ಹದಿಹರೆಯದ ಹುಡುಗರ ಮತ್ತು ವ್ಯಕ್ತಿತ್ವ ಶೈಲಿಗಳ ಮತ್ತೊಂದು ಅಧ್ಯಯನದಲ್ಲಿ , ರಕ್ತದ ಪ್ರಕಾರ A ಹೆಚ್ಚು “ಮೃದು ಮನಸ್ಸಿನ” ಮತ್ತು ರಕ್ತ ವಿಧಗಳು 0, B, ಮತ್ತು AB ಗಳು ಹೆಚ್ಚು “ಕಠಿಣ-ಮನಸ್ಸು” ಎಂದು ಕಂಡುಬರುತ್ತದೆ.
ನಿಮ್ಮ ರಕ್ತದ ಗುಂಪು ನಿಮ್ಮ ವ್ಯಕ್ತಿತ್ವಕ್ಕೆ ಹೇಗೆ ಸಂಬಂಧಿಸಿದೆ ಎಂಬುದನ್ನು ತಿಳಿಯೋಣ ಬನ್ನಿ.
ರಕ್ತದ ಗುಂಪು O : ಈ ಗುಂಪಿನ ವ್ಯಕ್ತಿಗಳು ಸ್ನೇಹಪರರೂ, ತಮ್ಮ ಕರ್ತ್ಯವ್ಯವನ್ನು ಎಷ್ಟೇ ತೊಡಕುಗಳಿದ್ದರೂ ನಿರ್ವಹಿಸಿ ನಾಯಕರಾಗುವ ಗುಣಗಳನ್ನು ಹೊಂದಿರುತ್ತೀರಾ, ದೃಢ ಸಂಕಲ್ಪವುಳ್ಳವರೂ, ಅತ್ಯಂತ ಪ್ರಾಮಾಣಿಕರು, ಕುತೂಹಲ ವ್ಯಕ್ತಪಡಿಸುವ ಮತ್ತು ಸ್ವ-ಅವಲಂಬಿತ ವ್ಯಕ್ತಿತ್ವದವರು ಆಗಿರುತ್ತೀರಾ.
ಈ ಗುಂಪಿನ ರಕ್ತದ ವ್ಯಕ್ತಿಗಳು ಸಾಮಾನ್ಯವಾಗಿ ವಿಶಾಲ ಮನೋಭಾವವುಳ್ಳವರಾಗಿದ್ದು ಎಲ್ಲರೊಂದಿಗೆ ಸುಲಭವಾಗಿ ಹೊಂದಿಕೊಳ್ಳುವ ಸ್ವಭಾವವುಳ್ಳವರು. ಜನರ ಸ್ನೇಹವನ್ನು ಗೆಲ್ಲುತ್ತಾರೆ ಮತ್ತು ಅಗತ್ಯವುಳ್ಳವರಿಗೆ ತಮ್ಮ ಸಾಮರ್ಥ್ಯದ ನೆರವು ನೀಡುವ ಮೂಲಕ ಎಲ್ಲರ ಪ್ರಶಂಸೆ ಮತ್ತು ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳುತ್ತಾರೆ.
O ನಂತಹ ರಕ್ತದ ಗುಂಪುನ್ನು ಹೊಂದಿದ ವ್ಯಕ್ತಿ ಇತರ ರಕ್ತದ ಗುಂಪುಗಳಾದ ಪ್ರಕಾರ O ಅಥವಾ ಪ್ರಕಾರ ABಗೆ ಹೆಚ್ಚು ಪ್ರೇಮವಾಗಿ ಹೊಂದಿಕೊಳ್ಳುತ್ತದೆ.
