ಮಂಗಳೂರು ಜೂನ್ 12 : ಕರ್ನಾಟಕ ಸರ್ಕಾರ ಆಯುಷ್ ಇಲಾಖೆ ರೋಗನಿರೋಧಕ ಶಕ್ತಿ ವೃದ್ಧಿಸುವಂತಹ ಆಯುಷ್ ಔಷಧಿಗಳನ್ನು ವಿತರಿಸುವ ಕಾರ್ಯಕ್ರಮವು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ರೆಸಿಡೆನ್ಸ್ ಮೆಡಿಕಲ್ ಆಫೀಸರ್ ಡಾ.ಜೂಲಿಯಾನಾ ಸಲ್ಡಾನಾ ವೆನ್ಲಾಕ್ ಆಸ್ಪತ್ರೆಯ ಡಿ ಗ್ರೂಪ್ ನೌಕರರಿಗೆ ಆಯುಷ್ ಕಷಾಯ ಚೂರ್ಣ, ಸಂಶಮನಿ ವಟಿ, ಆರ್ಕೆ ಅಜೀಬ್ ಔಷಧಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ವಿದ್ಯಾ , ಆಶಾ, ರತ್ನಾಕರ್ , ತುಕ್ರಪ್ಪ ಆಯುಷ್ ವೈದ್ಯಾಧಿಕಾರಿಗಳಾದ ಡಾ: ಜಾಹಿದ್ ಹುಸೈನ್, ಡಾ. ಶೋಭಾರಾಣಿ, ಮತ್ತಿತರು ಉಪಸ್ಥಿತರಿದ್ದರು.
Comments are closed.