ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಡುಕೋಣೆ ಶ್ರೀರಾಮ ಮಂದಿರದಲ್ಲಿ ಕಳ್ಳರು ತಡರಾತ್ರಿ ಕೈಚಳಕ ತೋರಿದ್ದಾರೆ.
ರಾಮ ಮಂದಿರದಲ್ಲಿದ್ದ ಒರಡೂವರೆ ಕೆ.ಜಿ.ಗೂ ಅಧಿಕ ತೂಕದ ಬೆಳ್ಳಿ ಪ್ರಭಾವಳಿ ಕಳವುಗೈದಿದ್ದಾರೆ. ಇದರ ಒಟ್ಟು ಮೌಲ್ಯ 1.5 ಲಕ್ಷ ಆಗಿದೆ. ತಡರಾತ್ರಿ ಈ ಕುಕೃತ್ಯ ನಡೆದಿದ್ದು ಮಂದಿರದ ಬಾಗಿಲು ಚಿಲಕ ತುಂಡರಿಸಿ ಕಳ್ಳರು ಒಳ ಪ್ರವೇಶಿಸಿದ್ದಾರೆ. ಸಿಸಿ ಟಿವಿ ಇಲ್ಲದ ಹಿನ್ನೆಲೆ ಕಳ್ಳರ ಚಲನವಲನ ದಾಖಲಾಗಿಲ್ಲ.
ಘಟನಾ ಸ್ಥಳಕ್ಕೆ ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸುರೇಶ್, ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಭೀಮಾಶಂಕರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.