ನಿಮ್ಮ ಮಗುವಿನ ವಿಶೇಷ ದಿನದಂದು, ಅವನ ಸ್ನೇಹಿತರು ಮತ್ತು ಕುಟುಂಬವನ್ನು ಆಹ್ವಾನಿಸಿ, ನಿಮ್ಮ ಮಗುವಿನ ಹುಟ್ಟಿದ ದಿನವನ್ನು ಹಬ್ಬವನ್ನಾಗಿಸಲು ಹೊರಟ ನಿಮಗೆ,ಬಂದ ಮಕ್ಕಳ ಅತ್ಯಂತ ಸಭ್ಯ ಹಾಗೂ ನಾಗರಿಕ ನಡವಳಿಕೆಗಳನ್ನು ನೋಡಿ ಹೆಮ್ಮೆಪಟ್ಟು ಕೊಳ್ಳುತ್ತಿರುವಾಗಲೇ, ಕೇಕ್ ಕತ್ತರಿಸಿ ತಿನ್ನಲಾಗುವ ಸಮಯದಲ್ಲಿ, ಸಿಹಿತಿಂಡಿಗಳನ್ನು ಮತ್ತು ಪಾನೀಯಗಳನ್ನು ಕಂಡು ಪುಟ್ಟ ರಾಕ್ಷಸರಂತೆ ಅವರ ವರ್ತನೆಗಳು ಬದಲಾಗುವುದನ್ನು ನೋಡಿ ಆಶ್ಚರ್ಯವಾಗದೇ ಇರದಿರಲಾಗದು.
ಹೀಗಾಗಿ, ಮಧುರ ವಸ್ತುಗಳ ಸೇವನೆಯು ಮಕ್ಕಳ ಮೇಲೆ ಪ್ರಭಾವ ಬೀರಿ ಅವರನ್ನು ಹೈಪರ್ ಆಕ್ಟೀವ್ ಆಗಿಸುತ್ತದೆ ಎಂದು ಹೆಚ್ಚಿನ ಪೋಷಕರು ನಂಬುತ್ತಾರೆ . ಆದರೆ ಸತ್ಯವಾಗಿ ಇದು ವಾಸ್ತವ ವಿರುದ್ಧವಾಗಿದೆ. ಸಕ್ಕರೆ ವಾಸ್ತವವಾಗಿ ಮಕ್ಕಳಲ್ಲಿ ಯಾವುದೇ ರೀತಿಯ ಹೈಪರ್ ಆಕ್ಟಿವ್ ನಡವಳಿಕೆಯನ್ನು ಪ್ರಚೋದಿಸುವುದಿಲ್ಲ ಎಂದು ಸಂಶೋಧನೆಯಿಂದ ಸಾಬೀತಾಗಿದೆ; ವಾಸ್ತವವಾಗಿ, ಸಕ್ಕರೆಯು ಪೋಷಕರ ಮೇಲೆ ಪರಿಣಾಮ ಬೀರಬಹುದು!
ಪೋಷಕರ ಈ ರೀತಿಯ ಪೂರ್ವಾಗ್ರಹ ಪೀಡಿತ ಮನೋಧರ್ಮದ ಕಾರಣವನ್ನು ವಿಶ್ಲೇಷಿಸೋಣ.ಪೋಷಕರ ದೃಷ್ಟಿಕೋನವೂ ಇದಕ್ಕೆ ಕಾರಣವಾಗಿರಬಹುದು.ಹುಟ್ಟುಹಬ್ಬದ ಆಚರಣೆಗಳು, ಹ್ಯಾಲೋವೀನ್ ಅಥವಾ ಇತರ ಸಂದರ್ಭಗಳಲ್ಲಿ ಎಲ್ಲಾ ಕಡೆಗಳಲ್ಲೂ ಸಿಹಿತಿಂಡಿಗಳು ಮುಕ್ತವಾಗಿ ಹರಿಯುತ್ತದೆ. ಈ ಸಂದರ್ಭಗಳಲ್ಲಿ, ಮಕ್ಕಳ ಉತ್ಸಾಹಕ್ಕೆ ಸೀಮೆಯಿಲ್ಲದಂತಾಗುತ್ತದೆ. ತಾವು ಸೇವಿಸಿದ ಸಿಹಿತಿಂಡಿಗಳ ಸೇವನೆಯಿಂದ ಮಕ್ಕಳಲ್ಲಿ ಉತ್ಸಾಹ ತುಂಬುತ್ತದೆಯೆಂದು ಪಾಲಕರು ನಂಬಿದ್ದಾರೆಂದು ಸಂಶೋಧಕರು ಹೇಳುತ್ತಾರೆ.
