ಕುಂದಾಪುರ: ಮೇ.5ರ ಬಳಿಕ ಮಹಾರಾಷ್ಟ್ರದಿಂದ ಬಂದಿದ್ದ ಉಡುಪಿ ಜಿಲ್ಲೆ ಕುಂದಾಪುರ ಮೂಲದ ವ್ಯಕ್ತಿ ನಿಧನವಾಗಿದ್ದು ಕೊರೋನಾ ಪಾಸಿಟಿವ್ ಎನ್ನುವ ಮಾತುಗಳು ಕೇಳಿ ಬರುತ್ತಿದೆಯಾದರೂ ಜಿಲ್ಲಾಡಳಿತ ಇದನ್ನು ಸ್ಪಷ್ಟಪಡಿಸಿಲ್ಲ.
ವ್ಯಕ್ತಿಗೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದು ಎರಡು ದಿನದ ಹಿಂದೆ ಮಣಿಪಾಲ ಕೆಎಂಸಿಯಲ್ಲಿ ನಿಧನರಾಗಿದ್ದರು. ಸದ್ಯ ನಿಧನ ಹೊಂದಿದ ವ್ಯಕ್ತಿಯ ಗಂಟಲ ದ್ರವ ಪರೀಕ್ಷೆಗೆ ಕಳಿಸಲಾಗಿದೆ. ಮೊದಲಿಗೆ ಕುಂದಾಪುರ ಆಸ್ಪತ್ರೆಗೆ ದಾಖಲಾಗಿದ್ದು ಬಳಿಕ ಎರಡು ದಿನಗಳ ಹಿಂದೆ ಮಣಿಪಾಲ ಕೆಎಂಸಿಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದ ವ್ಯಕ್ತಿಯ ಕೋವಿಡ್ ಪರೀಕ್ಷೆಯ ವರದಿಗೆ ಜಿಲ್ಲಾಡಳಿತ ಕಾಯುತ್ತಿದ್ದು ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
Comments are closed.