ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಹೀಗಾಗಿ ಇದೀಗ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಕೈದಿಗಳೂ ಕೂಡ ಕೊರೊನಾ ಪ್ರಭಾವಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.ಹೀಗಾಗಿ ಪ್ರದೇಶದಲ್ಲಿರುವ ಸುಮಾರು 17 ಸಾವಿರ ಕೈದಿಗಳ ಬಿಡುಗಡೆಗೆ ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಮಾಹಿತಿಯ ಪ್ರಕಾರ ರಾಜ್ಯ ಸರ್ಕಾರವು 17000 ಕೈದಿಗಳನ್ನು ರಾಜ್ಯ ಜೈಲುಗಳಿಂದ ಪೆರೋಲ್ ಮೇಲೆ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಇದಕ್ಕಾಗಿ ಮಹಾರಾಷ್ಟ್ರ ಸರ್ಕಾರದ ಗೃಹ ಇಲಾಖೆ ತಜ್ಞರನ್ನು ಒಳಗೊಂಡ ಒಂದು ಹೈ ಪಾವರ್ಡ್ ಸಮೀತಿ ರಚಿಸಿತ್ತು. ಇದರಲ್ಲಿ ನ್ಯಾಯಮೂರ್ತಿ ಎ. ಎ. ಸಯ್ಯದ್, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಚಹಾಂಡೆ, ಎಸ್‌ಎನ್‌ಪಿ ಪಾಂಡೆ, ಜೈಲಿನ ಡಿಜಿಪಿ ಶಾಮೀಲಾಗಿದ್ದರು. ಈ ಸಮಿತಿಯು ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.
ಈ ಕುರಿತು ಮಾಹಿತಿ ನೀಡಿ ಮಾತನಾಡಿರುವ ರಾಜ್ಯದ ಗೃಹ ಸಚಿವ ಅನಿಲ್ ದೇಶ್ಮುಖ್, ಗಂಭೀರ ಆರೋಪ ಎದುರಿಸುತ್ತಿರುವ ಕೈದಿಗಳನ್ನು ಮಾತ್ರ ಜೈಲಿನಿಂದ ಬಿಡುಗಡೆ ಮಾಡಲಾಗುವುದಿಲ್ಲ . ಜೊತೆಗೆ MCOCA ಹಾಗೂ UAPA ಅಡಿ ಬಂಧಿಸಲಾಗಿರುವ ಕೈದಿಗಳಿಗೆ ಸರ್ಕಾರದ ಈ ನಿರ್ಣಯ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಪೋಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣ
ದೇಶಮುಖ್ ಅವರ ಪ್ರಕಾರ, ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಪ್ರಾರಂಭವಾದಾಗಿನಿಂದ, COVID-19 ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗೆ 1 ಲಕ್ಷ 4 ಸಾವಿರ ಕೇಸ್ ಗಳು ದಾಖಲಾಗಿವೆ. ಇದೇ ವೇಳೆ ಪೊಲೀಸರ ಮೇಲೆ ಸುಮಾರು 212 ಹಲ್ಲೆ ಘಟನೆಗಳು ನಡೆದಿದ್ದು, ಈ ಘಟನೆಗಳಲ್ಲಿ 750 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ನ ಒಟ್ಟು ಪ್ರಕರಣಗಳು
ಮಹಾರಾಷ್ಟ್ರದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿವೆ. ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 24 ಸಾವಿರ ದಾಟಿದ್ದರೆ, ಸಾವಿನ ಸಂಖ್ಯೆ 1 ಸಾವಿರಕ್ಕೆ ತಲುಪಲಿದೆ.
Comments are closed.