ಕರಾವಳಿ

ದ.ಕ.ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾಘಾತ -83 ಪಾಸಿಟಿವ್ ಪತ್ತೆ : ರಾಜ್ಯದಲ್ಲಿ 1,498 ಮಂದಿಯಲ್ಲಿಸೋಂಕು ಧೃಢ

Pinterest LinkedIn Tumblr

ಮಂಗಳೂರು, ಜುಲೈ.07 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಕೊರೋನಾಘಾತವಾಗಿದ್ದು 83 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಕರ್ನಾಟಕದಲ್ಲಿ ಇಂದು ಮತ್ತೆ ಒಂದೇ ದಿನ ಬರೋಬ್ಬರಿ 1,498 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಇಂದು ಸೋಂಕಿತರ ಒಟ್ಟು ಸಂಖ್ಯೆ26,815ಕ್ಕೆ ಏರಿಕೆಯಾಗಿದೆ. ದ.ಕ.ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,359ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ರಾಜ್ಯದಲ್ಲಿ ಸೋಮವಾರ ಒಂದೇ ದಿನ 1498 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಿದೆ. ಇದರಲ್ಲಿ ದ.ಕ. ಜಿಲ್ಲೆಯಲ್ಲಿ ಬರೋಬ್ಬರಿ 83 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 800, ದಕ್ಷಿಣ ಕನ್ನಡ 83, ಧಾರವಾಡ 57, ಕಲಬುರಗಿ 51, ಬೀದರ್ 51, ಮೈಸೂರು 49, ಬಳ್ಳಾರಿ 45, ರಾಮನಗರ 37, ಉತ್ತರ ಕನ್ನಡ 35, ಶಿವಮೊಗ್ಗ 33, ಮಂಡ್ಯ 29, ಉಡುಪಿ 28, ಹಾಸನ 26, ಬಾಗಲಕೋಟೆ 26, ರಾಯಚೂರು 23, ವಿಜಯಪುರ 22, ಬೆಳಗಾವಿ 20, ತುಮಕೂರು 16, ಕೊಡಗು 14, ಯಾದಗಿರಿ 10, ದಾವಣಗೆರೆ, ಕೋಲಾರ, ಹಾವೇರಿ, ಚಾಮರಾಜನಗರ ಮತ್ತು ಚಿಕ್ಕಮಗಳೂರಿನಲ್ಲಿ ತಲಾ 6, ಕೊಪ್ಪಳ 5, ಗದಗ 4, ಚಿಕ್ಕಬಳ್ಳಾಪುರ 3 ಮತ್ತು ಚಿತ್ರದುರ್ಗದಲ್ಲಿ 1 ಪ್ರಕರಣ ಪಾಸಿಟಿವ್ ಬಂದಿ

ದ.ಕ. ಜಿಲ್ಲೆಯಲ್ಲಿ ಇಂದು ಮತ್ತೆ ಹೆಚ್ಚಿದ ಸೋಂಕಿತರ ಸಂಖ್ಯೆ : ಇಂದು ಸೋಂಕಿಗೆ ಒಬ್ಬರು ಬಲಿ

ಉಳ್ಳಾಲದಲ್ಲಿ 19 ಮಂದಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ 83 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇಂದು ಓರ್ವ ವ್ಯಕ್ತಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು ಜಿಲ್ಲೆಯಲ್ಲಿ ಈವರೆಗೆ 26 ಮಂದಿ ಸಾವನ್ನಪ್ಪಿದ್ದಾರೆ.

83 ಮಂದಿಯ ಪೈಕಿ 48 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ, ಇಬ್ಬರಿಗೆ ದ್ವಿತೀಯ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿದ್ದರೆ 20 ಐಎಲ್‌ಐ ಹಾಗೂ 1 ಎಸ್‌ಎಆರ್‌ಐ ಪ್ರಕರಣವಾಗಿದೆ. ಇಬ್ಬರು ಚಿಕ್ಕಮಗಳೂರು ಜಿಲ್ಲೆಗೆ ಹೋಗಿ ಬಂದಿರುವವರಾಗಿದ್ದಾರೆ. 3 ಮಂದಿಗೆ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ.

ಇಂದು 99 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಒಟ್ಟು 683 ಮಂದಿ ಗುಣಮುಖರಾಗಿದ್ದಾರೆ. 650 ಸಕ್ರಿಯ ಕೊರೊನಾ ಪ್ರಕರಣಗಳಾಗಿವೆ. ಹಾಗೆಯೇ ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದಲ್ಲಿ ಕೊರೋನಾ ಸೋಂಕಿಗೆ 15 ಮಂದಿ ಬಲಿ :

ರಾಜ್ಯದಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ಸಂಜೆವರೆಗೆ ದೃಢಪಟ್ಟ 1,498 ಪ್ರಕರಣಗಳ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 26,815ಕ್ಕೆ ಏರಿಕೆಯಾಗಿದೆ. 15 ಸಾವಿನೊಂದಿಗೆ ಮೃತರ ಸಂಖ್ಯೆ 416ಕ್ಕೆ ಹೆಚ್ಚಳವಾಗಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ತೀವ್ರವಾಗಿ ಏರಿಕೆಯಾಗುತ್ತಲ್ಲೇ ಇದ್ದು 1,498 ಮಂದಿಗೆ ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹಾಗೆಯೇ ಇಂದು ಒಂದು ದಿನವೇ 15 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಒಟ್ಟಾರೆ ರಾಜ್ಯದಲ್ಲಿ 26,815 ಕೊರೋನ ಸೋಂಕಿತರ ಪೈಕಿ 11,098 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 571 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 416 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 15,297 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಪ್ರಮುಖ ಅಂಶಗಳು :

ಇಂದು ಕೂಡ ಕರಾವಳಿಯಲ್ಲಿ ಕೊರೋನಾ ಸ್ಪೋಟ‌

ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 83 ಮಂದಿಗೆ ಕೊರೋನಾ ಪಾಸಿಟಿವ್

ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ಪ್ರಾಥಮಿಕ ಸಂಪರ್ಕದಿಂದ 48 ಜನರಿಗೆ ಪಾಸಿಟಿವ್

ILI 20, SARI 1, ಸಂಪರ್ಕ‌ ಪತ್ತೆಯಾಗದ 3 ಮಂದಿಗೆ ಪಾಸಿಟಿವ್

ಉಳ್ಳಾಲ ರ್ಯಾಂಡಮ್ ಟೆಸ್ಟ್ ನ 3 ಜನರಿಗೆ ಕೊರೋನಾ

ಶಸ್ತ್ರಚಿಕಿತ್ಸೆ ಮಾಡೋ ಮೊದಲು ಮೂವರಿಗೆ ಕೊರೋನಾ‌ ಪಾಸಿಟಿವ್

ಹೆರಿಗೆಯ ಮೊದಲು‌ಮಾಡಿದ ಟೆಸ್ಟ್ ನಲ್ಲಿ ಓರ್ವ ಮಹಿಳೆಗೆ ಪಾಸಿಟಿವ್

ಸೆಕೆಂಡರಿ ಕಾಂಟಾಕ್ಟ್ ನಿಂದ 2 ಕೇಸ್

ಹೊರ ಜಿಲ್ಲೆಯಿಂದ ಬಂದ ಇಬ್ಬರಿಗೆ ಕೊರೋನಾ ಪಾಸಿಟಿವ್.

Comments are closed.