1990ರ ದಶಕದಲ್ಲಿ ಮಕ್ಕಳ ಮೇಲೆ ಸಕ್ಕರೆಯ ಪ್ರಭಾವವನ್ನು ಸಂಶೋಧಿಸಿದ ಒಕ್ಲಹಾಮಾ ವಿಶ್ವವಿದ್ಯಾಲಯದ ,ಆರೋಗ್ಯ ವಿಜ್ಞಾನ ಕೇಂದ್ರದ ಮಕ್ಕಳ ಅಭಿವೃದ್ಧಿ ಮತ್ತು ವರ್ತನೆಯ ಮುಖ್ಯಸ್ಥರಾದ, ಮಕ್ಕಳ ತಜ್ಞರಾದ ಡಾ. ಮಾರ್ಕ್ ವೊಲ್ರೈಚ್‍ರವರು ” ಪೋಷಕರು ತಮ್ಮ ಕಲ್ಪನೆಗಳನ್ನು ಇಂತಹ ಹಿನ್ನೆಲೆಗಳಿಂದ ಅಳೆಯುವುದರಿಂದ, ತಮ್ಮ ತಪ್ಪು ಕಲ್ಪನೆಗಳಲ್ಲೇ ದೃಢವಾಗಿದ್ದಾರೆಂದು ಅಂದಾಜಿಸಿದ್ದಾರೆ.
ನಿಶ್ಯಕ್ತಿಯನ್ನು ಅನುಭವಿಸುವವರಿಗೆ, ತಮ್ಮ ಚೈತನ್ಯವನ್ನು ಮತ್ತು ತಮ್ಮ ಶಕ್ತಿಯನ್ನು ಮರಳಿಗಳಿಸಲು ಗ್ಲುಕೋಸ್ ಪಾನೀಯವನ್ನು ನೀಡುತ್ತಾರೆ. ಆದರೆ ಸಾಮಾನ್ಯ ವ್ಯಕ್ತಿಯೊಬ್ಬನಿಗೆ ಸಕ್ಕರೆ ನೀಡುವ ಮೂಲಕ ಅವರನ್ನು ಶಕ್ತಿವಂತ ಅಥವಾ ಹೈಪರ್ ಆಕ್ಟಿವ್ ಆಗಿರಿಸಬಹುದು ಎಂದು ಅರ್ಥವಲ್ಲ. ಬುದ್ಧಿವಂತನಾದ ನಮ್ಮ ಶರೀರವು ಅಗತ್ಯವಿದ್ದಾಗ ಮಾತ್ರ ಸಕ್ಕರೆಯನ್ನು ಊಪಯೋಗಿಸಿ, ಅನಗತ್ಯವಾದುದನ್ನು ಭವಿಷ್ಯದ ಬಳಕೆಗಾಗಿ ಕಾಯ್ದಿರಿಸುತ್ತದೆ. ಆದ್ದರಿಂದ ಸಕ್ಕರೆಗಳು ಮಕ್ಕಳಲ್ಲಿ ಹೈಪರ್ ಆಕ್ಟಿವಿಟಿಗೆ ಕಾರಣವಾಗದಿದ್ದರೂ, ಕೊಬ್ಬಿನ ಶೇಖರಣೆಯಿಂದ ಸ್ಥೂಲಕಾಯತೆಯನ್ನು ಉಂಟುಮಾಡಬಹುದು.
