ಉಡುಪಿ: ಮಾಸ್ಕ್ ಗಳನ್ನು ಮರುಬಳಕೆ ಮಾಡದಂತೆ ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿಯೊಂದನ್ನು ನೀಡಿದೆ.
ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಹಿನ್ನಲೆಯಲ್ಲಿ , ಮನೆಗಳಲ್ಲಿ ಹಾಗೂ ಹೋಂ ಕ್ವಾರಂಟೈನ್ ಸಂದರ್ಭಗಳಲ್ಲಿ ಉಪಯೋಗಿಸಿದ ಮಾಸ್ಕ್ ಹಾಗೂ ಗ್ಲೌಸ್ ಗಳನ್ನು ಮರು ಬಳಕೆ ಮಾಡದಿರುವ ಹಾಗೆ ಕತ್ತರಿಸಿ, ಪೇಪರ್ ಬ್ಯಾಗ್ ಗಳಲ್ಲಿ ಕನಿಷ್ಠ 72 ಗಂಟೆಗಳ ಕಾಲ ಶೇಖರಿಸಿ ನಂತರ ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ಡಿಹೆಚ್ಓ ಡಾ. ಸುಧೀರ್ ಚಂದ್ರ ಸೂಡಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.