ನಮ್ಮ ಜಿಲ್ಲೆಯ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ವಲಸೆ ಕಾರ್ಮಿಕರ ಅವಿರತ ಶ್ರಮವಿದೆ : ಶ್ರೀಮತಿ ನಂದಿನಿ ರಘುಚಂದ್ರ
ಮಂಗಳೂರು, ಮೇ.16: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಹೊರ ರಾಜ್ಯ ಗಳ ಕಾರ್ಮಿಕರು ಮಂಗಳೂರಿನ ವಿವಿಧೆಡೆಗಳಲ್ಲಿ ಸಿಲುಕಿದ್ದು, ಅವರಿಗೆ ನಗರದಲ್ಲಿ ಹಲವಾರು ಮಂದಿ ದಿನನಿತ್ಯ ಆಹಾರವನ್ನು ಒದಗಿಸುತ್ತಿದ್ದಾರೆ.
ಆದರೆ ಇವರೆಲ್ಲರ ಮಧ್ಯೆ ಕಳೆದ 45 ದಿನಗಳಿಂದ ಸಾವಿರಾರು ಮಂದಿ ವಲಸೆ ಕಾರ್ಮಿಕರಿಗೆ ತಾವೇ ಸ್ವತಹ ಬಂದು ಬೆಳಗಿನ ಚಾ ಹಾಗೂ ಉಪಹಾರ ನೀಡುವ ಮೂಲಕ ಮಂಗಳೂರಿನ ಗೃಹಿಣೆಯೊಬ್ಬರು ಮಾನವೀಯತೆ ಮೆರೆದ್ದಾರೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಆತ್ತ ಊರಿಗೂ ಹೋಗಲಾಗದೇ ಇತ್ತ ಉದ್ಯೋಗವೂ ಇಲ್ಲದೇ ಪರದಾಡುತ್ತಿರುವ ಇವರ ಈ ಸಂಕಷ್ಟದ ಪರಿಸ್ಥಿತಿಯನ್ನು ನೋಡಲು ಸಾಧ್ಯವಾಗುತ್ತಿಲ್ಲ. ನಮ್ಮ ಜಿಲ್ಲೆಯ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಈ ಕಾರ್ಮಿಕರ ಅವಿರತ ಶ್ರಮವಿದೆ. ನಮ್ಮ ಜಿಲ್ಲೆಯನ್ನು ನಂಬಿ ಬಂದ ಇವರನ್ನು ಗೌರವಯುತವಾಗಿ ಅವರ ಊರಿಗೆ ಕಳಿಸಬೇಕಾದ ಹೊಣೆ ನಮ್ಮೆಲ್ಲರದು. ಇದೀಗ ಕಷ್ಟದಲ್ಲಿರುವ ಈ ಕಾರ್ಮಿಕರಿಗೆ ಈ ರೀತಿ ಆಹಾರ ನೀಡುವುದರಿಂದ ಏನೋ ಮನಸ್ಸಿಗೆ ನೆಮ್ಮದಿ ಎನ್ನುವ ಈ ಮೆಡಂ ಹೆಸರು ನಂದಿನಿ ರಘುಚಂದ್ರ. ಮಂಗಳುರಿನ ಬಿಜೈ ನ್ಯೂ ರೋಡ್ ನಿವಾಸಿ, ನಿವೃತ್ತ ಅಧ್ಯಾಪರು.
ಲಾಕ್ ಡೌನ ಆರಂಭದ ದಿನಗಳಲ್ಲಿ ರೈಲ್ವೇ ನಿಲ್ದಾಣದಲ್ಲಿ ಉಪಹಾರ ನೀಡುತ್ತಿದ್ದೇವು. ಬಳಿಕ ಅವರನ್ನು ವಿವಿಧೆಡೆಗಳಿಗೆ ಸ್ಥಳಾಂತರಿಸಲಾಯಿತು. ಬಳಿಕ ಪುರಭವನದಲ್ಲಿದ್ದ ಕಾರ್ಮಿಕರಿಗೆ ಉಪಾಹಾರ ನೀಡುತ್ತಿದ್ದೆವು. ಅಮೇಲೆ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ಮನವಿ ಮೇರೆಗೆ ನಗರ ಲೇಡಿ ಹಿಲ್ ಸಮೀಪವಿರುವ ಕರಾವಳಿ ಮೈದಾನದಲ್ಲಿದ್ದ ಬಿಜಾಪುರ ಮೂಲಕ ಸುಮಾರು 800 ಕಾರ್ಮಿಕರಿಗೆ ಹಾಗೂ ಉತ್ತರ ಪ್ರದೇಶ ಮೂಲದ ಸುಮಾರು 500 ಕಾರ್ಮಿಕರಿಗೆ ಅಹಾರ ಒದಗಿಸಲಾಯಿತು.
