ಆರೋಗ್ಯ

ಉಡುಪಿ ಮೂಲದ 1 ವರ್ಷದ ಮಗುವಿಗೆ ಕೊರೋನಾ ಸೋಂಕು ದೃಢ

Pinterest LinkedIn Tumblr

ಉಡುಪಿ: ದುಬೈನಿಂದ ಪೋಷಕರೊಂದಿಗೆ ಉಡುಪಿಗೆ ಬಂದ 1ವರ್ಷ ಪ್ರಾಯದ ಹೆಣ್ಣು ಮಗುವಿಗೆ ಕೊರೋನಾ ಪಾಸಿಟಿವ್ ಆಗಿದೆ.

ಮೇ.13ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಗುವಿನ ಗಂಟಲು ಧರವ ತಪಾಸಣೆ ಮಾಡಲಾಗಿತ್ತು. ಅದರ ವರದಿ ಬಂದಿದ್ದು ಮಗುವಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ.

ಸದ್ಯ ಮಗುವಿಗೆ ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ‌.

Comments are closed.