ಆರೋಗ್ಯ

ದೇಹದಲ್ಲಿನ ಕಪ್ಪು ಟ್ಯಾನ್ ದೂರವಾಗಿಸಲು ಈ ಎಣ್ಣೆ ಸಹಕಾರಿ….!

Pinterest LinkedIn Tumblr

ನೀವು ಕೊಬ್ಬರಿ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಬಹುದು. ಅದು ಬಿಟ್ಟರೆ ಅಡುಗೆ ಮಾಡುವಾಗ ಬಳಸಬಹುದು. ಕೊಬ್ಬರಿ ಎಣ್ಣೆ ಚರ್ಮದಲ್ಲಿರುವ ಕಪ್ಪನ್ನು ತೊಲಗಿಸುತ್ತದೆ. ಮುಖವನ್ನ ಕಾಂತಿಯಾಗಿಡುವುದಕ್ಕೆ ಇದನ್ನ ಬಳಸಬಹುದು. ಕೊಬ್ಬರಿ ಎಣ್ಣೆಯಲ್ಲಿ ಆಂಟಿ ಓಕ್ಸಿಡೆಂಟ್ ವಿಟಮಿನ್ ತರಹದ ಪೋಷಕಾಂಶಗಳಿವೆ. ಇವು ಚರ್ಮದಲ್ಲಿರುವ ಕಪ್ಪನ್ನು ತೊಲಗಿಸುತ್ತದೆ. ಮುಖದ ಮೇಲೆ ಕಪ್ಪು ಟ್ಯಾನ್ ಇದೆಯೇ..? ಅದಕ್ಕಾಗಿ ನೀವು ಹೀಗೆ ಮಾಡಿ.

*ಒಂದು ಟೀ ಸ್ಪೂನ್ ಕೊಬ್ಬರಿ ಎಣ್ಣೆ, ಒಂದು ಟೀ ಸ್ಪೂನ್ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಕಲಸಿ. ಇದನ್ನು ಮುಖದ ಮೇಲೆ ಅಪ್ಲೈ ಮಾಡಿ ಬೆರಳಿನಿಂದ ಚೆನ್ನಾಗಿ ಸವರಬೇಕು. 5-10 – ೧೦ ನಿಮಿಷದ ನಂತರ ತೊಳೆಯಬೇಕು. ಹೀಗೆ ಮಾಡಿದರೆ ಮುಖದ ಮೇಲೆ ಕಪ್ಪು ಹೋಗುತ್ತದೆ. ಜೊತೆಗೆ ಮುಖವು ಕಾಂತಿಯುತವಾಗುತ್ತದೆ. ಹೀಗೆ ವಾರಕ್ಕೆ ಎರಡು ಬಾರಿ ಅಪ್ಲೈ ಮಾಡಿಕೊಳ್ಳಬೇಕು. ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆಮ್ಲಗಳು, ವಿಟಮಿನ್ ಸಿ ಬ್ಲೀಚಿಂಗ್ ಲಕ್ಷಣಗಳು ಚರ್ಮದಲ್ಲಿ ಇರುವ ಕಪ್ಪನ್ನು ತೆಗೆದು ಹಾಕುವುದಕ್ಕೆ ತುಂಬಾ ಸಹಾಯ ಮಾಡುತ್ತದೆ.

* ಒಂದು ಟೀ ಸ್ಪೂನ್ ಕೊಬ್ಬರಿ ನಿಂಬೆ ರಸ ಹಾಗೂ ಒಂದು ಟೀ ಸ್ಪೂನ್ ಕೊಬ್ಬರಿ ಎಣ್ಣೆ ಹಾಕಿ ಕಲಸಬೇಕು. ಇದು ಒಂದು ಚಿಕ್ಕ ಮಿಶ್ರಣವಾಗಿ ತಯಾರಾಗುತ್ತದೆ. ಈ ಮಿಶ್ರಣವನ್ನು 20 ನಿಮಿಷ ಮುಖಕ್ಕೆ ಹಚ್ಚಿ. ಫೇಸ್ ವಾಶ್ ನಿಂದ ತೊಳೆದುಕೊಳ್ಳಬೇಕು. ಹಾಗೆಯೇ ನೀವು ಅಂಡರ್ ಆರ್ಮ್ಸ್ ಹಾಗೆ ಕಪ್ಪಾಗಿರುವ ಜಾಗಕ್ಕೆ ಅಪ್ಲೈ ಮಾಡಿಕೊಳ್ಳಬಹುದು‌. ಹೀಗೆ ಮಾಡಿದರೆ ಚರ್ಮ ಕಾಂತಿ ಹಾಗು ಮೃದುವಾಗಿರುತ್ತದೆ. ಕಣ್ಣಿನ ಸುತ್ತ ಕಪ್ಪು ರೇಖೆಗಳಿದ್ದರೆ ರಾತ್ರಿ ಮಲಗುವಾಗ ಕೊಬ್ಬರಿ ಎಣ್ಣೆ ಹಚ್ಚಿ 2 ನಿಮಿಷ ಅದನ್ನು ಸವರಿ ಮಲಗಬೇಕು. ಹೀಗೆ ಮಾಡಿದರೆ ಕಣ್ಣಿನ ಹತ್ತಿರ ಇರುವ ಕಪ್ಪು ಕಲೆಗಳು ಹೋಗಿ ಕಣ್ಣು ಕಾಂತಿಯುತವಾಗುತ್ತದೆ.

Comments are closed.