ನಿಮ್ಮ ಮನಶ್ಶಾಸ್ತ್ರವು ಕೂಡಾ ಕೆಲವು ವಿಷಯಗಳನ್ನು ನೀವು ನಂಬುವಂತೆ ಮಾಡಲು ಪ್ರೇರೇಪಿಸುತ್ತದೆ. ೧೯೯೪ರಲ್ಲಿ,ಅಸಹಜ ಮಕ್ಕಳ ಮನಶ್ಶಾಸ್ತ್ರಜ್ಞರ ತಂಡವೊಂದು ಸುಮಾರು 35 ಮಕ್ಕಳಿಗೆ ಕೃತಕ ಸಿಹಿಕಾರಕಗಳೊಂದಿಗೆ ಪಾನೀಯಗಳನ್ನು ನೀಡಿತು. ಇದರಲ್ಲಿ ಕೇವಲ ಅಮೈನೊ ಆಮ್ಲಗಳಾಗಿದ್ದು, ಪಾನೀಯವು ಸಕ್ಕರೆ ಎಂದು ಅರ್ಧದಷ್ಟು ತಾಯಂದಿರಿಗೆ ತಿಳಿಸಲಾಯಿತು. ಸಮೀಕ್ಷೆ ನಡೆಸಿದಾಗ, ತಾಯಂದಿರು ತಮ್ಮ ಮಕ್ಕಳು ಹೆಚ್ಚು ಹೈಪರ್ಟಿವ್ ಆಗಿದ್ದರು ಎಂದು ವರದಿ ನೀಡಿದರು.
ಮಕ್ಕಳಿಗೆ ಸಕ್ಕರೆ ಪಾನೀಯ ನೀಡಲಾಗಿದೆಯೆಂದು ನಂಬಿದ ತಾಯಿಯಂದಿರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆದು ಅವರನ್ನು ವಿಮರ್ಶಿಸ ಹತ್ತಿದರು. ಇದನ್ನು ಮನಶ್ಶಾಸ್ತ್ರಜ್ಞರು “ಪ್ಲಾಸ್ ಬು ಇಫೆಕ್ಟ್” ಎಂದು ಕರೆಯುತ್ತಾರೆ.
ಅವರು ಮೇಲಿನ ಪ್ರಯೋಗಗಳನ್ನು (ಅಧ್ಯಯನ) ವಿವಿಧ ಸಂದರ್ಭಗಳಲ್ಲಿ ಮತ್ತು ದೀರ್ಘಾವಧಿಯ ಸಮಯದಲ್ಲಿ ನಡೆಸಿದರು. ಆದರೆ, ಫಲಿತಾಂಶಗಳು ಮಾತ್ರ ಒಂದೇ ಆಗಿತ್ತು.ಅಂತೂ ಕೊನೆಯಲ್ಲಿ, ಸಕ್ಕರೆ ಮತ್ತು ಹೈಪರ್ ಆಕ್ಟಿವಿಟಿ ನಡುವೆ ಯಾವುದೇ ವೈಜ್ಞಾನಿಕ ಸಂಬಂಧವಿಲ್ಲವೆಂದು ಸಾಬೀತು ಪಡಿಸಲಾಯಿತು. ಅದೇ ಸಮಯದಲ್ಲಿ, ಯಾವುದೇ ಇತರ ಆರೋಗ್ಯ ಕಾಯಿಲೆಗಳನ್ನು ತಡೆಗಟ್ಟುವ ಸಲುವಾಗಿ ನಿಮ್ಮ ಮಗುವು ಎಷ್ಟು ಪ್ರಮಾಣದ ಸಕ್ಕರೆ ಸೇವನೆ ಮಾಡಬೇಕೆಂಬುದನ್ನು ನೀವು ಪರೀಕ್ಷಿಸಬೇಕು.
Comments are closed.