ಗಡ್ಡ ಪೊಗರ್ದಸ್ತ್ ಆಗಿರಬೇಕು, ಮೀಸೆ ಜಬರ್ದಸ್ತ್ ಆಗಿರಬೇಕು. ಹಂಗಿದ್ರೆ ನೋಡಿ, ನಾಲ್ಕೈದು ಹುಡುಗಿಯರು ಕಣ್ಣಸನ್ನೆ ಮಾಡಿ, ಪ್ರಿಯಾ ವಾರಿಯರ್ ಸ್ಟೈಲ್ನಲ್ಲಿ ಶೂಟ್ ಮಾಡೋದು. ಅಲ್ವಾ ಮಚ್ಚಾ ಅಂತಾ ಹುಡುಗುರು ತಮ್ಮತಮ್ಮಲ್ಲೇ ಮಾತಾಡ್ಕೊಳ್ತಾ ಇರ್ತಾರೆ. ಆದರೆ, ಹಲ್ಲಿದ್ದವರಿಗೆ ಕಡಲೆ ಇರೋಲ್ಲ ಅನ್ನೋಹಾಗೇ ಕೆಲವರು ತಿಪ್ಪರಲಾಗ ಹಾಕಿದ್ರೂ ಅವರಿಗೆ ಬರೋದು ಮೇಕೆ ಗಡ್ಡ, ಜಿರಳೆ ಮೀಸೆ. ಅಷ್ಟಕ್ಕೇ ಬೇಸರ ಮಾಡ್ಕೊಳ್ಳೋ ಹುಡುಗ್ರು ಇದ್ದಾರೆ. ಅವರಿಗಂತಾನೇ ಇಲ್ಲೊಂದಿಷ್ಟು ಟಿಪ್ಸ್ ಇದೆ..
ವರ್ಷ 30 ಆದ್ರೂ, ಸರಿಯಾಗಿ ದಾಡಿ ಮೂಡಿಲ್ಲ ಅಂತಾ ನಾಚಿಕೆ ಪಟ್ಕೊಳ್ಳೋರಿಂದ ಹಿಡಿದು, ಅರ್ಜೆಂಟ್ ಆಗಿ ಗಡ್ಡ ಮೀಸೆ ಬರಲಿ ಅಂತಾ ಅಪ್ಪಂದಿರ ಶೇವಿಂಗ್ ಬ್ಲೇಡ್ ತಗೊಂಡು ಶೇವ್ ಮಾಡ್ಕೊಳ್ಳೂ ಟೀನೆಜ್ ಪಡ್ಡೆ ಹುಡುಗರವರೆಗೂ ಎಲ್ಲರಿಗೂ ಈ ಟಿಪ್ಸ್ ವರ್ಕೌಟ್ ಆಗುತ್ತೆ.
ಮುಖವನ್ನು ಸ್ವಚ್ಛವಾಗಿಡಿ: ಮುಖವನ್ನು ಆದಷ್ಟು ದೂಳಿನಿಂದ ಸಂರಕ್ಷಿಸಿ.ಯಾಕೆಂದ್ರೆ, ಎಲ್ಲೋ ಶೇವ್ ಮಾಡ್ದಾಗ ಗಾಯ ಆಗಿ, ಆ ಗಾಯದ ಮೇಲೆ ಧೂಳು ಕುಳಿತು, ಆ ಧೂಳು ಇರಿಟೇಶನ್ ಮಾಡಿ, ಅದನ್ನ ನೀವು ಕೆರ್ಕೊಂಡು ಕೆರ್ಕೊಂಡು ಗಲ್ಲದ ತುಂಬ ಗುಂಡಿಬಿದ್ದು, ಮುಖ ಅಸಹ್ಯ ಆಗಬೇಕಾ ಹೇಳಿ? ಅದರ ಬದಲು ಮುಖವನ್ನು ಧೂಳಿನಿಂದ ಮುಕ್ತವಾಗಿರಿಸಿ. ತಲೆಹೊಟ್ಟು ನಿವಾರಿಸುವ ಶ್ಯಾಂಪೂ ಬಳಸಿ ವಾರದಲ್ಲಿ ಎರಡು ಬಾರಿ ಗಡ್ಡವನ್ನು ತೊಳೆದು ಕೊಳ್ಳಿ. ಆಗ, ಮುಖವೂ ಕ್ಲೀನ್ ಆಗಿರುತ್ತೆ. ಅಲ್ಲದೇ ಗಡ್ಡವೂ ಪೋಗರ್ದಸ್ತಾಗಿ ಬೆಳೆಯುತ್ತೆ.
