ಬೆಂಗಳೂರು: ರಿಯಲ್ ಎಸ್ಟೇಟ್ ವ್ಯವಹಾರ ನೆಲಕಚ್ಚಿದ ಪರಿಣಾಮ ಮತ್ತು ಸಾಲದ ಹೊರೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯಲಹಂಕ ಉಪನಗರ ಬಳಿಯ ಅನಂತಪುರ ನಿವಾಸಿ ವೆಂಕಟಪ್ಪ (54), ಇವರ ಪತ್ನಿ ನಾಗಮಣಿ (50) ಹಾಗೂ ಪುತ್ರ ರವಿ ಕುಮಾರ್(27) ಸೋಮವಾರ ಮಧ್ಯಾಹ್ನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿರಿಯ ಪುತ್ರ ಕೆಲಸಕ್ಕೆ ತೆರಳಿದ್ದಾಗ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಿರಿಯ ಪುತ್ರ ವಿವಾಹವಾಗಿ ಇದೇ ಮನೆಯಲ್ಲಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಇವರ ಪತ್ನಿ ಊರಿಗೆ ಹೋಗಿದ್ದರು. ಕಿರಿಯ ಮಗ ರವಿಕುಮಾರ್ ತಂದೆಯ ಜತೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದರು. ಇದೇ ವ್ಯವಹಾರಕ್ಕಾಗಿ ಪರಿಚಯಸ್ಥರಿಂದ 27 ಲಕ್ಷ ರೂ. ಸಾಲ ಮಾಡಿದ್ದರು. ವ್ಯವಹಾರ ನೆಲಕಚ್ಚಿದ್ದರಿಂದ ಮನನೊಂದಿದ್ದರು. ಸಾಲ ಕೊಟ್ಟವರೂ ಬೆನ್ನು ಬಿದ್ದಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Comments are closed.