ಹೈದರಾಬಾದ್: ಕರೊನಾ ವೈರಸ್ ಬಿಕ್ಕಟ್ಟು ಎಷ್ಟೋ ಕುಟುಂಬವನ್ನು ಬೀದಿಪಾಲು ಮಾಡಿಬಿಟ್ಟಿದೆ. ಒಂದೆಡೆ ವೈರಸ್ ಹಾವಳಿ, ಇನ್ನೊಂದೆಡೆ ಲಾಕ್‌ಡೌನ್… ಇದರಿಂದಾಗಿ ಎಷ್ಟೋ ಚಿಕ್ಕಪುಟ್ಟ ಕಂಪನಿಗಳು ತಮ್ಮ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿರುವುದು ಒಂದೆಡೆಯಾದರೆ, ಸಾಫ್ಟ್‌ವೇರ್‌ನ ದೈತ್ಯ ಕಂಪನಿಗಳೂ ಅನಾಮತ್ತಾಗಿ ತನ್ನ ನೌಕರರನ್ನು ಹೊರಕ್ಕೆ ಅಟ್ಟುತ್ತಿವೆ.
ಆದ್ದರಿಂದ ಕರೊನಾ ಎನ್ನುವುದು ಯಾವುದೇ ಭೇದವಿಲ್ಲದೇ ಎಲ್ಲ ವರ್ಗದ ಜನರ ಕೆಲಸವನ್ನೂ ಕಿತ್ತುಕೊಂಡುಬಿಟ್ಟಿದೆ.
ಇದರಿಂದಾಗಿ ಎಷ್ಟೋ ಕುಟುಂಬಗಳ ನಿರ್ವಹಣೆ ಅತಿ ಕಷ್ಟದಾಯಕವಾಗಿದೆ. ಸರ್ಕಾರಗಳು ಕುಟುಂಬಗಳ ನಿರ್ವಹಣೆಗಾಗಿ ಎಷ್ಟೆಲ್ಲಾ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಹಲವಾರು ಸವಲತ್ತುಗಳನ್ನು ನೀಡುತ್ತಿದ್ದರೂ, ಅದು ಹಲವು ಕುಟುಂಬದವರಿಗೆ ಸಾಲುತ್ತಿಲ್ಲ.
ಇಂಥ ಪರಿಸ್ಥಿತಿಯ ನಡುವೆ ಆತಂಕಕಾರಿ ಬೆಳವಣಿಗೆಯೊಂದರಲ್ಲಿ, ಹೈದಯಾಬಾದ್‌ನ ಯುವತಿಯರು ಉದ್ಯೋಗವನ್ನು ಅರಸಿ ಬಂಜೆತನ ಚಿಕಿತ್ಸಾಲಯದ ಮೊರೆ ಹೋಗುತ್ತಿದ್ದಾರೆ!
ಬಂಜೆತನ ಚಿಕಿತ್ಸಾಲಯಕ್ಕೂ, ಉದ್ಯೋಗಕ್ಕೂ ಎತ್ತಣತ್ತ ಸಂಬಂಧ ಎಂದುಕೊಳ್ಳಬೇಡಿ. ಇವರು ಅಲ್ಲಿಗೆ ಹೋಗುತ್ತಿರುವುದು ಬಾಡಿಗೆ ತಾಯಿಯಾಗಲು (ಸರೋಗಸಿ ಮದರ್)! ಮಕ್ಕಳಿಲ್ಲದ ದಂಪತಿಯ, ಅಂಡಾಣು ಮತ್ತು ವೀರ್ಯಾಣುಗಳನ್ನು ಸಂಗ್ರಹಿಸಿ ಅದನ್ನು ಶಕ್ತ ಮಹಿಳೆಯರ ಗರ್ಭದಲ್ಲಿಟ್ಟು, ಮಗು ಮಾಡಿದ ನಂತರ ಆ ಮಗುವನ್ನು ದಂಪತಿಗೆ ನೀಡುವ ಪ್ರಕ್ರಿಯೆಯೇ ಬಾಡಿಗೆ ತಾಯ್ತನ.
ಈ ಉದ್ಯೋಗವನ್ನು ಅರಸಿ 25-35 ವರ್ಷ ವಯಸ್ಸಿನ ಹೆಣ್ಣುಮಕ್ಕಳು ಬಂಜೆತನ ಚಿಕಿತ್ಸಾಲಯದ ಮೊರೆ ಹೋಗುತ್ತಿರುವುದು ಹೈದರಾಬಾದ್‌ನಲ್ಲಿ ವರದಿಯಾಗಿದೆ. ಇದರ ಜತೆಗೆ, ಮಹಿಳೆಗೆ ಮಕ್ಕಳಾಗಲು ಕಷ್ಟವಾಗಿದ್ದಲ್ಲಿ ಅಂಥವರಿಗೆ ತಮ್ಮ ಅಂಡಾಣು ದಾನ ಮಾಡುವ ಕಾಯಕವನ್ನೂ ಹೆಣ್ಣುಮಕ್ಕಳು ಶುರು ಮಾಡಿಕೊಂಡಿದ್ದಾರೆ.
ಇದು ಅತಿ ಕಷ್ಟದ ಕೆಲಸವಾದರೂ ಹೈದರಾಬಾದ್‌ನಲ್ಲಿ ಬಾಡಿಗೆ ತಾಯಿಯಾದವರಿ ಐದು ಲಕ್ಷ ರೂಪಾಯಿ ಅಂಡಾಣು ದಾನಕ್ಕೆ 75 ಸಾವಿರದಿಂದ 1 ಲಕ್ಷ ರೂಪಾಯಿ ನೀಡಲಾಗುತ್ತದೆ. ಜತೆಗೆ ಆಹಾರ ಮತ್ತು ವೈದ್ಯಕೀಯ ವೆಚ್ಚವನ್ನು ಮಕ್ಕಳು ಬಯಸುವ ದಂಪತಿಯೇ ನೀಡುತ್ತಾರೆ. ಇದರಿಂದ ಹಣಕ್ಕಾಗಿ ಹೆಣ್ಣುಮಕ್ಕಳು ಈ ಮಾರ್ಗ ಕಂಡುಕೊಂಡಿದ್ದಾರೆ.
Comments are closed.