ಸುಶಾಂತ್ ಸಿಂಗ್ ಆತ್ಮಹತ್ಯೆ ಬಗ್ಗೆ ಬಾಲಿವುಡ್ ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ 30ಕ್ಕೂ ಅಧಿಕ ಮಂದಿಯನ್ನು ಮುಂಬೈ ಪೊಲೀಸ್ ಮಾಹಿತಿ ಕಲೆಹಾಕುವಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೆಲ್ಲದರ ಜತಗೆ ಮಾನಸಿಕ ಖಿನ್ನತೆಯಿಂದ ಸುಶಾಂತ್ ಆತ್ಮಹತ್ಯೆಗೆ ಶರಣಾಗಿದ್ದರು ಎಂಬ ಸುದ್ದಿ ಹರಿದಾಡಿದ್ದೇ ತಡ, ಹಲವು ಮನೋವೈದ್ಯರನ್ನೂ ವಿಚಾರಣೆ ಮಾಡಲಾಗಿತ್ತು. ಇದೀಗ ಆ ಮನೋವೈದ್ಯರು ಸುಶಾಂತ್ಗಿದ್ದ ಕಾಯಿಲೆ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಸತತ ಸೋಲು ಮತ್ತು ಒತ್ತಡದಿಂದಾಗಿ ಸುಶಾಂತ್ ಡಿಪ್ರೆಷನ್ಗೆ ಒಳಗಾಗಿದ್ದರು. ಆ ಖಿನ್ನತೆ ವಿಪರೀತ ಮಟ್ಟಕ್ಕೆ ಹೋಗಿತ್ತು. ಆ ಬಗ್ಗೆ ಮಾಹಿತಿ ನೀಡಿರುವ 3 ಜನರ ಮನೋವೈದ್ಯರ ತಂಡ, ಸುಶಾಂತ್ಗೆ ಬೈಪೋಲಾರ್ ಡಿಸಾರ್ಡರ್ ಇರುವುದನ್ನು ತಿಳಿಸಿದ್ದಾರೆ. ಈ ಕಾಯಿಲೆಗೆ ತುತ್ತಾದರೆ, ಖಿನ್ನತೆಯ ಪ್ರಮಾಣ ಮತ್ತು ಆರೋಗ್ಯದಲ್ಲಿ ತೀವ್ರ ಸ್ವರೂಪದ ಏರಿಳಿತ ಕಂಡುಬರುತ್ತದೆ. ಇದಕ್ಕೆ ಮ್ಯಾನಿಕ್ ಡಿಪ್ರೆಷನ್ ಎಂದೂ ಕರೆಯುತ್ತಾರೆ. ಈ ಕಾಯಿಲೆ ಬಗ್ಗೆ ಸುಶಾಂತ್ಗೆ ಗೊತ್ತಿದ್ದರೂ, ಕೇವಲ ಎರಡರಿಂದ ಮೂರು ಸಲ ಮಾತ್ರ ಚಿಕಿತ್ಸೆಗೆ ಬಂದಿದ್ದರು ಎಂದು ವೈದ್ಯರು ಸುಶಾಂತ್ ಹೆಲ್ತ್ ಕಂಡಿಷನ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲ ಸುಶಾಂತ್ ಶೂಟಿಂಗ್ನಲ್ಲಿ ಭಾಗವಹಿಸುತ್ತಿದ್ದರಿಂದ ಮೆಡಿಸಿನ್ ತೆಗೆದುಕೊಳ್ಳುವುದನ್ನೂ ಬಿಟ್ಟಿದ್ದರಂತೆ. ಸರಿಯಾದ ಸಮಯಕ್ಕೆ ಮಾತ್ರೆ ತೆಗೆದುಕೊಳ್ಳದೆ ಇರುತ್ತಿದ್ದರು. ಇತ್ತೀಚಿನ ಮುರ್ನಾಲ್ಕು ತಿಂಗಳಿಂದ ಅವರು ಮೆಡಿಸಿನ್ ತೆಗೆದುಕೊಳ್ಳುವುದನ್ನೇ ಬಿಟ್ಟಿದ್ದರು ಎಂದೂ ಮನೋವೈದ್ಯರು ಹೇಳಿಕೆ ನೀಡಿದ್ದಾರೆ. ಲಾಕ್ಡೌನ್ ಶುರುವಾದ ಬಳಿಕ ಫೋನ್ ಮೂಲಕವೇ ಖಿನ್ನತೆ ಬಗ್ಗೆ ಸುಶಾಂತ್ ವೈದ್ಯರಿಂದ ಸಲಹೆ ಪಡೆದುಕೊಳ್ಳುತ್ತಿದ್ದದ್ದು ಗೊತ್ತಾಗಿದೆ.
Comments are closed.