ರಕ್ತದ ಗುಂಪು A : ಇವರು ತಮ್ಮ ಕರ್ತ್ಯವ್ಯಕ್ಕೆ ಪ್ರಥಮ ಆದ್ಯತೆ ನೀಡುವವರಾಗಿದ್ದು ಹೆಚ್ಚಿನ ಯಶಸ್ಸು ಪಡೆಯುತ್ತಾರೆ. ಇವರು ತಮ್ಮ ಉದ್ಯೋಗದಲ್ಲಿ ಉನ್ನತಿಯನ್ನು ಪಡೆಯಲು ತಮ್ಮ ಸಾಮರ್ಥ್ಯಕಿಂತ ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಕೆಲಸಕ್ಕೆ ಗಮನಹರಿಸುವುದರಿಂದ ಅಸಾಧ್ಯವನ್ನು ಕೂಡ ಸಾಧಿಸಿ ತೋರಿಸಬಲ್ಲರು. ಭಾವನೆಗಳಿಗೆ ಬೆಲೆ ಕೊಡುವವರು, ಸೂಕ್ಷ್ಮ ಮತ್ತು ಬುದ್ಧಿವಂತರಾಗಿರುತ್ತಾರೆ. ಬಹಳ ಸಮಯ ಕೋಪವನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಕೋಪ ಹೆಚ್ಚಾದರೆ ಇವರನ್ನು ತಡಿಯುವುದು ತುಂಬಾ ಕಷ್ಟದ ಕೆಲಸ. ಇವರು ಪರಿಪೂರ್ಣತಾವಾದಿಗಳು, ಜನರ ಮಾತುಗಳನ್ನು ಆಲಿಸುತ್ತಾರೆ ಇದರಿಂದಾಗಿ ಉತ್ತಮ ಸ್ನೇಹಿತರಾಗುತ್ತಾರೆ.
ಸಹಕಾರಿ, ಸೂಕ್ಷ್ಮ, ಬುದ್ಧಿವಂತ, ಭಾವೋದ್ರಿಕ್ತ ಮತ್ತು ಸ್ಮಾರ್ಟ್ ವ್ಯಕ್ತಿಗಳಾಗಿರುತ್ತಾರೆ, ಇತರರೊಂದಿಗೆ ಬೆರೆಯಲು ಸಾಮಾನ್ಯವಾಗಿ ಆತಂಕವನ್ನು ಎದುರಿಸುತ್ತಾರೆ , ಆದರೆ ಬಹಳ ಸಮಯ ಕೋಪವನ್ನು ಹಿಡಿದಿಟ್ಟುಕೊಳ್ಳುತ್ತಾರೆ ಆದರೆ ಒಂದು ಸಾರಿ ಸ್ಫೋಟಿಸುತ್ತಾರೆ , ಕೋಪ ಹೆಚ್ಚಿಗೆ ಇರುತ್ತೆ , ತಾಳ್ಮೆ ಕಡಿಮೆ ಅದಕ್ಕೆ ನಾಯಕತ್ವ ಸ್ಥಾನಗಳನ್ನು ಸಮರ್ಥವಾಗಿ ನಿಭಾಯಿಸದೆ ಹೋಗಬಹುದು, ಭಾವನೆಗಳಗೆ ಸಿಕ್ಕಿ ಹೆಚ್ಚು ಒತ್ತಡದಿಂದ ಬಳಲುತ್ತಿರುತ್ತಾರೆ, ನಾಲ್ಕು ಜನರು ಸಂಭ್ರಮಿಸಿ ಕೇಕೆ ಹಾಕುವ ಪಾರ್ಟಿಗಳನ್ನು ಇವರು ಇಷ್ಟಪಡುವುದಿಲ್ಲ. ಹೊಸ ಸ್ನೇಹವನ್ನು ಪಡೆಯಲು ಹಿಂದೇಟು ಇಡುತ್ತಾರೆ.
