ಅಂತರಾಷ್ಟ್ರೀಯ

ಚಲಿಸುತ್ತಿದ್ದ ವಾಹನದ ಚಾಲಕನ ಕಾಲಿನಡಿ ಇತ್ತೊಂದು ವಿಷಕಾರಿ ಹಾವು ! ಮುಂದೆ ಆತ ಮಾಡಿದ್ದೇನು…?

Pinterest LinkedIn Tumblr

ಯುವಕನೊಬ್ಬನಿಗೆ ವಾಹನ ಚಾಲನೆಯ ವೇಳೆಯೇ ವಿಷಕಾರಿ ಹಾವೊಂದು ಬಹುವಾಗಿ ಕಾಡಿದೆ. ಹೀಗಾಗಿ, ಆತ ಆ ಹಾವನ್ನು ಕೊಂದಿದ್ದ. ಈ ವಿಷಯ ಗೊತ್ತಾಗಿದ್ದು ಪೊಲೀಸರು ಈತನನ್ನು ಬೆನ್ನಟ್ಟಿಕೊಂಡು ಬಂದಾಗಲೇ…! ಪೊಲೀಸರು ಈತನನ್ನು ಬೆನ್ನಟ್ಟಿಕೊಂಡು ಬರುವುದಕ್ಕೂ ಒಂದು ಕಾರಣ ಇತ್ತು…!

ಆ ವಾಹನ ಗಂಟೆಗೆ ನೂರು ಕಿಲೋ ಮೀಟರ್ ವೇಗಕ್ಕಿಂತಲೂ ಹೆಚ್ಚಾಗಿ ಸಾಗುತ್ತಿತ್ತು. ಇದನ್ನು ಕಂಡ ಪೊಲೀಸರು ಆ ವಾಹನವನ್ನು ಬೆನ್ನಟ್ಟಿಕೊಂಡು ಬಂದು ತಡೆದಿದ್ದರು… ಆಗ ಗೊತ್ತಾಗಿದ್ದು ಬೇರೆಯದ್ದೇ ಕತೆ…!

ಈ ವಿಲಕ್ಷಣ ಘಟನೆಗೆ ನಡೆದದ್ದು ಆಸ್ಟ್ರೇಲಿಯಾದಲ್ಲಿ. ಕ್ವೀನ್ಸ್‌ಲ್ಯಾಂಡ್‌ನ ಡಾಸನ್ ಹೆದ್ದಾರಿಯಲ್ಲಿ 27 ವರ್ಷದ ಜಿಮ್ಮಿ ಎಂಬ ಯುವಕ ತನ್ನ ವಾಹನದೊಂದಿಗೆ ಸಾಗುತ್ತಿದ್ದ. ಈ ವೇಳೆ, ಬ್ರೇಕ್ ಬಳಿ ಹಾವೊಂದು ಕಾಣಿಸಿಕೊಂಡಿತ್ತು. ಹೀಗಾಗಿ, ಸೀಟ್ ಬೆಲ್ಟ್‌ ಹಾಕಿಕೊಂಡಿದ್ದರಿಂದ ತಕ್ಷಣಕ್ಕೆ ಅದರಿಂದ ತಪ್ಪಿಸಿಕೊಳ್ಳಲು ಆಗಿರಲಿಲ್ಲ. ಈ ಹಾವು ಆತನ ಕಾಲಿಗೆ ಸುತ್ತುವರಿಯಲು ನೋಡುತ್ತಿತ್ತು. ಅಲ್ಲದೆ ಸೀಟಿನ ಮೇಲೆ ಬರಲು ಯತ್ನಿಸುತ್ತಿತ್ತು. ವಾಹನ ಚಾಲನೆಯಲ್ಲಿದ್ದಾಗಲೇ ಇಷ್ಟೆಲ್ಲಾ ನಡೆದಿತ್ತು. ಈ ನಡುವೆ, ಈ ಹಾವು ನನಗೆ ಅದಾಗಲೇ ಕಚ್ಚಿದೆ ಎಂಬಂತಹ ಅನುಭವ ಜಿಮ್ಮಿಗೆ ಆಗ ತೊಡಗಿತ್ತು.

