ಹಿಂದು ಸಂಸ್ಕೃತಿಯಲ್ಲಿ ಒಬ್ಬರನ್ನೊಬ್ಬರು ಕಂಡಾಗ ಅಥವಾ ಭೇಟಿಯಾದಾಗ ಕೈ ಮುಗಿದು ನಮಸ್ಕಾರ ಮಾಡುವುದು ಒಂದು ಆಚಾರ ವಿಚಾರವಾಗಿದೆ ಇದರ ಹಿಂದಿನ ಅರ್ಥವೇನು ಅನ್ನೋದು ಇಲ್ಲಿದೆ ನೋಡಿ.
ಎಲ್ಲಾರಿಗೂ ಗೊತ್ತಿರುವ ಪ್ರಕಾರ ಇದರಿಂದ ಒಬ್ಬರಿಗೊಬ್ಬರು ಗೌರವ ಕೊಟ್ಟಂತಾಗುತ್ತದೆ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ. ಹೀಗೆ ಕೈ ಮುಗಿಯುವುದರಿಂದ ಎರಡೂ ಕೈಗಳ ಬೆರಳಿನ ತುದಿಗಳು ಒತ್ತಿದಂತಾಗುತ್ತವೆ, ಈ ತುದಿಗಳಲ್ಲಿ ಕಣ್ಣು. ಕಿವಿ ಮತ್ತು ಮನಸ್ಸುಗಳಿಗೆ ಸಂಬಂಧಿಸಿದ ಒತ್ತಡದ ಕೇಂದ್ರಗಳಿರುತ್ತವೆ. ಈ ಕೇಂದ್ರಗಳ ಮೇಲೆ ಒತ್ತಡ ಬೀಳುವುದರಿಂದ ಭೇಟಿಯಾದ ವ್ಯಕ್ತಿಯನ್ನು ನೆನಪಿಟ್ಟುಕೊಳ್ಳುವುದು ಸುಲಭವಾಗುತ್ತದೆ. ಅಲ್ಲದೆ ಪಾಶ್ಚಾತ್ಯರಂತೆ ಕೈ ಕುಲುಕಿದಾಗ ರೋಗಾಣುಗಳು ಒಬ್ಬರಿಂದೊಬ್ಬರಿಗೆ ಹರಡುವ ಸಾದ್ಯತೆಯೂ ಇದರಲಿಲ್ಲ.
ಪ್ರತಿಯೊಂದು ಕುಟುಂಬದಲ್ಲೂ ಎಲ್ಲಾ ಸದಸ್ಯರೂ ನಿತ್ಯವೂ ಬೆಳಿಗ್ಗೆ ಮತ್ತು ಸಂಜೆ ದೇವರಿಗೆ ನಮಸ್ಕರಿಸಬೇಕು. ಶುಭ ಕೆಲಸಗಳ ಪ್ರಾರಂಭದಲ್ಲಿ, ಯಾವುದಾದರೂ ಕಾರ್ಯವನ್ನು ಮಾಡಲು ಹೊರಗೆ ಹೋಗುವಾಗ, ಊರಿಗೆ ಹೊರಟಾಗ, ದೇವಸ್ಥಾನಗಳಿಗೆ ಹೋದಾಗ ದೇವರಿಗೆ ನಮಸ್ಕರಿಸಬೇಕು.
ನಮಸ್ಕಾರಗಳಲ್ಲಿ ನಾನಾ ವಿಧ: ಕೈ ಮುಗಿಯುವುದು, ತಲೆಬಾಗುವುದು, ಮಂಡಿಯೂರುವುದು, ಕೈಗಳ ಆಧಾರದ ಮೇಲೆ ತಲೆಯನ್ನು ಭೂಮಿಗೆ ತಗುಲಿಸಿ ನಮಸ್ಕರಿಸುವುದು, ಕೈಗಳು, ಮಂಡಿಗಳು, ಕಾಲ್ಗಳು, ಎದೆ ಮತ್ತು ಹಣೆ ಇವುಗಳು ನೆಲಕ್ಕೆ ತಗಲುವಂತೆ ನಮಸ್ಕರಿಸುವ ಸಾಷ್ಟಾಂಗ ಪ್ರಣಾಮ ಇವೆಲ್ಲವೂ ನಮಸ್ಕಾರದ ಪದ್ಧತಿಗಳೇ. ಕೆಲವರು ಎರಡೂ ಕೈಗಳನ್ನು ಮೇಲಕ್ಕೆತ್ತಿ, ಹಸ್ತಗಳನ್ನು ಜೋಡಿಸಿ ನಮಸ್ಕರಿಸುತ್ತಾರೆ. ಅವರವರ ಭಕ್ತಿ, ಶಕ್ತಿ, ಸನ್ನಿವೇಶಗಳಂತೆ ನಮಸ್ಕಾರ ಮಾಡುವುದು ಪದ್ಧತಿ.
ಇನ್ನು ಕೆಲವರು ಸಂಪ್ರದಾಯ ತಿಳಿದವರು ಎರಡೂ ಕಿವಿಗಳನ್ನು ತಮ್ಮ ಕೈಗಳಿಂದ ಹಿಡಿದು ತಲೆಬಾಗಿ ತಮ್ಮ ಗೋತ್ರಕ್ಕೆ ಕಾರಣರಾದ ಋಷಿಗಳ ಸ್ಮರಣೆಯನ್ನುಳ್ಳ ಪ್ರವರವನ್ನು ಹೇಳಿ ನಮಸ್ಕರಿಸುತ್ತಾರೆ. ಇವೆಲ್ಲವನ್ನು ಎಲ್ಲರೂ ಕಲಿತು ತಮ್ಮ ಸಂಸ್ಕಾರಗಳಿಗನುಗುಣವಾಗಿ ನಮಸ್ಕರಿಸುವುದು ಪದ್ಧತಿಯಾಗಬೇಕು. ಒಂದಂಶ ನೆನಪಿರಲಿ. ಒಂದೇ ಕೈನಿಂದ ಮಾಡುವ ನಮಸ್ಕಾರ ನಮಸ್ಕಾರ ಅಲ್ಲ. ನಮಗೆ ಹಿತಕರವೂ ಅಲ್ಲ. ಮಹರ್ಷಿ ವ್ಯಾಘ್ರಪಾದರ ಸೂಕ್ತಿ ಹೀಗಿದೆ.
Comments are closed.