ರಕ್ತದ ಗುಂಪು B : ಈ ಗುಂಪಿನ ವ್ಯಕ್ತಿಗಳು ಸಮತೋಲಿತವಾಗಿರುತ್ತವೆ, ಸೃಜನಶೀಲರೂ, ತಮಾಷೆಯನ್ನು ಇಷ್ಟಪಡುವವರೂ, ದೂರದೃಷ್ಟಿಯುಳ್ಳವರೂ, ಇತರರ ದೃಷ್ಟಿಕೋನವನ್ನು ಸುಲಭವಾಗಿ ಅರ್ಥೈಸಿಕೊಳ್ಳುತ್ತಾರೆ, ಇನ್ನೊಂದು ಕಡೆ ಇವರು ಅನೇಕವೇಳೆ ಸವಾಲು ಎದುರಿಸಲು ಹಿಂಜರಿಯುತ್ತಿದ್ದಾರೆ. ಇತರರೊಡನೆ ಸುಲಭವಾಗಿ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾರೆ.
ಇವರು ತಮ್ಮ ಜೀವನದಲ್ಲಿ ಪ್ರೇಮಕ್ಕೆ ವಿಶೇಷವಾದ ಸ್ಥಾನವನ್ನು ನೀಡುತ್ತಾರೆ. ಮತ್ತು ಪ್ರೇಮದ ವಿಷಯದಲ್ಲಿ ಹೆಚ್ಚಿನ ತಾಳ್ಮೆ ತೋರಬೇಕಾಗುತ್ತದೆ. ಇವರು ತಮ್ಮ ಪ್ರೇಮಿಗಳನ್ನು ಅಪಾರವಾಗಿ ಪ್ರೀತಿಸುತ್ತಾರೆ.
ರಕ್ತದ ಗುಂಪು AB : ಬಹಳ ಆಕರ್ಷಕ ಮತ್ತು ಜನಪ್ರಿಯ ವ್ಯಕ್ತಿತ್ವ. ಜಾನ್ ಎಫ್. ಕೆನಡಿ, ಮರ್ಲಿನ್ ಮನ್ರೋ, ಮಿಕ್ ಜಾಗರ್, ಥಾಮಸ್ ಎಡಿಸನ್, ಬಾಬ್ ಸ್ಯಾಪ್, ಮಿಯಾವಿ, ಜಾಕಿ ಚಾನ್, ಕೆನ್ ಕಿಟಮುರಾ ಇವರೆಲ್ಲವ ರಕ್ತದ ಗುಂಪು ಕೂಡ AB.
ಈ ಗುಂಪಿನ ವ್ಯಕ್ತಿಗಳು ಆಧ್ಯಾತ್ಮಿಕತೆ ವಿಚಾರಗಳ ಕಡೆಗೆ ಗಮನ ನೀಡುತ್ತಿರುತ್ತಾರೆ, ವಿಶ್ವಾಸ ಅರ್ಹರು, ಸ್ನೇಹಪರರು, ದೂರದೃಷ್ಟಿಯುಳ್ಳವರು, ಅಪಾರ ಬುದ್ದಿವಂತರು ಮತ್ತು ತತ್ವಜ್ಞಾನಿಗಳೂ ಆಗಿರುತ್ತಾರೆ. ಇವರು ತಮಾಷೆಯನ್ನು ಇಷ್ಟಪಡುವವರೂ ತಮ್ಮ ಸುತ್ತಮುತ್ತಲಿನವರನ್ನು ನಗಿಸುತ್ತಾ ಇರುವವರೂ ಆಗಿರುತ್ತಾರೆ.
ರೊಮ್ಯಾಂಟಿಕ್ ಅಲ್ಲಿ ಹೇಳುವುದಾದರೆ, ರಕ್ತದ ಗುಂಪು AB ಇರುವವರು ABಗಳನ್ನೂ ಒಳಗೊಂಡಂತೆ ಯಾವುದೇ ರಕ್ತ ಪ್ರಕಾರದೊಂದಿಗೆ ಹೊಂದಿಕೊಳ್ಳುತ್ತಾರೆ.
Comments are closed.