ಅಲೋವೆರಾ ಅಂದರೆ ಲೋಳೆಸರ ಎನ್ನುವ ಈ ಔಷಧೀಯ ಗಿಡ ಮನುಷ್ಯನ ದೇಹಕ್ಕೆ ತ್ವಚೆಗೆ ಸಾಕಷ್ಟು ಉಪಯೋಗಕಾರಿ. ಸಾಕಷ್ಟು ಜೆಲ್ ಗಳಲ್ಲಿ, ಔಷಧಗಳಲ್ಲಿ ಈ ಆಲೋವೆರಾವನ್ನು ಬಳಸುತ್ತಾರೆ. ಸದ್ಯ ಈ ಗಿಡ ಎಲ್ಲರಿಗೂ ಚಿರಪರಿಚಿತವೇ. ಹಾಗಾದರೆ ಏನೆಲ್ಲಾ ಉಪಯೋಗಗಳು ಇವೆ ಅನ್ನೋದನ್ನು ನೋಡೋಣ ಬನ್ನಿ..
ಅಜೀರ್ಣ ಸಮಸ್ಯೆಗೆ ಈ ಅಲೋವೆರಾ ತುಂಬಾ ಉಪಯೋಗಕಾರಿ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರು ಅಲೋ ವೆರಾ ರಸವನ್ನು ಕುಡಿಯುವುದರಿಂದ ಉರಿಯೂತ ಅಥವಾ ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ. ಸಾಕಷ್ಟು ಮಂದಿ ಇದನ್ನು ಈಗಲೂ ಜೀರ್ಣಕಾರಿಗೋಸ್ಕರ ಉಪಯೋಗಿಸೋದುಂಟು.
ಇನ್ನು ಈ ಅಲೋವೇರಾ ಸುಟ್ಟಿರುವ ಗಾಯಗಳಿಗೂ ಕುಡ ರಾಮಭಾಣ. ಸದ್ಯ ಈ ಅಲೋವೇರಾದ ಲೋಳೆ ಅಥವಾ ತಿಳಿಯನ್ನು ತೆಗೆದು ಸುಟ್ಟು ಗಾಯಗಳಿಗೆ ಹಚ್ಚುವುದರಿಂದ ಗಾಯ ಬೇಗನೇ ವಾಸಿಯಾಗುತ್ತದೆ. ಅಷ್ಟೆ ಅಲ್ಲ ಈ ಗಾಯಗಳು ಕಲೆಯಾಗಿ ಉಳಿಯುವದನ್ನು ತಡೆಯುವ ಶಕ್ತಿ ಅಲೋವೇರಾಗೆ ಇದೆ.
ಸದ್ಯ ಈ ಅಲೋವೇರಾ ಕೂದಲಿಗೂ ಕೂಡ ಮುಖ್ಯವಾದ ಅಂಶವಾಗಿದೆ. ಕೊಬ್ಬರಿ ಎಣ್ಣೆ ಜೊತೆಗೆ ಅಲೋವೆರಾ ತಿಳಿಯನ್ನು ಹಾಕಿ ರಾತ್ರಿ ಹಚ್ಚಿ ಬಳಗ್ಗೆ ಕೂದಲು ತೊಳೆಯಬೇಕು.
ಹೀಗೆ ಮಾಡುತ್ತಾ ಬಂದಲ್ಲಿ ಕೂದಲು ಚೆನ್ನಾಗಿ ಬೆಳೆಯೋದರ ಜೊತೆಗೆ ತಲೆಹೋಟ್ಟು ನಿವಾರಣೆ ಕೂಡ ಆಗುತ್ತದೆ. ಇನ್ನು ಲೋಳೆಸರ ವನ್ನು ಮುಖಕ್ಕೆ ಲೇಪನ ಮಾಡಿ 15 ನಿಮಿಷ ಮಾಡುವುದರಿಂದ ಮುಖ ಕಾಂತಿಯುತವಾಗಿರುತ್ತದೆ. ಇಷ್ಟೆಲ್ಲ ಔಷಧೀಯ ಗುಣಗಳನ್ನು ಹೊಂದಿದೆ. ಮನೆಯ ಮುಂದೆ ಒಂದು ಲೋಳೆಸರ ಗಿಡವಿದ್ದರೆ ಸಾಕು ಸಾಕಷ್ಟು ರೋಗಗಳಿಗೆ ಔಷಧ ಅಂಗಡಿ ಇದ್ದಂತೆ ಸರಿ.
Comments are closed.