ಅಂತರಾಷ್ಟ್ರೀಯ

ಜಗತ್ತಿನಾದ್ಯಂತ ಕೊರೋನಾ ಅಟ್ಟಹಾಸ; 4,31000 ಮಂದಿ ಸಾವು-7.8 ಮಿಲಿಯನ್ ಗಡಿ ದಾಟಿದ ಸೋಂಕಿತರ ಸಂಖ್ಯೆ

Pinterest LinkedIn Tumblr

ಜಿನಿವಾ: ಜಗತ್ತಿನಾದ್ಯಂತ ಮಾರಕ ಕೊರೋನಾವೈರಸ್ ಅಟ್ಟಹಾಸ ಮುಂದುವರೆದಿದ್ದು, ಈವರೆಗೂ ಸೋಂಕಿನಿಂದ 4,31000 ಮಂದಿ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 7.8 ಮಿಲಿಯನ್ ಗಡಿ ದಾಟಿದೆ.

ಸೋಂಕಿತರ ಸಂಖ್ಯೆ ಸತತವಾಗಿ ಏರಿಕೆಯಾಗುತ್ತಲೇ ಇದ್ದು, ಕಳೆದ ದಿನ 1 ಲಕ್ಷದ 32 ಸಾವಿರದ 581 ಸೋಂಕು ಪ್ರಕರಣ ಹೆಚ್ಚಳದೊಂದಿಗೆ ಸೋಂಕಿತರ ಸಂಖ್ಯೆ 7,823, 289ಕ್ಕೆ ಏರಿಕೆ ಆಗಿದೆ.

ಕಳೆದ 24 ಗಂಟೆಗಳಲ್ಲಿ ವಿಶ್ವದಾದ್ಯಂತ 3911 ಮಂದಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 431,541 ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.

ಅಮೆರಿಕಾದಲ್ಲಿ 3.7 ಮಿಲಿಯನ್ ಜನರಿಗೆ ಕೊರೋನಾವೈರಸ್ ತಗುಲಿರುವುದು ದೃಢಪಟ್ಟಿದೆ.

Comments are closed.