ಉಡುಪಿ: ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ(ನಿ)ದಿಂದ ಸವಿತಾ ಸಮಾಜಕ್ಕೆ ಸೇರಿದ (ಪರಿಯಾಳ, ಅಂಬಟ್ಟನ್, ಬಜಂತ್ರಿ, ಬಂಡಾರಿ, ಚೌರಿಯ, ಹಡಪದ, ಕವುಟಿಯನ್, ಕೆಲಸಿ, ಕ್ಷೌರಿಕ, ಕ್ಷೌರದ್, ಮಹಾಲೆ, ಮಂಗಳ, ಮೇಲಗಾರ, ನಾಡಿಗ, ನಾಪಿತ, ನವಲಿಗ್, ನಾವಿ, ನಯನಜ, ಕ್ಷತ್ರಿಯ, ನ್ಹಾವಿ, ವಾಜಾಂತ್ರಿ, ಸವಿತ, ನಯನಜ, ಕ್ಷತ್ರಿ, ನಾಡಿಗ್, ಕ್ಷೌರಿಕ್, ಕ್ಷೌರಿಕ) ಜನರ ಆರ್ಥಿಕ ಅಭಿವೃದ್ಧಿಗಾಗಿ ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆ ಹಾಗೂ ಸ್ವಯಂ ಉದ್ಯೋಗ ಸಾಲ ಯೋಜನೆ ಯಲ್ಲಿ ಸಾಲ ಸೌಲಭ್ಯ ಒದಗಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
(ಸಾಂದರ್ಭಿಕ ಚಿತ್ರ)
ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಇಚ್ಚಿಸುವವರು ಉಚಿತವಾಗಿ ಅರ್ಜಿ ನಮೂನೆಯನ್ನು ಜಿಲ್ಲಾ ಕಛೇರಿಯಲ್ಲಿ ಅಥವಾ ನಿಗಮದ ವೆಬ್ಸೈಟ್ www.dbcdc.karnataka.gov.in ನಲ್ಲಿ ಅರ್ಜಿಯೊಂದಿಗೆ ಜಾತಿ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಫೋಟೋ ಮತ್ತು ಇತರೆ ದಾಖಾಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅಥವಾ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇದ್ದಲ್ಲಿ ಭರ್ತಿ ಮಾಡಿದ ಅರ್ಜಿಯನ್ನು ದಾಖಾಲಾತಿಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಳ ಅಭಿವೃದ್ಧಿ ನಿಗಮ (ನಿ), ಉಡುಪಿ ಜಿಲ್ಲಾ ಕಛೇರಿಗೆ ಆಗಸ್ಟ್ 3 ರ ಒಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ನಿಗಮದ ದೂರವಾಣಿ ಸಂ.0820-2574882 ಅಥವಾ ವೆಬ್ ಸೈಟ್ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Comments are closed.