ಮೈಸೂರು(ಜೂ.23): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಳೆದೊಂದು ವಾರದಿಂದ ಮತ್ತೆ ಕೊರೋನಾ ಕೇಸುಗಳು ಹೆಚ್ಚಾಗುತ್ತಿವೆ. ಪ್ರಮುಖವಾಗಿ ಕೊರೋನಾ ಸೋಂಕಿತರೊಂದಿಗೆ ಸಂಪರ್ಕವಿಲ್ಲದ ಜನರಿಗೆ ಕೊರೋನಾ ಕಾಣಿಸಿಕೊಳ್ಳುತ್ತಿದೆ. ಈ ವಿಚಾರವೂ ಈಗ ಮೈಸೂರಿನ ಜನರಿಗೆ ಆತಂಕ ತಂದಿದ್ದು, ಕೊರೋನಾ ಸಮುದಾಯಕ್ಕೆ ಹರಡಿದೆಯಾ? ಎಂಬ ಶಂಕೆ ವ್ಯಕ್ತವಾಗಿದೆ.
ಈ ಮಧ್ಯೆಯೇ ಹಣ್ಣು ವ್ಯಾಪರಿಯೊಬ್ಬರಿಗೆ ಕೊರೋನಾ ಕಾಣಿಸಿಕೊಂಡಿದೆ. ಇವರು ಹಣ್ಣು ವ್ಯಾಪರ ಮಾಡುವಾಗ ಇಡೀ ನಗರ ಸುತ್ತಾಡಿರುತ್ತಾರೆ. ಹೀಗಾಗಿ ಮೈಸೂರಿನಲ್ಲಿ ಕೊರೋನಾ ಸೋಂಕು ಸಮುದಾಯ ಮಟ್ಟದಲ್ಲಿ ಹಬ್ಬಿರುವುದಕ್ಕೆ ಇದೇ ಸಾಕ್ಷೀನಾ ಎಂದು ಜನ ಆತಂಕಕ್ಕೀಡಾಗಿದ್ದಾರೆ.
ಇನ್ನು, ಸಾಮಾಜಿಕವಾಗಿ ಕೊರೋನಾ ಹರಡಿರುವ ಶಂಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತವೂ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಸೋಂಕಿತ ವ್ಯಾಪರಿಯೊಂದಿಗೆ ಸಂಪರ್ಕ ಹೊಂದಿದ್ದ ಎಲ್ಲರೂ ತಾವೇ ಬಂದು ನೊಂದಾಯಿಸಿಕೊಳ್ಳುವಂತೆ ಹೇಳಿದೆ.
ರಮ್ಮನಹಳ್ಳಿಯ ಹಣ್ಣಿನ ವ್ಯಾಪಾರಿಗೆ ಸೋಂಕು ತಗುಲಿರುವುದು. ಈತ ರಾಮಕೃಷ್ಣ ನಗರದ ಸಾಯಿಬಾಬಾ ದೇವಸ್ಥಾನದ ರಸ್ತೆಯಲ್ಲಿರುವ ಕುವೆಂಪು ನಗರದ ಕಾಂಪ್ಲೆಕ್ಸ್ ಹತ್ತಿರದ ಹೂಟಗಳ್ಳಿ ಸಿಗ್ನಲ್ ಬಳಿ ಹಣ್ಣಿನ ವ್ಯಾಪರ ಮಾಡಿರುತ್ತಾನೆ. ಕಳೆದ 15 ದಿನದಿಂದ ಈತನೊಂದಿಗೆ ಸಂಪರ್ಕ ಹೊಂದಿದ್ದವರ ಮಾಹಿತಿಯನ್ನು ಆರೋಗ್ಯ ಇಲಾಖೆ ಸಂಗ್ರಹಿಸುತ್ತಿದೆ.
ಮೈಸೂರಿನ ಕನಕದಾಸ ನಗರದ ನಿವಾಸಿಯೋರ್ವನಿಗೆ ಕೂಡ ಕೊರೋನಾ ಕಾಣಿಸಿಕೊಂಡಿದೆ. ಈತ ಸೋಂಕಿತ ಹಣ್ಣಿನ ವ್ಯಾಪರಿ ಓಡಾಡಿದ ಜಾಗದಲ್ಲೇ ಸುತ್ತಾಡಿರಬಹುದು. ಇಲ್ಲೇ ತರಕಾರಿ ತೆಗೆದುಕೊಂಡಿರಬಹುದು. ಹೀಗಾಗಿ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂಬ ಅನುಮಾನ ಅಧಿಕಾರಿಗಳಿಗೆ ಮೂಡಿದೆ.
ಹೀಗೆಯೇ ನಂಜನಗೂಡು ಆರ್ಪಿ ರಸ್ತೆಯ 5ನೇ ಕ್ರಾಸ್ನಲ್ಲಿದ್ದ ಮತ್ತೊಬ್ಬ ನಿವಾಸಿಗೆ ಪಾಸಿಟಿವ್ ಪತ್ತೆಯಾಗಿದೆ. ಈತನ ಟ್ರಾವೆಲ್ ಹಿಸ್ಟರಿ ತೆಗೆದುಕೊಂಡು ಸೋಂಕಿತನ ಜತೆಗೆ ಸಂಪರ್ಕ ಹೊಂದಿದ್ದವರ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ಧಾರೆ.
Comments are closed.