ರಾಷ್ಟ್ರೀಯ

ಆಗಸ್ಟ್ 5 ರಂದು ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮ; 250 ಅತಿಥಿಗಳು ಭಾಗಿವಹಿಸುವ ಸಾಧ್ಯತೆ

Pinterest LinkedIn Tumblr

ನವದೆಹಲಿ: ಆಗಸ್ಟ್ 5 ರಂದು ನಡೆಯಲಿರುವ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದಲ್ಲಿ 250 ಅತಿಥಿಗಳು ಭಾಗಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಜೀ ನ್ಯೂಸ್ ನ ವರದಿಯ ಪ್ರಕಾರ ಅಯೋಧ್ಯೆಯ ಪ್ರಮುಖ ಸನ್ಯಾಸಿಗಳು ರಾಮ ಮಂದಿರ ಚಳುವಳಿಯಲ್ಲಿ ಭಾಗಿಯಾಗಿದ್ದ ಹಿರಿಯ ವ್ಯಕ್ತಿಗಳು ಭೂಮಿ ಪೂಜೆ ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪದಾಧಿಕಾರಿಗಳು, ವಿಶ್ವ ಹಿಂದೂಪರಿಷತ್ ನ ಪದಾಧಿಕಾರಿಗಳನ್ನೂ ಸಹ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿಂದ ಆಹ್ವಾನ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಕೇಂದ್ರ ಸಚಿವರು ಹಾಗೂ ಉತ್ತರ ಪ್ರದೇಶದ ಸಚಿವರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಅತ್ಯಂತ ಕಡಿಮೆ ಜನರಿಗೆ ಮಾತ್ರ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ.

Comments are closed.