ಆರೋಗ್ಯ

ರಾತ್ರಿ ಒಂದು ಗ್ಲಾಸು ಹಾಲು, ಹತ್ತು ಒಣ ದ್ರಾಕ್ಷಿಗಳು ತಿನ್ನುವುದರಿಂದ ಉದರ ಸಮಸ್ಯೆ ದೂರ

Pinterest LinkedIn Tumblr

ಪ್ರತಿದಿನ ಐದು ಒಣ ದ್ರಾಕ್ಷಿಯ ತಿಂದರೆ ಆರೋಗ್ಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲವೆಂದು ಹೇಳುತ್ತಿದ್ದಾರೆ ವೈದ್ಯ ನಿಪುಣರು. ತಕ್ಷಣ ಶಕ್ತಿಯನ್ನು ಕೊಡುವುದರಲ್ಲಿ ಒಣ ದ್ರಾಕ್ಷಿಯು ಮುಂದಿರುತ್ತದೆ. ಒಣ ದ್ರಾಕ್ಷಿಯಲ್ಲಿ ಐರನ್,ಕ್ಯಾಲ್ಶಿಯಮ್,ವಿಟಮಿನ್ಗಳು ಹೆಚ್ಚಾಗಿ ಇರುತ್ತವೆ. ಸಮಾಜಸಿದ್ಧ ಜೀರ್ಣಕ್ರಿಯೆ ಯಲ್ಲಿ ಪಾಲ್ಗೊಳ್ಳುತ್ತವೆ.

ಒಣ ದ್ರಾಕ್ಷಿಯಲ್ಲಿ ಬೀಟಾ ಕೆರೊಟಿನ್,ವಿಟಮಿನ್ ಎ ಹೆಚ್ಚಾಗಿ ಇರುತ್ತವೆ. ಇದು ಕಣ್ಣಿನ ದೃಷ್ಟಿ ಹೆಚ್ಚಾಗುವುದಕ್ಕೆ ಸಹಾಯವಾಗುತ್ತದೆ. ಮಕ್ಕಳ ಶರೀರಕ್ಕೆ ಒಣ ದ್ರಾಕ್ಷಿ ಸಹಜವಾದ ಶಕ್ತಿಯನ್ನು ಕೊಡುತ್ತದೆ. ಇದರಿಂದ ಮಕ್ಕಳು ಯಾವುದೇ ತೊಂದರೆ ಇಲ್ಲದೆ ಆರೋಗ್ಯವಾಗಿ ಇರುತ್ತಾರೆ. ಒಣ ದ್ರಾಕ್ಷಿಯಲ್ಲಿ ಯಾಂಟಿ ಬ್ಯಾಕ್ಟಿರಿಯಲ್ ಗುಣಗಳು ಹೆಚ್ಚು, ಇವು ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಾತ್ರಿ ಹೊತ್ತು ಒಣ ದ್ರಾಕ್ಷಿಯನ್ನು ನೆನೆಸಿ ಮುಂಜಾನೆ ತಿನ್ನಬೇಕು.

ಮತ್ತೆ ಇದರಲ್ಲಿರುವ ಫೈಬರ್ನಿಂದ ಹೊಟ್ಟೆಗೆ ಸಂಬಂಧಿಸಿದ ಖಾಯಿಲೆಗಳನ್ನು ಹೊರದೋಡಿಸುತ್ತದೆ.

ಪ್ರತಿದಿನ ರಾತ್ರಿ ಒಂದು ಗ್ಲಾಸು ಹಾಲು, ಹತ್ತು ಒಣ ದ್ರಾಕ್ಷಿಗಳು ತಿನ್ನುವುದರಿಂದ ಉದರ ಸಮಸ್ಯೆಗಳಿಂದ ಉಪಶಮನ ಲಭಿಸುತ್ತದೆ. ಇದರಲ್ಲಿರುವ ಪೊಟಾಷಿಯಂ ನರಗಳು, ಖಂಡಗಳು ಆರೋಗ್ಯವಾಗಿ ಇರುವುದಕ್ಕೆ ಉಪಯೋಗವಾಗುತ್ತದೆ.

ಒಣ ದ್ರಾಕ್ಷಿಯಲ್ಲಿ ಐರನ್ ಹೆಚ್ಚಾಗಿ ಇರುತ್ತದೆ. ಒಂದು ಕಪ್ಪಿನಲ್ಲಿ 10 ರಿಂದ 15 ಒಣ ದ್ರಾಕ್ಷಿಯನ್ನು ನೆನೆಸಿ ಇಡಬೇಕು.

ಅದರಲ್ಲಿ ನಿಂಬೆ ರಸವನ್ನು ಕಲಿಸಿಡಬೇಕು.ನಾಲ್ಕೈದು ಗಂಟೆಗಳ ನಂತರ ಒಣ ದ್ರಾಕ್ಷಿ ಯನ್ನು ತಿನ್ನಬೇಕು. ಈ ಕೆಲಸವನ್ನು ತಪ್ಪದೆ ಮಾಡಿದರೆ ಅನೇಮಿಯಾದಿಂದ ಹೊರಬೀಳಬಹುದು.

ಯಾಂಟಿ ಆಕ್ಸಿಡೆಂಟ್ಗಳು ಹೆಚ್ಚಾಗಿ ಇರುವುದರಿಂದ ಕ್ಯಾನ್ಸರ್ ಕಾರಕ ಕಣಗಳನ್ನು ನಾಶ ಮಾಡುತ್ತವೆ.

ಒಣ ದ್ರಾಕ್ಷಿಯಲ್ಲಿ ಆಕ್ಸಾಲಿಕ್ ಆಮ್ಲ ಇರುತ್ತದೆ.ಇವು ಹಲ್ಲುಗಳನ್ನು ಹಾಗೂ ಮೂಳೆಗಳನ್ನು ಬಲಪಡಿಸುತ್ತವೆ. ಇದರಲ್ಲಿನ ಕ್ಯಾಲ್ಶಿಯಂ ನಿಂದ ಮೂಳೆ ನೋವುಗಳನ್ನು ನಿವಾರಿಸುತ್ತದೆ. ಪ್ರತಿದಿನ ಒಣದ್ರಾಕ್ಷಿ ಯನ್ನು ತೆಗೆದುಕೊಂಡರೆ ಶರೀರದಲ್ಲಿ ಹೆಚ್ಚಾಗುವ ಮಾಲಿನ್ಯವನ್ನು ಆಚೆ ಹಾಕಬಹುದು. ಕಾಯಿಲೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

Comments are closed.