ಮನೋರಂಜನೆ

ನವವಿವಾಹಿತ ಕಿರುತೆರೆಯ ನಟ ಮನಮೀತ್ ಆತ್ಮಹತ್ಯೆ!

Pinterest LinkedIn Tumblr


‘ಆದಾತ್ ಸೆ ಮಜ್ಬೂರ್’ ಶೋ ಖ್ಯಾತಿಯ ಮನಮೀತ್ ಗ್ರೆವಾಲ್ 32ನೇ ವಯಸ್ಸಿನಲ್ಲಿ ಮೇ 15ರ ರಾತ್ರಿ ಅವರ ಖಾರ್ಗರ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಪತ್ನಿ ಹೇಳಿರುವಂತೆ ಮನಮೀತ್‌ ಲಾಕ್ ಡೌನ್‌ನಿಂದಾಗಿ ಕೆಲಸವಿಲ್ಲದೆ ಒದ್ದಾಡುತ್ತಿದ್ದರಂತೆ.

ಇತ್ತೀಚೆಗಷ್ಟೇ ಮದುವೆಯಾದ ಮನಮೀತ್
‘ಆದಾತ್ ಸೇ ಮಜ್ಬೂರ್’, ‘ಕುಲದೀಪಕ್’ ಧಾರಾವಾಹಿಯಲ್ಲಿ ಈ ನಟ ಅಭಿನಯಿಸಿದ್ದರು. ಪೊಲೀಸರು ನೀಡಿದ ಹೇಳಿಕೆ ಪ್ರಕಾರ ಈ ನಟ ಲಾಕ್ ಡೌನ್‌ನಿಂದಾಗಿ ಕೆಲಸವಿಲ್ಲದೆ ಮಾನಸಿಕವಾಗಿ ಬಳಲುತ್ತಿದ್ದರು, ಸಾಕಷ್ಟು ಆರ್ಥಿಕ ಸಮಸ್ಯೆಯೂ ಇತ್ತು. ಮನಮೀತ್ ಮೂಲ ಹೆಸರು ಅಮರ್‌ಜ್ಯೋತ್ ಸಿಂಗ್. ರವೀಂದ್ರ ಕೌರ್ ಅವರನ್ನು ಇತ್ತೀಚೆಗಷ್ಟೇ ಮನಮೀತ್ ಮದುವೆಯಾಗಿದ್ದರು. ಇವರ ಕುಟುಂಬ ಪಂಜಾಬಿನಲ್ಲಿ ನೆಲೆಸಿದೆ.

ನೇಣು ಹಾಕಿಕೊಂಡ ಮನಮೀತ್
ಇವರ ಪತ್ನಿ ಅಡುಗೆ ಮನೆಯಲ್ಲಿ ಊಟ ಮಾಡುತ್ತಿರುವ ಸಂದರ್ಭದಲ್ಲಿ ಬೆಡ್‌ರೂಮ್‌ಗೆ ಹೋಗಿರುವ ಮನಮೀತ್, ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ. ಖುರ್ಚಿ ಬಿದ್ದ ಶಬ್ದ ಕೇಳಿದ ಮನಮೀತ್ ಪತ್ನಿ ಬೆಡ್‌ರೂಮ್‌ಗೆ ಹೋಗಿ ಏನಾಯ್ತು ಎಂದು ನೋಡಿದಾಗ ಮನಮೀತ್ ನೇಣು ಹಾಕಿಕೊಂಡಿರುವ ದೃಶ್ಯ ಕಣ್ಣಿಗೆ ಬಿದ್ದಿದೆ.

ವಿದೇಶಕ್ಕೆ ಹೋಗುವ ಪ್ಲ್ಯಾನ್ ಹಾಳಾಯ್ತು!
ಮನಮೀತ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಅವರು ತೀರಿಕೊಂಡಿದ್ದಾರೆ. ವೆಬ್ ಸಿರೀಸ್, ಕಮರ್ಷಿಯಲ್ಸ್ ಎಲ್ಲವೂ ಲಾಕ್ ಡೌನ್‌ನಿಂದ ಸ್ಥಗಿತವಾಗಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ಪನ್ವೆಲ್ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ವಿದೇಶಕ್ಕೆ ಹೋಗುವ ಬಗ್ಗೆಯೂ ಮನಮೀತ್ ಪತ್ನಿ ಬಳಿ ಮಾತನಾಡಿದ್ದರಂತೆ. ಆದರೆ ಲಾಕ್ ಡೌನ್ ಇದೆಲ್ಲವನ್ನು ಹಾಳು ಮಾಡಿತು ಅಂತ ಪನ್ವೆಲ್ ಹೇಳಿದ್ದಾರೆ. ಮನಮೀತ್ ಸಾಲ ಕೂಡ ಮಾಡಿಕೊಂಡಿದ್ದು, ಅದನ್ನು ತೀರಿಸಿಲ್ಲವಂತೆ.

Comments are closed.