ಬೆಂಗಳೂರು (ಜೂನ್ 29); ಪತ್ನಿ, ಪುತ್ರಿ ಹಾಗೂ ತಂದೆಯ ಕೊರೋನಾ ಪಾಸಿಟಿವ್ ವರದಿಯಿಂದ ಕ್ವಾರಂಟೈನ್‌ಗೆ ಒಳಗಾಗಿದ್ದ ಸಚಿವ ಕೆ. ಸುಧಾಕರ್ ಕೊನೆಗೂ ಕೊರೋನಾ ದಿಂದ ಬಚಾವ್ ಆಗಿ ನಾಳೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಎಂಟು ದಿನಗಳ ಹಿಂದೆ ಸಚಿವ ಕೆ. ಸುಧಾಕರ್ ಅವರ ಪತ್ನಿ, ಪುತ್ರಿ ಹಾಗೂ ತಂದೆಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಈ ಮೂವರಿಗೂ ಕೊರೋನಾ ಪಾಸಿಟಿವ್ ಎಂದು ವರದಿ ಬಂದಿತ್ತು. ಹೀಗಾಗಿ ಸುಧಾಕರ್ ಏಳು ದಿನಗಳ ಕಾಲ ಸದಾಶಿವನಗರದ ತಮ್ಮ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದರು.
ಮನೆಯಲ್ಲೇ ಉಳಿದಿದ್ದ ಸಚಿವ ಸುಧಾಕರ್ ವೀಡಿಯೋ ಕಾನ್ಫರೆನ್ಸ್ ಮೂಲಕ ನಿತ್ಯ ತನ್ನ ಇಲಾಖೆಯ ಕಾರ್ಯಗಳ ಬಗ್ಗೆ ಮೇಲುಸ್ತುವಾರಿ ನಡೆಸಿದ್ದರು. ಅಲ್ಲದೆ ಕೊರೋನಾ ತಡೆ ಕುರಿತು ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಕೊರೋನಾ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುತ್ತಿದ್ದರು.
Comments are closed.