ಹಾವನ್ನು ಕೊಂದು ತಾನು ಬೇಗ ಆಸ್ಪತ್ರೆಗ ಹೋಗದೆ ಈತನಿಗೆ ಬೇರೆ ವಿಧಿ ಇರಲಿಲ್ಲ. ಹೀಗಾಗಿ, ಕೈಗೆ ಸಿಕ್ಕ ಚಾಕುವಿನಿಂದ ಹಾವಿನ ಮೇಲೆ ದಾಳಿ ಮಾಡಿ ಈತ ಅದನ್ನು ಕೊಂದಿದ್ದ ಮತ್ತು ಪ್ರಾಣ ಉಳಿಸಿಕೊಳ್ಳಲು ವೇಗವಾಗಿ ಆಸ್ಪತ್ರೆಯತ್ತ ತನ್ನ ವಾಹನದಲ್ಲಿ ಸಾಗುತ್ತಿದ್ದ. ಹೀಗೆ ಓವರ್ ಸ್ಪೀಡ್‌ನಲ್ಲಿ ಹೋಗುತ್ತಿದ್ದಾಗಲೇ ಈತನನ್ನು ನೋಡಿದವರು ಪೊಲೀಸರು. ಹೀಗಾಗಿ, ಪೊಲೀಸರು ಈತನ ಬೆನ್ನಟ್ಟಿಕೊಂಡು ಬಂದು ತಡೆದಿದ್ದರು…

ಜಿಮ್ಮಿ ತನ್ನ ವಾಹನದಲ್ಲಿ ಗಂಟೆಗೆ 123 ಕಿ.ಮೀ ವೇಗದಲ್ಲಿ ಸಾಗುತ್ತಿರುವುದನ್ನು ಕಂಡ ಸ್ಥಳೀಯ ಪೊಲೀಸ್ ಅಧಿಕಾರಿ ಈತನನ್ನು ಬೆನ್ನಟ್ಟಿ ಹಿಡಿದಿದ್ದರು. ಆಗ ಜಿಮ್ಮಿ ನಡೆದ ವಿಷಯವನ್ನೆಲ್ಲಾ ತಿಳಿಸಿದ್ದ. ಜೊತೆಗೆ, ಈತ ಕೊಂದಿದ್ದ ಹಾವು ಕೂಡಾ ವಾಹನದಲ್ಲೇ ಇತ್ತು…! ಈ ಬಗ್ಗೆ ಕ್ವೀನ್ಸ್‌ಲ್ಯಾಂಡ್ ಪೊಲೀಸರು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಡೆದಿದ್ದ ಎಲ್ಲಾ ಘಟನೆಯ ದೃಶ್ಯಾವಳಿಗಳಿವೆ.

ಪೊಲೀಸರ ಪ್ರಕಾರ ಜಿಮ್ಮಿಗೆ ಕಾಡಿದ್ದು ಅತ್ಯಂತ ವಿಷಕಾರಿ ಹಾವು. ಇದನ್ನು ಈಸ್ಟರ್ನ್ ಬ್ರೌನ್ ಸ್ನೇಕ್ ಎಂದು ಗುರುತಿಸಲಾಗಿದೆ. ಈ ಹಾವು ಕಚ್ಚಿ ಆಸ್ಟ್ರೇಲಿಯಾದಲ್ಲಿ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ. ಜಿಮ್ಮಿಯ ಕತೆಯನ್ನು ಕೇಳಿದ ಅಧಿಕಾರಿಗಳು ತಕ್ಷಣ ವೈದ್ಯಕೀಯ ವ್ಯವಸ್ಥೆಯನ್ನೂ ಮಾಡಿದ್ದರು. ಸ್ಥಳಕ್ಕೆ ಬಂದಿದ್ದ ಅರೆವೈದ್ಯಕೀಯ ತಂಡ ಜಿಮ್ಮಿಗೆ ಹಾವು ಕಚ್ಚಿರಲಿಲ್ಲ. ಆದರೆ, ಅವರು ಹಾವು ಕಂಡ ಶಾಕ್‌ಗೊಳಗಾಗಿದ್ದರು. ಹೀಗಾಗಿ, ಹಾವು ಕಚ್ಚಿರಬಹುದು ಎಂದು ಶಂಕಿಸಿದ್ದರು ಎಂದು ತಿಳಿಸಿದ್ದರಿಂದ ಎಲ್ಲರೂ ಒಂದು ಕ್ಷಣ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಸದ್ಯ ಪೊಲೀಸರು ಹಂಚಿಕೊಂಡಿರುವ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

Comments are closed.