ಮಂಗಳೂರು : ಜೀವಮಾನವಿಡೀ ಸಮಾಜ ಸೇವೆ, ಕಲಾ ಸೇವೆ ಸಾಹಿತ್ಯ ದೈವಾರಾಧನೆ ವಿವಿಧ ಕ್ಷೇತ್ರದಲ್ಲಿ ಎಲೆಮರೆಯ ಕಾಯಿಯಂತೆ ಕಲಾ ಮಾತೆಯ ಸೇವೆ ಮಾಡುತ್ತಿರುವ ಸಾಧಕರನ್ನು ಗುರುತಿಸಿ ಗುರುಪೂರ್ಣಿಮೆಯ ಸಂದರ್ಭ ಗೌರವಿಸುವುದು ಪುಣ್ಯದ ಕೆಲಸ, ಮಾತ್ರವಲ್ಲದೇ ಇಂದು ನನ್ನ ಜೀವನದ ಸಾರ್ಥಕ ದಿನ ಎಂದು ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ್ ಹೇಳಿದರು.
ಸಂಸ್ಕಾರ ಭಾರತಿ ಮಂಗಳೂರು ಆಶ್ರಯದಲ್ಲಿ ಪ್ರತೀ ವರ್ಷ ಗುರುಪೂರ್ಣಿಮೆಯ ಅಂಗವಾಗಿ 5 ಜನ ಕಲಾಸಾಧಕರಿಗೆ ನಿಟ್ಟೆ ಸಂಸ್ಥೆ ನೀಡುವ ಗೌರವ ಧನದೊಂದಿಗೆ ಕಲಾವಿದರ ಮನೆಗೆ ತೆರಳಿ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತುಕಾರಾಂ ಬಂಗೇರ ಬೊಕ್ಕಪಟ್ನ (ಸಮಾಜ ಸೇವೆ ). ಶ್ರೀಧರ ಶೆಟ್ಟಿ ಮೂಡಬಿದಿರೆ, (ದೈವಾರಾಧನೆ ) ಗಣೇಶ್ ಕೊಲಕಾಡಿ ( ಸಾಹಿತ್ಯ ) ಜಿ. ನಾರಾಯಣ ಶೆಟ್ಟಿ ಗುರುಪುರ (ನಾಟಕ ) ಕೈರಂಗಳ ನಾರಾಯಣ ಹೊಳ್ಳ (ಯಕ್ಷಗಾನ ) ಇವರುಗಳಿಗೆ ಜನಪ್ರತಿನಿಧಿಗಳ, ಕಲಾವಿದರ, ಹಿರಿಯರ ಉಪಸ್ಥಿಯಲ್ಲಿ ಗುರುವಂದನಾ ಕಾರ್ಯಕ್ರಮ ನೆರವೇರಿತು.
ಸಂಸ್ಕಾರ ಭಾರತಿಯ ಮಂಗಳೂರು ಘಟಕದ ಅಧ್ಯಕ್ಷ ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು. ಗುರುಪೂರ್ಣಿಮೆಯ ಮಹತ್ವವನ್ನು ತುಳುಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ಸರ್ ಹೇಳಿದರು.
ಸಂಸ್ಕಾರ ಭಾರತಿಯ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಪ್ರಸ್ತಾವನೆಗೈದರು. ಸಂಸ್ಕಾರ ಭಾರತಿಯ ರಾಜ್ಯ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಸಂಸ್ಕಾರ ಭಾರತಿಯ ಮಂಗಳೂರಿನ ಉಪಾಧ್ಯಕ್ಷ ದನಪಾಲ್ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಮಾಧವ ಭಂಡಾರಿ, ಕೋಶಾಧಿಕಾರಿ ರಘುವೀರ್ ಗಟ್ಟಿ, ಸಂಘಟನಾ ಕಾರ್ಯದರ್ಶಿ ಗಣೇಶ್ ಕುಮಾರ್ ಬೋಳೂರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯೆ ವಿದುಷಿ ಶಾರದಾಮಣಿ ಶೇಖರ್, ನೃತ್ಯ ಗುರು ಶ್ರೀಮತಿ ಶ್ರೀಲತಾ ನಾಗರಾಜ್, ಜತೆ ಕಾರ್ಯದರ್ಶಿ ಕಿರಣ್ ಕುಮಾರ್, ಲಯನ್ಸ್ ಕ್ಲಬ್ ಮೆಟ್ರೋ ಗೋಲ್ಡ್ ಅಧ್ಯಕ್ಷ ಹರಿಪ್ರಸಾದ್ ರೈ, ಹರ್ಷಿತ್ ಕೊಟ್ಟಾರಿ, ಶ್ರೀಪತಿ ಆಚಾರ್, ಸಂಸ್ಕಾರ ಭಾರತಿಯ ಮಾಧ್ಯಮ ಪ್ರಮುಖ್ ಸುಜೀರ್ ವಿನೋದ್ ಸಹಕರಿಸಿದರು
Comments are closed.