ಪೀಣ್ಯ ದಾಸರಹಳ್ಳಿ: ಐದು ವರ್ಷದ ಪ್ರೀತಿಗೆ ಯೂಟರ್ನ್ ಹೊಡೆದ ಹುಡಿಗೆಗೆ ಮಾರಣಾಂತಿಕ ಹಲ್ಲೆ ನಡೆದಿದೆ. ಮಾಜಿ ಪ್ರಿಯಕರ, ಆಪಘಾತದ ನಾಟಕವಾಡಿ ಯುವತಿಯ ಪೋಷಕರಿಗೆ ಕರೆ ಮಾಡಿ ಆಸತ್ರೆಗೆ ಸೇರಿಸುವಂತೆ ತಿಳಿಸಿದ, ಆದರೆ ಯುವತಿ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಸಾವು ಬದುಕಿನ ನಡುವೆ ನರಳಾಡುತ್ತಿದ್ದಾಳೆ.
ಆರ್ಕಿಟೆಕ್ರ್ಚ ಎಂಜಿನಿಯರಿಂದ ಪದವಿ ಮುಗಿಸಿ, ತಂದೆ ಖರೀದಿಸಿದ್ದ ಸೈಟ್ನಲ್ಲಿ ಮನೆ ಕಟ್ಟಿ ಜೀವನ ಕಟ್ಟುವ ಆಸೆಯಲ್ಲಿದ್ದ ಯುವತಿ ಇಂದು ಸಾವು ಬದುಕಿನ ನಡುವೆ ಆಸ್ಪತ್ರೆಯ ಐಸಿಯುನಲ್ಲಿ ನರಳಾಡುತ್ತಿದ್ದಾಳೆ. 23 ವರ್ಷದ ಮೋನಿಕ ಬೆಂಗಳೂರಿನ ಸಿಡೆದಹಳ್ಳಿ ನಿವಾಸಿ, ಸೋಲದೇವನಹಳ್ಳಿ ರಸ್ತೆಯ ಆಚಾರ್ಯ ಕಾಲೇಜಿನಲ್ಲಿಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು.
ಕಳೆದ ಐದು ವರ್ಷದ ಹಿಂದೆ ಚಿಕ್ಕಬಾಣಾವಾರದ ನಿವಾಸಿ ಬಬೀತ್ ಜೊತೆ ಪ್ರೇಮಾಂಕುರವಾಗಿದೆ. ಕಳೆದ ಐದು ವಷಗಳಲ್ಲಿನ ಪ್ರೀತಿಗೆ ಯುವತಿ ಮೋನಿಕ ಯೂಟರ್ನ್ ಹೊಡೆದು ಬಬಿತ್ ಸ್ನೇಹಿತ ರಾಹುಲ್ ಜೊತೆ ಪ್ರೀತಿ ಶುರುವಾಗಿತ್ತು. ಕಳೆದ ಆರು ತಿಂಗಳಿನಿಂದ ರಾಹುಲ್ ಜೊತೆ ಮೋನಿಕ ಓಡಾಡಿಕೊಂಡಿದ್ದಳು, ಮೋನಿಕ ಭಾನುವಾರ ಸಂಜೆ ರಾಹುಲ್ ಮನೆಗೆ ಪಾರ್ಟಿಗೆಂದು ತೆರಳಿದ್ದಾಗ ಅಲ್ಲಿಗೆ ಬಂದ ಬಬಿತ್ ಮೋನಿಕಾಳ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲಿಂದ ಬಬಿತ್ ಮನೆಗೆ ಮೋನಿಕಾಳನ್ನು ಕರೆತಂದು ಅಲ್ಲಿಯು ಸಹ ಮನಸೋ ಇಚ್ಚೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಮೋನಿಕಾ ತಂದೆಗೆ ಕರೆ ಮಾಡಿ ನಿಮ್ಮ ಮಗಳಿಗೆ ಅಪಘಾತವಾಗಿದೆ, ಮನೆಯ ಬಳಿ ಇದ್ದಾಳೆ ಬನ್ನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಾನೆ. ತಕ್ಷಣ ಸ್ಥಳಕ್ಕೆ ಮೋನಿಕಾ ಪೋಷಕರು ಹೋಗಿ ಸಪ್ತಗಿರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಈ ಎಲ್ಲಾ ಪ್ರಕರಣಗಳು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಮುಂದಾಗಿದ್ದು ಘಟನೆಯ ಸತ್ಯಾಸತ್ಯತೆ ಬೆಳಕಿಗೆ ತರಬೇಕಿದೆ.
Comments are closed.