ಕರ್ನಾಟಕ

ಸಾವನ್ನಪ್ಪಿದವರ ಕೊರೊನಾ ಪತ್ತೆ ಪರೀಕ್ಷೆ ನಿಲ್ಲಿಸಿಲ್ಲ – ಆರೋಗ್ಯ ಇಲಾಖೆ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಫ್ಲೂ ಮಾದರಿಯ ಸೋಂಕು ಮತ್ತು ಉಸಿರಾಟದ ತೀವ್ರ ತೊಂದರೆ ಹೊಂದಿದ ವ್ಯಕ್ತಿಗಳು ನಿಧನರಾದರೆ ಕೋವಿಡ್‌-19 ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಕ್ರಮವನ್ನು ಮುಂದುವರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಆರೋಗ್ಯ ಇಲಾಖೆಯ ಜೂನ್‌ 8 ರಂದು ಪ್ರಕಟಿಸಿದ ಪರಿಷ್ಕೃತ ಪರೀಕ್ಷಾ ಮಾರ್ಗಸೂಚಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿರಲಿಲ್ಲ. ಇದರಿಂದಾಗಿ ಗೊಂದಲ ಉಂಟಾಗಿದ್ದು, ಈ ಮಾದರಿಯಲ್ಲಿ ಪರೀಕ್ಷೆ ಮಾಡುವುದನ್ನು ಕೈ ಬಿಡಲಾಗಿದೆಯೇ ಎಂಬ ಅನುಮಾನ ಉಂಟಾಗಿತ್ತು ಎಂದು ಇಲಾಖೆ ಸ್ಪಷ್ಟನೆ ನೀಡಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ‌ಮಾರ್ಗಸೂಚಿಯು ಐಎಲ್‌ಐ (ಫ್ಲೂ ಮಾದರಿ ಸೋಂಕು) ಮತ್ತು ಸಾರಿ (ತೀವ್ರ ಉಸಿರಾಟದ ತೊಂದರೆ) ಪ್ರಕರಣಗಳನ್ನು ಕಡ್ಡಾಯವಾಗಿ ಪರೀಕ್ಷೆಗೊಳಪಡಿಸುವ ಕುರಿತು ಹಿಂದೆಯೇ ತಿಳಿಸಿದೆ. ಕೊರೊನಾ ಪರೀಕ್ಷೆಗೆ ಸಂಬಂಧಿಸಿದಂತೆ ಈ ಹಿಂದೆ ಹೊರಡಿಸಿದ್ದ ಸುತ್ತೋಲೆಯಲ್ಲಿ ಐಎಲ್ಐ ಹಾಗೂ ಸಾರಿ ತೊಂದರೆ ಹೊಂದಿರುವವರು ನಿಧನರಾದರೆ 6 ಗಂಟೆಗಳೊಳಗೆ ಗಂಟಲ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಬೇಕು ಎಂದು ಸೂಚಿಸಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

Comments are closed.