ನವದೆಹಲಿ: ಕರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ವಿಧಿಸಲಾದ ಲಾಕ್ಡೌನ್ ಮಧ್ಯೆ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಗಳಿಗಾಗಿ ಬೇಡಿಕೆ ಹೆಚ್ಚಾಗಿದೆ. ಈ ಸಮಯದಲ್ಲಿ ಜೂಮ್ ನಂತಹ ಅಪ್ಲಿಕೇಶನ್ಗಳ ಕ್ರೇಜ್ ಕಂಡುಬರುತ್ತಿದೆ. ಇದಕ್ಕೂ ಮೊದಲು ಜೂಮ್ ಆಪ್ ಮೂಲಕ 100 ಜನರು ಏಕಕಾಲದಲ್ಲಿ ವೀಡಿಯೊ ಕರೆ ಮಾಡಬಹುದಿತ್ತು. ಆದರೆ, ಮೈಕ್ರೋಸಾಫ್ಟ್ ಇದೀಗ zoom ನ ಈ ವೈಶಿಷ್ಟ್ಯವನ್ನು ಮೀರಿಸಿದೆ. ಮೈಕ್ರೋಸಾಫ್ಟ್ ತನ್ನ MS Teams ಆಪ್ ನಲ್ಲಿ ಒಂಚು ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದ್ದು, ಇದರ ಅಡಿಯಲ್ಲಿ ನೀವು ಏಕಕಾಲಕ್ಕೆ ಸಾವಿರ ಜನರಿಗೆ ವೀಡಿಯೊ ಕರೆಗಳನ್ನು ಮಾಡಬಹುದು. ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಇಲ್ಲಿದೆ ವಿವರ,
Together Mode
ಈ ಮೋಡ್ ನಲ್ಲಿ ಒಂದು ವೇಳೆ ನೀವು ಒಂದಕ್ಕಿಂತ ಹೆಚ್ಚಿನ ಜನರ ಜೊತೆಗೆ ವಿಡಿಯೋ ಕಾಲಿಂಗ್ ಮೂಲಕ ಸಂವಾದ ನಡೆಸುತ್ತಿದ್ದರೆ, ಗ್ರೂಪ್ ನ ಯಾವ ಯಾವ ಸದಸ್ಯರು ಸಂವಾದವನ್ನು ಆಲಿಸುತ್ತಿದ್ದಾರೆ ಅಥವಾ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ತಿಳಿಯುತ್ತದೆ.
Video Filters
ಮೈಕ್ರೋ ಸಾಫ್ಟ್ ನ ಈ ವೈಶಿಷ್ಟ್ಯ ಅಥವಾ ಈ ಫಿಲ್ಟರ್ ಇನ್ಸ್ಟಾಗ್ರಾಂ ಹಾಗೂ ಸ್ನಾಪ್ ಚಾಟ್ ನಲ್ಲಿ ಸಿಗುವ ಫಿಲ್ಟರ್ ನಂತೆಯೇ ಇರಲಿದೆ. ವಿಡಿಯೋ ಕಾಲ್ ಆರಂಭಿಸುವುದಕ್ಕು ಮುನ್ನವೇ ಬಳಕೆದಾರರು ತಮ್ಮ ನೆಚ್ಚಿನ ಫಿಲ್ಟರ್ ಆಯ್ಕೆ ಮಾಡಬಹುದಾಗಿದ್ದು, ಇದರಿಂದ ನಿಮ್ಮ ಲೈಟಿಂಗ್ ಉತ್ತಮಗೊಳ್ಳಲಿದೆ.
Live ಪ್ರತಿಕ್ರಿಯೆ
ಇದರಲ್ಲಿ ಬಳಕೆದಾರರಿಗೆ ಲೈವ್ ವಿಡಿಯೋ ಕಾಲಿಂಗ್ ಸಂದರ್ಭದಲ್ಲಿ emoji ಪರಸ್ಪರ ಹಂಚಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಈ ಇಮೊಜಿಗಳ ಮೂಲಕ ನೀವು ವಿಡಿಯೋ ಕಾಲಿಂಗ್ ವೇಳೆಯೇ ನಿಮ್ಮ ಪ್ರತಿಕ್ರಿಯೆಗಳನ್ನು ನೀಡಬಹುದು.
Chat Bubbles
ಚ್ಯಾಟ್ ಬಬಲ್ಸ್ ಫೇಸ್ ಬುಕ್ ಮೆಸ್ಸೆಂಜರ್ ರೀತಿ ಕಾರ್ಯನಿರ್ವಹಿಸುತ್ತದೆ. ಈ ವೈಶಿಷ್ಟ್ಯದ ಅಡಿ, ಒಂದು ವೇಳೆ ನಿಮಗೆ ವಿಡಿಯೋ ಕಾಲಿಂಗ್ ಸಂದರ್ಭದಲ್ಲಿ ಯಾವುದಾದರೊಂದು ಹೊಸ ಸಂದೇಶ ಬಂದರೆ, ಅದನ್ನು ಓದಲು ನೀವು ಪುನಃ ಚಾಟ್ ಸ್ಕ್ರೀನ್ ಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ.
1000 Participants
Microsoft Teams ಸಾದರುಪಡಿಸಿರುವ ಈ ನೂತನ ಅಪ್ಡೇಟ್ ಮೂಲಕ ನೀವು ಒಂದೇ ಒಂದು ವಿಡಿಯೋ ಕಾಲ್ ಮಾಡುವ ಮೂಲಕ ಸುಮಾರು 1000 ಜನರ ಜೊತೆಗೆ ಏಕಕಾಲಕ್ಕೆ ಸಂವಾದ ನಡೆಸಬಹುದು. ಅಷ್ಟ ಅಲ್ಲ. ಒಂದು ವೇಳೆ ಬಳಕೆದಾರರು ದೊಡ್ಡ ಪ್ರಮಾಣದಲ್ಲಿ ವಿಡಿಯೋ ಕಾಲಿಂಗ್ ಮಾಡಲು ಬಯಸಿದರೆ, View Only ವೈಶಿಷ್ಟ್ಯದ ಅಡಿ ಸುಮಾರು 20 ಬಳಕೆದಾರರನ್ನುಒಂದೇ ಬಾರಿಗೆ ಪರಸ್ಪರ ಕನೆಕ್ಟ್ ಕೂಡ ಮಾಡಬಹುದು.
Comments are closed.