ಆರೋಗ್ಯ

ಉಡುಪಿಯಲ್ಲಿಂದು‌ ಮತ್ತೆ ಕೊರೋನಾರ್ಭಟ: 84 ಮಂದಿಗೆ ಕೋವಿಡ್- 19 ಪಾಸಿಟಿವ್

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ನಿತ್ಯವೂ ಹೆಚ್ಚುತ್ತಲೇ ಇದೆ. ಇಂದು ಮತ್ತೆ 84 ಜನರಿಗೆ ಕೋವಿಡ್ 19 ಸೋಂಕು ದೃಢವಾಗಿದ್ದು, ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1979ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಈವರೆಗೆ 1543 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಏಳು ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 23, 858 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಅವುಗಳ ಪರೀಕ್ಷೆ ನಡೆಸಿದಾಗ 1979 ಜನರ ಗಂಟಲು ದ್ರವ ಮಾದರಿ ಫಲಿತಾಂಶ ಪಾಸಿಟಿವ್ ಆಗಿದ್ದು, 21,465 ಜನರ ಮಾದರಿ ನೆಗಟಿವ್ ಆಗಿದೆ. ಇನ್ನೂ 414 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ಫಲಿತಾಂಶ ಬಾಕಿಯಿದೆ.

Comments are closed.