ಕರಾವಳಿ

ಕುಂದಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷರಾಗಿ ನಿರಂಜನ್ ಹೆಗ್ಡೆ ಆಯ್ಕೆ

Pinterest LinkedIn Tumblr

ಕುಂದಾಪುರ: ಕುಂದಾಪುರದ ಬಾರ್ ಅಸೋಸಿಯೇಶನ್‍ಗೆ (ವಕೀಲರ ಸಂಘ) ನಡೆದ ಚುನಾವಣೆಯಲ್ಲಿ ನಿರಂಜನ್ ಹೆಗ್ಡೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಹಂದೆ ಆಯ್ಕೆಗೊಂಡಿದ್ದಾರೆ.

ಶುಕ್ರವಾರ ಕುಂದಾಪುರ ಬಾರ್ ಅಸೋಸಿಯೇಶನ್‍ಗೆ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ನಿರಂಜನ್ ಹೆಗ್ಡೆ ಹಾಗೂ ಕೆ.ಸಿ ಶೆಟ್ಟಿ ಸ್ಪರ್ಧಿಸಿದ್ದರು.ಒಟ್ಟು 232 ಮತಗಳಲ್ಲಿ 223 ಮತಗಳು ಚಲಾಯಿಸಲ್ಪಟ್ಟಿದ್ದವು. 9 ಮತಗಳಿಂದ ನಿರಂಜನ್ ಹೆಗ್ಡೆ ಗೆಲುವು ಸಾಧಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರಮೋದ್ ಹಂದೆ ಮತ್ತು ಸ್ಪರ್ಧೆ ಮಾಡಿದ್ದರು. ಪ್ರಮೋದ್ ಹಂದೆ ಅವರು 32 ಮತಗಳಿಂದ ಗೆಲುವು ಸಾಧಿಸಿದ್ದಾರೆ.

Comments are closed.