ಆರೋಗ್ಯ

ಸಣ್ಣ ಮಕ್ಕಳಲ್ಲಿ ಅಧಿಕ ರಕ್ತದೊತ್ತಡ ಉಂಟಾಗಲು ಕಾರಣಗಳು ಬಲ್ಲಿರಾ?

Pinterest LinkedIn Tumblr

ಈ ಯುಗದಲ್ಲಿ ಹೈ ಬಿ.ಪಿ ಅಥವಾ ಅಧಿಕ ರಕ್ತದೊತ್ತಡ ಎನ್ನುವುದು ಎಷ್ಟು ಸಾಮಾನ್ಯವಾಗಿದೆ ಎಂದರೆ, ಈಗಿನ ಪೀಳಿಗೆಯವರಿಗೆ ಈ ಶಬ್ದಗಳು ಏನೋ ಸಮಸ್ಯೆಯನ್ನು ತಿಳಿಸುತ್ತಿವೆ ಎಂದೇ ಭಾಸವಾಗುವುದಿಲ್ಲ. ಏಕೆಂದರೆ ಈಗಿನ ಕಾಲದಲ್ಲಿ ನಾವು ಅಳವಡಿಸಿಕೊಂಡಿರುವ ಜೀವನಶೈಲಿಯೇ ಅಂತದ್ದು. ನಮಗೆ ತಿಳಿಯದೆ ನಾವು ನಮ್ಮ ಮನಸ್ಸು ಮತ್ತು ದೇಹವನ್ನ ನಡೆಸಿಕೊಳ್ಳುವ ರೀತಿಯೇ ಇದಕ್ಕೆ ಕಾರಣವಾಗುತ್ತಿರುವುದು. ಹೌದು, ಈ ಹೈ ಬಿ.ಪಿ ಅನ್ನೋದು ಜಾಸ್ತಿ ಒತ್ತಡ, ಟೆನ್ಶನ್ ಇರುವವರಿಗೆ ಬರುವುದು ಅಲ್ಲವಾ? ಇದು ಮಕ್ಕಳಿಗೂ ಆಗುತ್ತದ? ಅವರಿಗೆ ಇದು ಉಂಟಾಗುವುದಕ್ಕೆ ಅವರಿಗೆ ಯಾವ ಚಿಂತೆಯೂ ಇರುವುದಿಲ್ಲವಲ್ಲ, ಮತ್ತೆ ಹೇಗೆ ಸಾಧ್ಯ? ಇವೆಲ್ಲ ಪ್ರಶ್ನೆಗಳಿಗೂ ಇಲ್ಲಿ ಉತ್ತರಗಳನ್ನ ನೀಡುತ್ತೇವೆ. ಓದಿ.

ಹೌದು, ಮಕ್ಕಳಲ್ಲಿಯೂ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ. ಇದು ಪೋಷಕರನ್ನ ಸಂಕಷ್ಟಕ್ಕೆ ಸಿಲುಕಿಸುತ್ತದೆ. ಆದರೆ ವಯಸ್ಕರರಲ್ಲಿ ಜೀವನಶೈಲಿ ಮತ್ತು ಕೆಲವು ದೈಹಿಕ ಪರಿಸ್ಥಿತಿಗಳಿಂದ ಹುಟ್ಟಿಕೊಳ್ಳುವ ರಕ್ತದೊತ್ತಡವು, ಮಕ್ಕಳಲ್ಲಿ ಕೇವಲ ಇತರೆ ಅರೋಗ್ಯ ಅಸ್ವಸ್ತತತೆ, ತೊಂದರೆಗಳ ಒಂದು ಗುಣಲಕ್ಷಣ ಆಗಿರುತ್ತದೆ. ಹಾಗಿದ್ದರೆ ಮಕ್ಕಳಲ್ಲಿ ಅಧಿಕ ರಕ್ತದೊತ್ತಡ ಉಂಟುಮಾಡುವ ಸಂಗತಿಗಳಾದರೂ ಏನು?

