ಕರಾವಳಿ

ದ.ಕ.ಜಿಲ್ಲೆಯಲ್ಲಿ ಸೋಮವಾರ ಕಡಿಮೆಯಾದ ಸೋಂಕಿತರ ಸಂಖ್ಯೆ: ಒಟ್ಟು 89 ಮಂದಿಗೆ ಸೋಂಕು ಧೃಢ :ಸೋಂಕಿಗೆ ಐವರು ಬಲಿ

Pinterest LinkedIn Tumblr

ಮಂಗಳೂರು, ಜುಲೈ. 21 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ ಸೋಮವಾರ ಕಡಿಮೆಯಾಗಿದ್ದು, ಜಿಲ್ಲೆಯ ಜನತೆ ಸ್ವಲ್ಪ ನಿರಾಳವಾಗಿದ್ದಾರೆ.

ಸೋಮವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಪ್ರಕಟಿಸಿದ ಪ್ರಕಟಣೆಯಲ್ಲಿ ದ.ಕ. ಜಿಲ್ಲೆಯಲ್ಲಿ  ಬರೀ 89 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಯಾಗಿದೆ.

ಜಿಲ್ಲೆಯಲ್ಲಿ ರವಿವಾರ 285 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3596 ಇತ್ತು. ಆದರೆ ಸೋಮವಾರ ಸೋಂಕು ಪೀಡಿತರ ಸಂಖ್ಯೆ ಸ್ವಲ್ಪ ಕಡಿಮೆಯಾಗಿದ್ದು ಬರೀ 89 ಮಂದಿಯಲ್ಲಿ ಸೋಂಕು ಪತ್ತೆಯಾಗುವ ಮೂಲಕ ಸೋಕಿತರ ಒಟ್ಟು ಸಂಖ್ಯೆ 3685ಕ್ಕೆ ಏರಿಕೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ  2055 ಮಂದಿ ಮಂದಿ ಸದ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಜಿಲ್ಲೆಯಲ್ಲಿ 57 ಮಂದಿ ಗುಣಮುಖರಾಗಿದ್ದು, ಆ ಮೂಲಕ ಜಿಲ್ಲೆಯಲ್ಲಿ ಒಟ್ಟು 1548 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.

ಇನ್ನು ಸೋಮವಾರ ಪತ್ತೆಯಾದ ಸೋಂಕಿತರ ಪೈಕಿ 11 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. 45 ಮಂದಿಯಲ್ಲಿ ಐಎಲ್ ಐ ಪ್ರಕರಣ ದೃಢಪಟ್ಟಿದೆ. 16 ಮಂದಿಯಲ್ಲಿ ಸಾರಿ ಪ್ರಕರಣ ಪತ್ತೆಯಾಗಿದೆ. ಅಂತರಾಷ್ಟ್ರೀಯ ಪ್ರಯಾಣದಿಂದ ಇಬ್ಬರಲ್ಲಿ ಸೊಂಕು ಪತ್ತೆಯಾಗಿದೆ. 15 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.

ಸೋಮವಾರದ ಪ್ರಮುಖ ಅಂಶಗಳು :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 89 ಮಂದಿಗೆ ಕೊರೋನಾ ಪಾಸಿಟಿವ್

ILI – 45 ಮಂದಿಗೆ ಕೊರೋನಾ ಪಾಸಿಟಿವ್

SARI ಪ್ರಕರಣದಿಂದ 16 ಮಂದಿಗೆ ಕೊರೋನಾ ಪಾಸಿಟಿವ್

ಸಂಪರ್ಕವೇ ಪತ್ತೆಯಾಗದ 15 ಮಂದಿಗೆ ಕೊರೋನಾ ಪಾಸಿಟಿವ್

ಪ್ರಾಥಮಿಕ ಸಂಪರ್ಕದಿಂದ 11 ಮಂದಿಗೆ ಕೊರೋನಾ ಪಾಸಿಟಿವ್

ವಿದೇಶದಿಂದ ಬಂದ ಇಬ್ಬರಿಗೆ ಕೊರೋನಾ ಸೋಂಕು ದೃಢ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸೋಂಕಿಗೆ ಐವರು ಬಲಿ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ ಐವರು ಕೊರೋನಾ‌ದಿಂದ ಸಾವನ್ನಪ್ಪಿದಾರೆ. ನಾಲ್ವರು ಗಂಡಸರು ಹಾಗೂ ಎರಡು ತಿಂಗಳ ಮಗುವೊಂದು ಕೊರೋನಾಗೆ ಬಲಿಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ.

ಸೋಮವಾರದ ಪ್ರಮುಖ ಅಂಶಗಳು :

ಸೋಮವಾರ ಒಂದೇ ದಿನ‌ ಬರೋಬ್ಬರಿ‌ 5 ಮಂದಿ ಕೊರೋನಾಗೆ ಬಲಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ ಐವರು ಕೊರೋನಾ‌ದಿಂದ ಸಾವು

ನಾಲ್ವರು ಗಂಡಸರು ಹಾಗೂ ಎರಡು ತಿಂಗಳ ಮಗುವೊಂದು ಕೊರೋನಾಗೆ ಬಲಿ

42, 55, 63 ಹಾಗೂ 65 ವರ್ಷದ ಮೂವರು ಪುರುಷರು ಬಲಿ

ಎರಡು ತಿಂಗಳ ಗಂಡು ಮಗುವೊಂದು ಕೊರೋನಾಗೆ ಬಲಿ

ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 82ಕ್ಕೆ ಏರಿಕೆ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಾವಿನ‌ ಸಂಖ್ಯೆ.

Comments are closed.