದ್ದಾರೆ.
ಸ್ಥಳೀಯ ಜನರು ಯಾವುದೇ ಆತಂಕಕ್ಕೆ ಒಳಗಾಗದೇ ಬೇರೆ ಇನ್ನಿತರ ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ನನ್ನಲ್ಲಿ ಅಥವಾ ಈ ಕ್ಷೇತ್ರದ ಮನಪಾ ಸದಸ್ಯರಲ್ಲಿ ಫೋನ್ ಮುಖಾಂತರ ತಿಳಿಸಿದ್ದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಈ ವೇಳೆ ಶಾಸಕರು ತಿಳಿಸಿದರು.
ಈ ಸಂಧರ್ಭದಲ್ಲಿ ಪೂಜ್ಯ ಮೇಯರ್ ದಿವಾಕರ್, ಸ್ಥಳೀಯ ಕಾರ್ಪೋರೇಟರ್ ಕಿಶೋರ್ ಕೊಟ್ಟಾರಿ ಪೂರ್ಣಿಮಾ , ರಾಮಚಂದ್ರ ಚೌಟ ,ವಸಂತ ಪೂಜಾರಿ , ಉಮಾನಾಥ ಕೊಟ್ಟಾರಿ, ಮಾಧವ ಭಟ್, ಸದಾಶಿವ, ವಿನಯ್ , ಭಾಸ್ಕರ್ ,ಮನೋಜ್ , ನಂದನ್ ಕಕ್ಕೆಬೆಟ್ಟು ಅಕ್ಷಿತ್ ಕೊಟ್ಟಾರಿ ಉಪಸ್ಥಿತರಿದ್ದರು
Comments are closed.