ಮಕ್ಕಳಲ್ಲಿ ಅಧಿಕ ರಕ್ತದೊತ್ತಡ ಉಂಟಾಗಲು ಕಾರಣಗಳು :
೧. ಮಕ್ಕಳಲ್ಲಿ ಅಧಿಕ ರಕ್ತದೊತ್ತಡವು ಕೆಲವೊಂದು ಜನ್ಮಜಾತ ಕಾಯಿಲೆಗಳಿಂದ ಕಾಣಿಸಿಕೊಳ್ಳಬಹುದು. ಉದಾಹರಣೆಗೆ ಪೇಟೆಂಟ್ ಡಕ್ಟ್ ಆರ್ಟರಿಯೋಸಸ್, ಬ್ರಾಂಕೊಪಲ್ಮನರಿ ಡಿಸ್ಪ್ಲಾಸಿಯಾ, ಇತರೆ.
೨. ಕುಟುಂಬದ ಹಳೆಯ ಪೀಳಿಗೆಗಳಿಂದಲೂ ಕಾಣಿಸಿಕೊಂಡು ಬಂದಿರುವ ಹೈಪರ್ ಟೆನ್ಶನ್.
೩. ಕೆಲವು ಔಷಧಿಗಳ ಅಡ್ಡ ಪರಿಣಾಮಗಳು ರಕ್ತದೊತ್ತಡವನ್ನ ಹೆಚ್ಚಿಸುತ್ತದೆ.
೪. ಅನುವಂಶಿಕವಾಗಿ ಬಂದಿರುವ ಥೈರಾಯಿಡ್ ಸಮಸ್ಯೆ.
೫. ಮಗುವಿನ ದೇಹದಲ್ಲಿರುವ ಗಡ್ಡೆಗಳು ಕೂಡ ಅಧಿಕ ರಕ್ತದೊತ್ತಡ ಉಂಟುಮಾಡಬಹುದು.

ಮಕ್ಕಳಲ್ಲಿ ಅಧಿಕ ರಕ್ತದೊತ್ತಡದ ಲಕ್ಷಣಗಳು :
ನಿಮ್ಮ ಮಗುವು ಹೈಪರ್ ಟೆನ್ಶನಿನ ಲಕ್ಷಣವನ್ನು ಪ್ರದರ್ಶಿಸುವುದಿಲ್ಲ. ಆದರೆ ರಕ್ತದೊತ್ತಡಕ್ಕೆ ಸಂಬಂಧಿಸಿದ ಕೆಲವೊಂದು ಲಕ್ಷಣಗಳು ಈ ರೀತಿ ಮಗುವಿನಲ್ಲಿ ಗೋಚರವಾಗಬಹುದು.
೧. ಮಗುವಿನ ಚರ್ಮದ ಬಣ್ಣ ನೀಲಿ ಬಣ್ಣಕ್ಕೆ ತಿರುಗುವುದು.
೨. ಜೋರಾಗಿ ಉಸಿರಾಡುವುದು.
೩. ಸರಿಯಾಗಿ ಬೆಳವಣಿಗೆ ಆಗದಿರುವುದು ಮತ್ತು ತೂಕ ಹೆಚ್ಚಿಸಿಕೊಳ್ಳಲು ಕಷ್ಟ ಆಗುವುದು.
೪. ಪದೇ ಪದೇ ಮೂತ್ರನಾಳದಲ್ಲಿ ಸೋಂಕು ಉಂಟಾಗುವುದು.
೫. ಮೈ, ಮುಖ ಬಿಳಿಚಿಕೊಂಡಂತೆ ಆಗುವುದು.

ಈ ಕೆಳಗಿನ ಲಕ್ಷಣಗಳು ಮಕ್ಕಳಲ್ಲಿ ತುಂಬಾ ಹೆಚ್ಚು ಅಧಿಕ ರಕ್ತದೊತ್ತಡ ಇರುವುದನ್ನು ಸೂಚಿಸುತ್ತವೆ
೬. ಮಗು ತುಂಬಾ ಬೇಗ ಸಿಟ್ಟು-ಸಿಡುಕು ತೋರಿಸುವುದು.
೭. ವಾಕರಿಕೆ.
೮. ರೋಗಗ್ರಸ್ತವಾಗುವಿಕೆಗಳು.
೯. ಉಸಿರಾಟಕ್ಕೆ ತೊಂದರೆ ಆಗುವುದು.

ಪೋಷಕರಾದ ನೀವು ನಿಮ್ಮ ಮಗುವಿನಲ್ಲಿ ಇಲ್ಲಿನ ಯಾವುದಾದರು ಲಕ್ಷಣಗಳನ್ನ ಕಂಡರೆ ಬೆಚ್ಚಿ ಬೀಳುವುದು ಸಹಜ. ಆದರೆ ಅದಕ್ಕಿಂತ ಮುಖ್ಯವಾದದ್ದು ಎಂದರೆ ಅದು ನೀವು ದೃತಿಗೆಡದೆ, ನಿಮ್ಮ ತಾಳ್ಮೆ ಕಾಯ್ದುಕೊಂಡು ನಿಮ್ಮ ಮಗುವಿಗೆ ಸರಿಯಾದ ವೈದ್ಯಕೀಯ ಸಹಾಯ ದೊರಕಿಸಿ ಕೊಡುವುದು. ವೈದ್ಯರ ಚಿಕಿತ್ಸೆಯಿಂದ ನಿಮ್ಮ ಮಗುವು ಸಹಜ ಬದುಕನ್ನ ತನ್ನದಾಗಿಸಿಕೊಳ್ಳಬಹುದು.

Comments are closed.