ಕರಾವಳಿ

ಉಡುಪಿಯಲ್ಲಿ 48 ವರ್ಷ ಪ್ರಾಯದ ಹೊಟೇಲ್ ಉದ್ಯಮಿ ಆತ್ಮಹತ್ಯೆಗೆ ಶರಣು

Pinterest LinkedIn Tumblr

ಉಡುಪಿ : ಉಡುಪಿಯ ಸಮೀಪದ ಕಡಿಯಾಳಿ ಶಿವ ಪ್ರಸಾದ್ ಹೋಟೆಲ್ ಮಾಲೀಕರಾದ ರಾಘು ಭಟ್ ಯಾನೆ ರಾಘವೇಂದ್ರ ಭಟ್ (48) ತಮ್ಮ ಸಹೋದರನ ಮನೆಯಲ್ಲಿ ಸೋಮವಾರ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಾಮಾಜಿಕ ಕಾರ್ಯಕರ್ತರಾಗಿದ್ದರು ಹಾಗೂ ಕಡಿಯಾಳಿ ಶಿವಸಾಗರ್ ಕ್ಯಾಂಟೀನ್ ಮಾಲಕರಾಗಿದ್ದರು.ಓಂ ಫ್ರೆಂಡ್ಸ್ ಎಂಬ ಯುವಕರ‌ ತಂಡದ ಮೂಲಕ ಶ್ರೀ ಕೃಷ್ಣಾಷ್ಟಮಿ ಸಂದರ್ಭದಲ್ಲಿ ಅದ್ದೂರಿ ಹುಲಿವೇಷ ಸ್ಪರ್ಧೆ ನಡೆಸಿ ಚಿರಪರಿಚಿತರಾಗಿದ್ದ ಯುವ ಉದ್ಯಮಿಯಾಗಿದ್ದರು.

ಈ ಹಿಂದೆ ಕಾಂಗ್ರೆಸ್ ನಿಂದ ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿಯ ವಿರುದ್ಧ ಕೆಲವೇ ಕೆಲವು ಮತಗಳ ಅಂತರದಿಂದ ಸೋತಿದ್ದರು. ಕೆಲ ಸಮಯದ ನಂತರ ಬಿಜೆಪಿಯನ್ನು ಸೇರ್ಪಡೆಗೊಂಡಿದ್ದರು.

ಇಂದು ಸಂಜೆ ಹಿರಿಯಡ್ಕದ ತನ್ನ ಸಹೋದರನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.