ಮಂಗಳೂರು, ಜೂನ್.24: ಜೂ.25 ರಿಂದ SSLC ಪರೀಕ್ಷೆಗಳನ್ನು ಸರ್ಕಾರ ನಿಗದಿಪಡಿಸಿದ್ದು, ಈ ನಿಟ್ಟಿನಲ್ಲಿ ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ್ ಅವರು, ಇಂದು ರೋಸರಿಯೋ ಶಾಲೆ, ಮಿಲಾಗ್ರಿಸ್ ಶಾಲೆ, ಗಣಪತಿ ಶಾಲೆ ಭೇಟಿ ನೀಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪೂರ್ವ ಸಿದ್ಧತೆಯ ಬಗ್ಗೆ ಮಾಹಿತಿ ಪಡೆದರು.
ಪರೀಕ್ಷೆ ಕೇಂದ್ರಗಳ ಒಳಗೆ ಹಾಗೂ ಹೊರಗೆ ಸಾಮಾಜಿಕ ಅಂತರ ,ಆರೋಗ್ಯ ನಿಗಾಕ್ಕೆ ವ್ಯವಸ್ಥೆ, ಪರೀಕ್ಷೆ ಕೇಂದ್ರದ ಗೇಟ್ ಗಳ ಬಳಿಯೇ ವಿದ್ಯಾರ್ಥಿಗಲಿಗೆ ದೇಹದ ಉಷ್ಣಾಂಶ ಪರೀಕ್ಷೆ, ಸ್ಯಾನಿಟೈ ಸರ್ ನಿಂದ ಸ್ವಚ್ಛತೆ, ಪ್ರತಿ ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯ, ಎಲ್ಲಾ ಕೊಠಡಿಗಳು ಮತ್ತು ಪೀಠೋಪಕರಣಗಳ ಸಂಪೂರ್ಣ ಸ್ಯಾನಿಟರಿ, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇದ್ದವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ, ಇವೇ ಮುಂತಾದ ಎಚ್ಚರಿಕೆಯ ಕ್ರಮಗಳನ್ನು ಶಿಕ್ಷಣ ಇಲಾಖೆಯು ಕೈಗೊಂಡಿರುವುದರ ಬಗ್ಗೆ ಮೇಯರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಸುದ್ಧಿಗಾರರ ಜೊತೆ ಮಾತನಾಡಿದ ಮೇಯರ್ ಅವರು, ಕೊರೊನ ಆತಂಕದಿಂದ ನಿಂತು ಹೋಗಿರುವ ಶೈಕ್ಷಣಿಕ ಚಕ್ರ ಹೀಗೆ ಮತ್ತೆ ತಿರುಗಲು ಹಾಗೂ ಹಳಿಗೆ ಮರಳಲು ಆರಂಭವಾಗುವುದು ಒಳ್ಳೆಯ ಸೂಚನೆ, ವಿದ್ಯಾರ್ಥಿಗಳು ಕೂಡ ಆತಂಕಿತರಾಗಿರದೆ, ಭರವಸೆ ಪಡೆದು ಆತ್ಮವಿಶ್ವಾಸದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲು ಮುಂದಾಗಬೇಕು ಎಂದು ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾಕೋರಿದರು.
Comments are closed.