ಉಡುಪಿ: ಮಳೆಗಾಲದ ಹಿನ್ನೆಲೆ ಮೀನುಗಾರಿಕೆಗೆ ನಿಷೇಧವಿರುವ ಕಾರಣ ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ್ದ ಎರಡು ಬೋಟುಗಳ ನಾಲ್ಕು ಬ್ಯಾಟರಿಗಳನ್ನು ಕಳವುಗೈದ ಮೂವರು ಆರೋಪಿಗಳನ್ನು ಮಲ್ಪೆ ಪೊಲೀಸ್ ಉಪನಿರೀಕ್ಷಕ ತಿಮ್ಮೇಶ್ ಬಿ.ಎನ್ ಹಾಗೂ ನೇತೃತ್ವದ ತಂಡ ಬಂಧಿಸಿದೆ.
ಉಡುಪಿ ಮಲ್ಪೆ ಕೊಡವೂರು ಮೂಲದ ಅಲ್ ಮುಹೀತ್ (20), ಯಾಸೀನ್ (18) ಹಾಗೂ ಆದರ್ಶ (19) ಬಂಧಿತ ಆರೋಪಿಗಳು. ಬಂಧಿತರಿಂದ 56 ಸಾವಿರ ಮೌಲ್ಯದ ಬ್ಯಾಟರಿಗಳು, ಕೃತ್ಯಕ್ಕೆ ಬಳಸಿದ ರಿಟ್ಜ್ ಕಾರು ವಶಕ್ಕೆ ಪಡೆಯಲಾಗಿದೆ.
ಘಟನೆ ಏನು…?
ಉಡುಪಿ ಪಡುತೋನ್ಸೆ ಬೇಂಗ್ರೆಯ ಧರ್ಮರಾಜ್ ಸುವರ್ಣ ಎನ್ನುವರ ತಿರುಮಲ-1 ಹೆಸರಿನ ಪರ್ಶೀನ್ ಮೀನುಗಾರಿಕಾ ಬೋಟ್ ಹಾಗೂ ಉಡುಪಿ ಕೊಡವೂರಿನ ದಯೇಂದ್ರ ಜಿ ಬಂಗೇರ ಅವರು ನಡೆಸುತ್ತಿದ್ದ ಜೈ ಹನುಮ ಹೆಸರಿನ ನಾಲ್ಕು ಬ್ಯಾಟರಿಗಳನ್ನು ಕಳವುಗೈದ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳ ಶೋಧದಲ್ಲಿದ್ದು ಕಲ್ಮಾಡಿ ಜಂಕ್ಷನ್ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮಾರುತಿ ರಿಟ್ಜ್ ಕಾರು ಪತ್ತೆಮಾಡಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆ ತಂಡ…
ಉಡುಪಿ ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಟಿ. ಜೈಶಂಕರ್, ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಮಲ್ಪೆ ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್., ಎಎಸ್ಐ ಸುಧಾಕರ್ ಬಿ., ಹೆಡ್ ಕಾನ್ಸ್‌ಟೇಬಲ್ ಜಯರಾಮ, ರತ್ನಾಕರ, ಶಶಿಧರ, ಪ್ರವೀಣ್, ಸಂತೋಷ್, ವಿಕ್ರಮ್ ಬೆರೆಟ್ಟೋ, ಸಿಬ್ಬಂದಿಗಳಾದ ಚೇತನ್ ಪಿತ್ರೋಡಿ, ರವಿರಾಜ್, ಸದಾನಂದ, ಮಂಜುನಾಥ, ಜೀಪು ಚಾಲಕ ಮಹಾಬಲ್ ಈ ಕಾರ್ಯಾಚರಣೆಯಲ್ಲಿದ್ದರು.
Comments are closed.