ಮೊಟ್ಟೆ: ಮೊಟ್ಟೆಯ ವೈಟ್ ನೊಂದಿಗೆ ವಿಟಮಿನ್ ಬಿ7 ಎಣ್ಣೆಯನ್ನು ಮಿಕ್ಸ್ ಮಾಡಿ ಹಚ್ಕೊಳ್ಳಿ. ಆಗ ಗಡ್ಡ, ಮೀಸೆ ಹಂತ-ಹಂತವಾಗಿ ಬೆಳೆಯುತ್ತೆ ಅಂತಾರೆ ಎಕ್ಸ್ಪರ್ಟ್ಸ. ಮೊಟ್ಟೆಯ ಬಿಳಿ ಅಂಶದಲ್ಲಿ ಅಧಿಕವಾಗಿ ಬಯೋಟಿನ್ ಇರುತ್ತೆ. ಇದು ಗಡ್ಡ, ಮೀಸೆ ಬೇಗನೇ ಬೆಳೆಯಲು ಸಹಾಯಮಾಡುತ್ತದೆ. ಸೋ , ಇದನ್ನ ನಿತ್ಯ ಟ್ರೈ ಮಾಡ್ತಾ ಬಂದರೇ, ವಾರಾಂತ್ಯದಲ್ಲಿ ಡಿಫೆರೆನ್ಸ್ ಗೊತ್ತಾಗುತ್ತೆ ಅನ್ನುವುದು ತಜ್ಞರ ಅಭಿಪ್ರಾಯ. .
ತೆಂಗಿನ ಎಣ್ಣೆ: ಮುಖದ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸೋದಕ್ಕೆ ತೆಂಗಿನ ಎಣ್ಣೆ ತುಂಬಾನೆ ಇಂಪಾರ್ಟೆಂಟ್. ತೆಂಗಿನ ಎಣ್ಣೆಯನ್ನು ರೋಸ್ಮರಿ ಎಣ್ಣೆ ಜೊತೆಗೆ ಮಿಕ್ಸ್ ಮಾಡಿ, ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಿ 15 ನಿಮಿಷ ಮಸಾಜ್ ಮಾಡಿ, ಆಮೇಲೆ ತಣ್ಣೀರಿನಲ್ಲಿ ನಿಮ್ಮ ಮುಖ ತೊಳೆದುಕೊಳ್ಳಿ. ಇಷ್ಟೆ ಸಿಂಪಲ್. ವಾರದಲ್ಲಿ ಮೂರು ಸಲ ಹೀಗೆ ಮಾಡಿದ್ರೆ, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡೋ ಅಂತಾ ಸಾಂಗ್ ಹಾಡ್ಬಹುದು
ವ್ಯಾಯಾಮ: ಇವೆಲ್ಲದರ ಜೊತೆಗೆ ಡೈಲಿ ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನೀಟ್ ಆಗಿ ನಡೆಯುತ್ತಾ ಕೂದಲು ಬೆಳವಣಿಗೆಗೆ ಪ್ರಚೋದನೆ ಸಿಗುತ್ತೆ ಅಂತಾ ಎಕ್ಸ್ಪರ್ಟ್ ಹೇಳುತ್ತಾರೆ. ಸಾಲದಕ್ಕೆ ವ್ಯಾಯಾಮ ಮಾಡಿದರೇ ಹೆಲ್ತು ಕೂಡ ಹೆಲ್ತಿಯಾಗಿರುತ್ತೆ. ಮತ್ಯಾಕೆ ತಡ ನಿತ್ಯ 20 ನಿಮಿಷ ವ್ಯಾಯಾಮ ಮಾಡಿ,ಮೇಲಿನ ಟಿಪ್ಸ್ ಫಾಲೋ ಮಾಡಿ, ಗಡ್ಡ ಮೀಸೆ ಬೆಳಸಿಕೊಳ್ಳಿ..
Comments are closed.