ಅಶೋಕ್ ಕುಮಾರ್ ಸೂರ್ಯನಾರಾಯಣ ಭಟ್
ಮಂಗಳೂರು : ಮಂಗಳೂರು ಆಕಾಶವಾಣಿ ಕೇಂದ್ರದ ನಿಲಯ ಮುಖ್ಯಸ್ಥರಾಗಿ ಶ್ರೀ ಅಶೋಕ್ ಕುಮಾರ್ ಹಾಗೂ ಕಾರ್ಯಕ್ರಮ ಮುಖ್ಯಸ್ಥರಾಗಿ ಶ್ರೀಸೂರ್ಯನಾರಾಯಣ ಭಟ್ ಸೋಮವಾರ ಅಧಿಕಾರ ವಹಿಸಿಕೊಂಡರು.
ಇದೇ ಮೇ 31 ರಂದು ಉಷಾಲತಾಸರಪಾಡಿ ಅವರು ನಿವೃತ್ತರಾಗಿದ್ದು ಅವರ ಸ್ಥಾನದಲ್ಲಿ ಈ ನೇಮಕಗಳನ್ನುಮಾಡಲಾಗಿದೆ. ಈ ಕುರಿತು ಆಕಾಶವಾಣಿ ಹಾಗೂ ದೂರದರ್ಶನದ ದಕ್ಷಿಣ ವಲಯದ ಹೆಚ್ಚುವರಿ ಮಹಾ ನಿರ್ದೇಶಕ ಡಾ. ರಾಜಕುಮಾರ್ ಉಪಾಧ್ಯಾಯರು ಆದೇಶ ನೀಡಿದ್ದಾರೆ.
ಶ್ರೀ ಸೂರ್ಯನಾರಾಯಣ ಭಟ್ ಅವರು ಮಂಗಳೂರು, ಚಿತ್ರದುರ್ಗ, ಕಾರವಾರ ಮುಂತಾದ ಆಕಾಶವಾಣಿ ಕೇಂದ್ರಗಳಲ್ಲಿ ಕಾರ್ಯಕ್ರಮ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ .ಶ್ರೀ ಅಶೋಕ್ ಕುಮಾರ್ ಅವರು ಆಕಾಶವಾಣಿ ತಿರುವನಂತಪುರಂ, ರಾಯಚೂರು, ತ್ರಿಶೂರ್,ಈಟಾನಗರ್, ಕೋಳಿಕ್ಕೋಡ, ಮಂಗಳೂರು ಮುಂತಾದ ಕೇಂದ್ರಗಳಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಬೇರೆಬೇರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
Comments are closed.