ನವದೆಹಲಿ: ಮಹಾಮಾರಿ ಕೊರೋನಾವೈರಸ್ ರೋಗಿಗಳಿಗೆ ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣೆಯಿಂದಾಗಿ ಭಾರತದಲ್ಲಿ ಕೋವಿಡ್ 19 ಸಾವಿನ ಪ್ರಮಾಣವು ಜೂನ್ 17 ರಂದು ಶೇ. 3.36ರಿಂದ ಶೇ. 2.43ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.
ಮೂವತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ 19 ಪಾಸಿಟಿವ್ ಪ್ರಕರಣಗಳು ರಾಷ್ಟ್ರೀಯ ಸರಾಸರಿಗಿಂತ 8.07% ಕ್ಕಿಂತ ಕಡಿಮೆ ಹೊಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವಿಶೇಷ ಕರ್ತವ್ಯದ ಅಧಿಕಾರಿ ರಾಜೇಶ್ ಭೂಷಣ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
“19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಮಿಲಿಯನ್ ಜನಸಂಖ್ಯೆಗೆ ದಿನಕ್ಕೆ 140 ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸುತ್ತಿವೆ. ಕೇವಲ ಪರೀಕ್ಷೆಗಳನ್ನು ಮಾಡುವುದು ಸಾಕಾಗುವುದಿಲ್ಲ, ಅವುಗಳನ್ನು ಪ್ರತಿ ಮಿಲಿಯನ್‌ಗೆ ದಿನಕ್ಕೆ 140 ಪರೀಕ್ಷೆಗಳ ಮಟ್ಟದಲ್ಲಿ ಮಾಡಬೇಕಾಗಿದೆ ಇದರಿಂದ ಪಾಸಿಟಿವ್ ಪ್ರಮಾಣವು ಕಡಿಮೆಯಾಗುತ್ತದೆ ಮತ್ತು ಇಳಿಯುತ್ತದೆ. ಮೊದಲು ಶೇಕಡಾ 10 ಮತ್ತು ನಂತರ ಪರೀಕ್ಷಾ ಪ್ರಕ್ರಿಯೆಯನ್ನು ಮುಂದುವರಿಸಿದರೆ ಇದರಿಂದ ಪಾಸಿಟಿವ್ ಪ್ರಮಾಣವು ಶೇಕಡಾ 5 ಅಥವಾ ಅದಕ್ಕಿಂತ ಕಡಿಮೆಯಾಗುತ್ತದೆ ಎಂದರು.
“ಆದ್ದರಿಂದ ಈ ಮಟ್ಟದ ಪರೀಕ್ಷೆಯನ್ನು ಕಾಪಾಡಿಕೊಳ್ಳುವುದು ಮತ್ತು ಪಾಸಿಟಿವ್ ಪ್ರಕರಣಗಳನ್ನು ಅಂತಿಮವಾಗಿ ಶೇಕಡಾ 5ಕ್ಕೆ ತರುವುದು ಅಥವಾ ಅದಕ್ಕಿಂತಲೂ ಕಡಿಮೆಯಾಗುವಂತೆ ಮಾಡುವುದು ಅಂತಿಮ ಗುರಿಯಾಗಿದೆ ಎಂದು ರಾಜೇಶ್ ಭೂಷಣ್ ಹೇಳಿದರು.
ಭಾರತದಲ್ಲಿ, ಪ್ರತಿ ಮಿಲಿಯನ್ ಜನಸಂಖ್ಯೆಗೆ ಕೋವಿಡ್ ರೋಗಿಗಳ ಸಾವುಗಳು ಪ್ರತಿ ಮಿಲಿಯನ್‌ಗೆ 20.4 ರಷ್ಟಿದೆ, ಇದು ವಿಶ್ವದ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ ಎಂದು ಭೂಷಣ್ ಹೇಳಿದ್ದಾರೆ.
“ಮಿಲಿಯನ್‌ಗೆ ಸಾವು ಭಾರತಕ್ಕಿಂತ 21 ಪಟ್ಟು ಅಥವಾ 33 ಪಟ್ಟು ಹೆಚ್ಚಿರುವ ಹಲವಾರು ದೇಶಗಳಿವೆ. ಜಾಗತಿಕ ಸರಾಸರಿ ಪ್ರತಿ ಮಿಲಿಯನ್ ಜನಸಂಖ್ಯೆಗೆ 77 ಸಾವುಗಳು ಎಂದು ಅವರು ಹೇಳಿದರು.
ಕೋವಿಡ್-19 ಪ್ರಕರಣದ ಸಾವಿನ ಪ್ರಮಾಣವು ಜೂನ್ 17 ರಂದು ಶೇಕಡಾ 3.36 ರಿಂದ ಈಗ 2.43ಕ್ಕೆ ಇಳಿದಿದೆ ಎಂದು ತೋರಿಸುವ ಪಟ್ಟಿಯನ್ನು ರಾಜೇಶ್ ಭೂಷಣ್ ಹಂಚಿಕೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 37,148 ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 11,55,191ಕ್ಕೆ ತಲುಪಿದೆ. ಇದೇ ವೇಳೆ ಚೇತರಿಕೆ ಪ್ರಮಾಣವು ಹೆಚ್ಚಿದ್ದು ಒಟ್ಟಾರೆ 7,24,577 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಬಿಡುಗಡೆ ಮಾಡಿವೆ.
Comments are closed.