ಕರ್ನಾಟಕ

ಶಿಕ್ಷಕಿಯ ಹೆಸರಿನಲ್ಲಿ ನಕಲಿ ಫೇಸ್​​ಬುಕ್​​ ತೆರೆದ ಕಿಡಿಗೇಡಿಗಳು

Pinterest LinkedIn Tumblr


ನೆಲಮಂಗಲ(ಜೂ. 21): ತಂತ್ರಜ್ಞಾನ ಬೆಳವಣಿಗೆ ಆಗುತ್ತಿದ್ದಂತೆ ಅದರ ಉಪಯೋಗ ಎಷ್ಟರ ಮಟ್ಟಿಗೆ ಇದೆಯೋ, ದುರುಪಯೋಗವು ಸಹ ಅಷ್ಟೆ ಇರುತ್ತದೆ. ಆಧುನಿಕ ತಂತ್ರಜ್ಞಾನದಲ್ಲಿ ಪ್ರತಿಯೊಬ್ಬರ ಸಾಮಾಜಿಕ‌ ಜಾಲತಾಣಳೊಟ್ಟಿಗೆ ಬದುಕುವುದು ಅನಿವಾರ್ಯವಾಗಿದೆ ಎಂದರೆ ತಪ್ಪಾಗಲಾರದು.

ಹೀಗಿರುವಾಗ ಕಾಲೇಜು ಉಪನ್ಯಾಸಕರ ನಕಲಿ ಫೇಸ್​ಬುಕ್ ಖಾತೆ ಸೃಷ್ಟಿಸಿ ತಮ್ಮ ವಿಧ್ಯಾರ್ಥಿಗಳಿಗೆ ಅಶ್ಲಿಲ್ಲ ಮೆಸೆಜ್ ಕಳುಹಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಶಿಕ್ಷಕಿಯೊಬ್ಬರ ಫೋಟೋ ಬಳಸಿ ಫೇಸ್‌ಬುಕ್‌ ತೆರೆಯಲಾಗಿದೆ.

ಶಿಕ್ಷಿಕಿಯ ನಕಲಿ ಖಾತೆಯಿಂದ ವಿಧ್ಯಾರ್ಥಿಗಳಿಗೆ ಅಶ್ಲೀಲವಾದ ಮೆಸೇಜ್ ಕಳುಹಿಸಿದ್ದು, ಚಾಟಿಂಗ್‌ಗೆ ಆಹ್ವಾನ ಕಳುಹಿಸಿದ್ದಾರೆ. ಅನುಮಾನ ಬಂದ ವಿಧ್ಯಾರ್ಥಿ ನೇರವಾಗಿ ಶಿಕ್ಷಕಿಗೆ ಕರೆ ಮಾಡಿ ಮಾತನಾಡಿದ್ದಾನೆ. ಆಗ ಶಿಕ್ಷಕಿಯ ಫೋಟೋ ಬಳಸಿ ನಕಲಿ ಖಾತೆ ತೆರೆದಿರುವುದು ಬೆಳಕಿಗೆ ಬಂದಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶಿಕ್ಷಕಿಗೆ ಬೇಸರವಾಗಿದ್ದು, ನೆಲಮಂಗಲ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಠಾಣೆಯಲ್ಲಿ ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದು, ನಕಲಿ ಖಾತೆ ಸೃಷ್ಟಿಸಿದ್ದವರನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದಾರೆ.

Comments are closed.