ಕರ್ನಾಟಕ

ವಿಜಯಪುರದಲ್ಲಿ ಮುಖ್ಯ ಪೇದೆ ಸೇರಿ 6 ಜನರಿಗೆ ಪಾಸಿಟಿವ್

Pinterest LinkedIn Tumblr


ವಿಜಯಪುರ: ಗುಮ್ಮಟ ನಗರಿಯಲ್ಲಿ ಕೊರೊನಾ ಪಾಸಿಟಿವ್ ಹಾವಳಿ ಮುಂದುವರಿದಿದೆ. ಶನಿವಾರ ಮತ್ತೆ ಜಿಲ್ಲೆಯ 6 ಜನರಿಗೆ ಸೋಂಕು ದೃಢಪಟ್ಟಿದೆ.

ಈ ಪೈಕಿ ಕಂಟೇನ್ಮೆಂಟ್‌ ಪ್ರದೇಶದಲ್ಲಿ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಮುಖ್ಯ ಪೇದೆಗೂ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಕೊರೊನಾ ಪಾಸಿಟಿವ್ ಸೋಂಕಿತರ ಸಂಖ್ಯೆ 228ಕ್ಕೇರಿದಂತಾಯಿತು.

ಕಂಟೇನ್ಮೆಂಟ್‌ ಪ್ರದೇಶದಲ್ಲಿ 46 ವರ್ಷದ ವರ್ಷದ ಮುಖ್ಯ ಪೇದೆಯಾಗಿ ಕೆಲಸ ಮಾಡಿದ್ದರು. ಅವರು ಸೇರಿದಂತೆ ಮಹಾರಾಷ್ಟ್ರದಿಂದ ಬಂದಿರುವ ಇಬ್ಬರಿಗೆ ಹಾಗೂ ಕಂಟೇನ್ಮೆಂಟ್‌ ಪ್ರದೇಶದ ಮೂವರು ಸೇರಿದಂತೆ 9 ವರ್ಷದ ಬಾಲಕನಿಗೂ ಸೋಂಕು ದೃಢವಾಗಿದೆ.

ಮುಖ್ಯ ಪೇದೆ ಪಿ.ನಂ. 6586, ಮಹಾರಾಷ್ಟ್ರದಿಂದ ಬಂದಿರುವ ಪಿ ನಂ. 6584 ಎಂದು ಗುರುತಿಸಲಾದ 50 ವರ್ಷದ ಪುರುಷ ಸೇರಿದಂತೆ 6 ಜನರಿಗೆ ಸೋಂಕು ದೃಢಪಟ್ಟಿದೆ.

ಇವರೆಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ 70 ಜನ ಸೋಂಕಿತರಿಗೆ ಚಿಕಿತ್ಸೆಗೆ ನೀಡಲಾಗುತ್ತಿದೆ. ಶನಿವಾರ ಐವರು ಸೇರಿದಂತೆ ಇಲ್ಲಿಯವರೆಗೆ 152 ರೋಗಿಗಳು ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ತಿಳಿಸಿದ್ದಾರೆ.

Comments are closed.