ಈ ಸಂದರ್ಭದಲ್ಲಿ ಹಲವಾರು ಬಾರಿ ಮಾಂಸಹಾರಿ ಆಹಾರವನ್ನು ನೀಡಿದ್ದೇವೆ. ಕೆಲವೊಮ್ಮೆ ನಮ್ಮ ಸ್ನೇಹಿತರ ಜನ್ಮದಿನದ ಪ್ರಯುಕ್ತ ಸಸ್ಯಹಾರಿ ಹಾಗೂ ಮಾಂಸಹಾರಿ ಊಟದ ಜೊತೆ ಪಾಯಾಸ, ಕೆಲವೊಮ್ಮೆ ಬಿರಿಯಾನಿ, ಲೆಮೆನ್ ರೈಸ್, ಮೊಟ್ಟೆ, ಇಡ್ಲಿ ಚಿಕನ್ ಈ ರೀತಿ ವಿವಿಧ ವೈರಟಿಯ ಆಹಾರ ಪದಾರ್ಥವನ್ನು ವಿತರಿಸಿದ್ದೇವೆ.
ಇದೀಗ ಪಾಲಿಕೆ ಅಧಿಕಾರಿಗಳ ಮನವಿ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಪುರಭವದಲ್ಲಿರುವ ಜಾರ್ಖಾಂಡ್ ಮೂಲದ ಒಂದು ಸಾವಿರ ಕಾರ್ಮಿಕರಿಗೆ ಬೆಳಗಿನ ಚಾ ಹಾಗೂ ತಿಂಡಿಯನ್ನು ಪೂರೈಸುತ್ತಿದ್ದೇವೆ. ನಾಳೆ ಇಲ್ಲಿರುವವರು ಊರಿಗೆ ತೆರಳುತ್ತಾರೆ ಎಂಬ ಮಾಹಿತಿ ಇದೆ. ಒಂದು ವೇಳೆ ಅವರು ಉಳಿದರೆ ಮತ್ತೆ ಕೊಡುವ ವ್ಯವಸ್ಥೆಯನ್ನು ನಾವು ಮಾಡುತ್ತೇವೆ ಎನ್ನುತ್ತಾರೆ ನಂದಿನಿ ರಘುಚಂದ್ರ ಮೆಡಂ.
ನಮ್ಮ ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿಯವರ ಸೂಚನೆಯಂತೆ ನಾವು ಎರಡು ಮೂರು ದಿನ ಅಹಾರ ನೀಡುವ ಯೋಚನೆಯಿಂದ ಪ್ರಾರಂಭಿಸಿದೆವು.. ಆದರೆ ನನ್ನ ಸೇವಾಕಾರ್ಯ ಮೆಚ್ಚಿ ಹಲವಾರು ನನ್ನ ಸ್ನೇಹಿತರು ಈ ಕಾರ್ಯ ಮುಂದುವರೆಸು. ನಾವು ಸಹಕಾರ ನೀಡುತ್ತೇವೆ ಎಂದು ಮುಂದೆ ಬಂದರು. ಕೆಲವರು ಅವರ ಜನ್ಮ ದಿನದ ಪ್ರಯುಕ್ತ, ಇನ್ನು ಕೆಲವರು ಮದುವೆ ವಾರ್ಷಿಕೋತ್ಸವ ಹಿನ್ನೆಲೆ ಹೀಗೆ ಬೇರೆ ಬೇರೆ ಕಾರಣಗಳಿಗಾಗಿ ಉಪಹಾರ ನೀಡುವುದಕ್ಕೆ ನನಗೆ ಸಹಕಾರ ನೀಡಿದರು. ಅದೇ ರೀತಿ ಕೆಲವು ಸಂಘ ಸಂಸ್ಥೆಗಳು, ಅದರಲ್ಲೂ ಮುಖ್ಯವಾಗಿ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ನವರು ಈ ಒಂದು ಸೇವಾ ಕಾರ್ಯಕ್ಕೆ ಕೈಜೋಡಿಸಿದರು. ಜೊತೆಗೆ ಈ ಪುರಭವನದಲ್ಲಿರುವ ಇಷ್ಟೊಂದು ಮಂದಿಗೆ ಅಹಾರ ವಸ್ತು ಪದಾರ್ಥಗಳನ್ನು ಹಂಚುವುದು ಕೂಡ ಸಾಹಸದ ಕೆಲಸವೇ ಸರಿ. ಈ ಒಂದು ಪುಣ್ಯ ಕಾರ್ಯಕ್ಕೆ ನನ್ನೊಂದಿಗೆ ಸಹಕರಿಸಿದವರು ಲೋಲಾ ಸಾಲ್ಯಾನ್, ನಿತಿನ್ ಅತ್ತಾವರ್, ಅಶೊಕ್ ಟಿ.ಎ. ಹಾಗೂ ಸಾವಿತ್ರಿ ಎಂದು ನಂದಿನಿ ರಘುಚಂದ್ರ ಮೆಡಂ ಅವರು ಈ ಒಂದು ಸೇವಾ ಕಾರ್ಯದ ಬಗ್ಗೆ ಕನ್ನಡಿಗ ವರ್ಲ್ಡ್ ಡಾಟ್ ಕಾಮ್ ಪ್ರತಿನಿಧಿ ಜೊತೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್
Comments are closed.