ಒತ್ತಡದಲ್ಲೇ ಜೀವನವನ್ನು ಸಾಗಿಸುವ ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಆತನ ಆರೋಗ್ಯದ ಕಡೆಗೆ ಗಮನ ಹರಿಸುವುದಿಲ್ಲ. ಇಂತಹ ಒತ್ತಡಗಳ ನಡುವೆ ಆತನಿಗೆ ಮಾನಸಿಕ ನೆಮ್ಮದಿ, ಮತ್ತು ದೇಹಕ್ಕೆ ವಿಶ್ರಾಂತಿ ಬೇಕಾಗುತ್ತದೆ. ಇದಕ್ಕೆ ಉತ್ತಮವಾದ ಮಾರ್ಗ ಅಂದರೆ ಯೋಗ.
ಈ ಯೋಗದಲ್ಲಿ ಮುದ್ರೆಗಳು ಬಹುಮುಖ್ಯ ಪಾತ್ರವಹಿಸುತ್ತದೆ. ಮುದ್ರೆಗಳಲ್ಲಿ ಶೂನ್ಯ ಮುದ್ರೆಗೆ ವಿಶೇಷವಾದ ಮಹತ್ವವಿದೆ. ಶೂನ್ಯ ಮುದ್ರೆ ಮಾಡುವ ವಿಧಾನ:ಮದ್ಯಬೆರಳು ಒಳಗೆ ಬಾಗಿಸಿ ಅದರ ಉಗುರು ಮೇಲಿನ ಭಾಗಕ್ಕೆ ಹೆಬ್ಬೆರಳಿನ ಮೃದುವಾದ ಭಾಗದಿಂದ ಸ್ಪರ್ಶ ಮಾಡಬೇಕು. ಉಳಿದ ಮೂರು ಬೆರಳುಗಳು ನೇರವಾಗಿ ಇರಬೇಕು.
ಹೀಗೆ ಮಾಡುವುದರಿಂದ ಕಿವಿ ನೋವು ಮಾಯವಾಗುತ್ತದೆ. ಕಿವಿಯಿಂದ ಕೀವು ಬರುತ್ತಿದ್ದರೆ ಹಾಗೂ ಕಿವುಡತನ ನಿವಾರಣೆಯಲ್ಲಿ ಈ ಮುದ್ರೆ ಪ್ರಧಾನ ಪಾತ್ರ ವಹಿಸುತ್ತದೆ.
Comments are closed.