ರಾಷ್ಟ್ರೀಯ

ಮತ್ತೆ ಆರಂಭವಾಗುತ್ತಾ ಟಿಕ್​ಟಾಕ್​?

Pinterest LinkedIn Tumblr


ನವದೆಹಲಿ: ಚೀನಾ ಮೂಲದ್ದು ಎಂಬ ಕಾರಣಕ್ಕೆ ಭಾರತದಲ್ಲಿ ಬ್ಯಾನ್​ ಆಗಿರುವ ಶಾರ್ಟ್​ ವಿಡಿಯೋ ಆ್ಯಪ್​ ಟಿಕ್​ಟಾಕ್​ ಮತ್ತೆ ಭಭಾರತದಲ್ಲಿ ಸೇವೆ ಆರಂಭಿಸುವ ಉತ್ಸಾಹದಲ್ಲಿದೆ.

ಹೌದು… ಜಾಗತಿಕವಾಗಿ ಉತ್ತಮ ವಹಿವಾಟು ಸಂಬಂಧ ಉಳಿಸಿಕೊಳ್ಳಲು ಚೀನಾದಿಂದ ಅಂತರ ಕಾಪಾಡಿಕೊಳ್ಳಲೇಬೇಕಿದೆ. ಹೀಗಾಗಿ ತನ್ನ ಕೇಂದ್ರ ಸ್ಥಾನವನ್ನು ಸ್ಥಳಾಂತರಿಸಲು ನಿರ್ಧರಿಸಿದ್ದು, ಚೀನಾವನ್ನೇ ಬಿಟ್ಟೋಡುತ್ತಿದೆ.

ಇಂಗ್ಲೆಂಡ್​ನಲ್ಲಿ ಮುಖ್ಯ ಕಚೇರಿ ಹೊಂದಲು ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ ಟಿಕ್​ಟಾಕ್​. ಕೇಂದ್ರ ಕಚೇರಿಗೆ ಲಂಡನ್​ ಸೇರಿ ಹಲವು ಸ್ಥಳಗಳನ್ನು ಗುರುತಿಸಲಾಗಿದೆ. ಆದರೆ, ಯಾವುದೂ ಅಂತಿಮವಾಗಿಲ್ಲ ಎಂದು ಕಂಪನಿ ಮೂಲಗಳು ತಿಳಿಸಿವೆ.

ಭಾರತದ ಬಳಿಕ ಅಮೆರಿಕ ಕೂಡ ಚೀನಿ ಆ್ಯಪ್​ಗಳನ್ನು ನಿಷೇಧಿಸಿದೆ. ಹಲವು ಐರೋಪ್ಯ ದೇಶಗಳಲ್ಲೂ ಇದರ ಚೀನಾ ಮೂಲದ ಬಗ್ಗೆ ಅಸಮಾಧಾನವಿದೆ. ಈ ಕಾರಣಕ್ಕಾಗಿ ಚೀನಾದಿಂದ ಹೊರಗಿದ್ದುಕೊಂಡೇ ಕಾರ್ಯಾಚರಿಸಲು ಕಂಪನಿ ಯೋಜನೆ ರೂಪಿಸಿದೆ.

ಲಂಡನ್​ ಹೊರತುಪಡಿಸಿ ಬೇರಾವ ಸ್ಥಳಗಳನ್ನು ಕಂಪನಿ ಗುರುತಿಸಿದೆ ಎನ್ನುವುದು ಖಚಿತವಾಗಿಲ್ಲ. ಆದರೆ, ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚಿನ ಸಿಬ್ಬಂದಿ ಹೊಂದಿದೆ. ಅಲ್ಲದೇ, ಅಮೆರಿಕದ ಕೆವಿನ್​ ಮೇಯರ್​ ಇದರ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ. ಹೀಗಾಗಿ ಅಮೆರಿಕದಲ್ಲೂ ನೆಲೆ ಕಂಡುಕೊಳ್ಳಬಹುದು ಎಂದು ಹೇಳಲಾಗಿದೆ.

ಟಿಕ್​ಟಾಕ್​ ಚೀನಾ ಮೂಲದ ಬೈಟ್​ ಡಾನ್ಸ್​ ಕಂಪನಿಯ ಒಡೆತನದಲ್ಲಿರುವ ಆ್ಯಪ್​ ಆಗಿದೆ. ಚೀನಾಗೆ ಮಾಹಿತಿ ರವಾನಿಸುತ್ತಿದೆ ಎಂಬ ಆರೋಪದಲ್ಲಿ ನಿಷೇಧಕ್ಕೆ ಒಳಗಾಗಿದೆ. ಒಂದು ಚೀನಾದಿಂದ ದೂರವುಳಿದಿದ್ದೇ ಆದಲ್ಲಿ ಮತ್ತೆ ಭಾರತದಲ್ಲಿ ಆ್ಯಪ್​ ಸೇವೆ ಲಭ್ಯವಾಗುವ ಸಾಧ್ಯತೆಗಳು ಹೆಚ್ಚಿವೆ.

Comments are closed.