ಕರಾವಳಿ

ಕುಡುಪು ಕ್ಷೇತ್ರದ ಬಗ್ಗೆ ಜಲತಾಣದಲ್ಲಿ ಹರಿದಾಡುತ್ತಿರುವ ಪ್ರಕಟಣೆ ಫೇಕ್ : ಮುಜರಾಯಿ ಇಲಾಖೆ ಸ್ಪಷ್ಟಣೆ

Pinterest LinkedIn Tumblr

ಮಂಗಳೂರು/ ಕುಡುಪು, ಜುಲೈ. 09 : ಕುಡುಪು ದೇವಸ್ಥಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರಕಟಣೆ ಬಗ್ಗೆ ಸ್ಪಷ್ಟಣೆ ನೀಡಿರುವ ಮುಜರಾಯಿ ಇಲಾಖೆಯ ಅಧಿಕಾರಿಗಳು ಇಂತಹ ಯಾವುದೇ ಪ್ರಕಟಣೆಯನ್ನು ದೇವಸ್ಥಾನದಿಂದ ನೀಡಿರುವುದಿಲ್ಲ ಎಂದು ತಿಳಿಸಿದ್ದಾರೆ.

ಜುಲೈ 25 ರ ನಾಗರಪಂಚಮಿಯಂದು ಕೊರೊನಾ ಕಾರಣದಿಂದ ಕುಡುಪು ದೇವಸ್ಥಾನದಲ್ಲಿ ಯಾವುದೇ ಸೇವೆಗಳು ಇರುವುದಿಲ್ಲ ”ಕುಡುಪು ಕ್ಷೇತ್ರದಲ್ಲಿ ಪ್ರತಿ ವರ್ಷ ಆಚರಿಸುವ ನಾಗರ ಪಂಚಮಿ ದಿನದಂದು ಅಧಿಕ ಭಕ್ತರು ಸೇರುವ ಕಾರಣದಿಂದ ಕೊರೊನಾ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಿದೆ.

ಹಾಗಾಗಿ ನಾಗರ ಪಂಚಮಿಯಂದು ಭಕ್ತಾಧಿಗಳಿಗೆ ಕ್ಷೇತ್ರಕ್ಕೆ ಭೇಟಿಗೆ ನಿರ್ಭಂಧಿಸಲಾಗಿದೆ. ಹಾಗೆಯೇ ದೇವಾಲಯದಲ್ಲಿ ಯಾವುದೇ ಸೇವೆಗಳು, ಸೇವಾ ಪ್ರಸಾದ ವಿತರಣೆ, ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆಗಳು ಇರುವುದಿಲ್ಲ. ಮುಂದಿನ ದಿನಗಳಲ್ಲಿ ಅನುಕೂಲಕರ ಪರಿಸ್ಥಿತಿ ಉಂಟಾದಾಗ ಭಕ್ತಾಧಿಗಳಿಗೆ ಸೇವೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುವುದು” ಎಂಬ ಬರಹವು ದೇವಸ್ಥಾನದಿಂದ ನೀಡಲಾದ ಪ್ರಕಟಣೆ ಎಂಬಂತೆ ಬಿಂಬಿಸಿ ಹರಿಯ ಬಿಡಲಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುಜರಾಯಿ ಅಧಿಕಾರಿಗಳು ಇಂತಹ ಯಾವುದೇ ಪ್ರಕಟಣೆ ದೇವಸ್ಥಾನದಿಂದ ನೀಡಿರುವುದಿಲ್ಲ ಎಂದು ತಿಳಿಸಿದ್ದಾರೆ.

Comments are closed.