ರಾಷ್ಟ್ರೀಯ

6 ತಿಂಗಳಿಗೊಮ್ಮೆ ಸಿಮ್​​ ಕಾರ್ಡ್​ ವೆರಿಫಿಕೇಶನ್​!: ಭಾರತೀಯ ದೂರಸಂಪರ್ಕ ಇಲಾಖೆ

Pinterest LinkedIn Tumblr


ದೇಶದಲ್ಲಿ ಸಿಮ್​ ಕಾರ್ಡ್​ ಮೂಲಕ ಅನೇಕ ವಂಚನೆಗಳು ನಡೆಯುತ್ತಿದೆ. ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿತದೃಷ್ಠಿಯಿಂದ ಸಿಮ್​ ಕಾರ್ಡ್​ ವೆರಿಫಿಕೇಶನ್​ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು, ಪ್ರತಿ 6 ತಿಂಗಳಿಗೊಮ್ಮೆ ಸಿಮ್​​ ಕಾರ್ಡ್​ ವೆರಿಫಿಕೇಶನ್​ ಮಾಡಲಾಗುತ್ತದೆ ಎಂದು ಭಾರತೀಯ ದೂರಸಂಪರ್ಕ ಇಲಾಖೆ ಹೇಳಿದೆ.

ಹೊಸ ನಿಯಮದ ಪ್ರಕಾರ, ಸಿಮ್ ಕಾರ್ಡ್​ ಮೂಲಕ ಟೆಲಿಕಾಂ ಕಂಪನಿಗೆ ಹೊಸ ಸಂಪರ್ಕವನ್ನು ನೀಡುವ ಮೊದಲು ನೋಂದಣಿಯನ್ನು ಪರಿಶೀಲಿಸಬೇಕಾಗುತ್ತದೆ. ಮತ್ತು 6 ತಿಂಗಳಿಗೊಮ್ಮೆ ಪರಿಶೀಲನೆ ನಡೆಸಬೇಕು ಎಂದು ಹೇಳಿದೆ. ಕಂಪನಿಗಳ ಹೆಸರಿನಲ್ಲಿ ಸಿಮ್​ ಕಾರ್ಡ್​ ವಂಚನೆಗಳು ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಹೊಸ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಕಾರ್ಪೋರೇಟ್​​​​ ವ್ಯವಹಾರ ಸವಚಿವಾಲಯ ಕಂಪನಿಗಳು ಸಿಮ್​ ನೊಂದಣಿಯನ್ನು ಪರಿಶೀಲಿಸಬೇಕಾಗಿದೆ. ಈ ಮೊದಲು ಸಿಮ್​​ ಕಾರ್ಡ್​ ಚಂದಾದಾರರ ಪರಿಶೀಲನೆ ದಂಡದ ನಿಯಮವನ್ನು ಸಡಿಲಿಸಲು ಟೆಲಿಕಾಂ ಇಲಾಖೆ ನಿರ್ಧರಿಸಿತ್ತು. ಪ್ರತಿ ಸಣ್ಣ ತಪ್ಪಿಗೆ ಭಾರತೀಯ ಟೆಲಿಕಾಂ ಕಂಪನಿಗಳಿಗೆ 1 ಲಕ್ಷ ರೂ.ಗಳ ದಂಡ ವಿಧಿಸಲಾಗುವುದಿಲ್ಲ ಎಂದು ಹೇಳಿತ್ತು. ಆದರೀಗ ಗ್ರಾಹಕರ ಸಿಮ್​​ ಕಾರ್ಡ್ ಪರಿಶೀಲನೆ ನಿಯಮವನ್ನು ಪಾಲಿಸದ ಕಾರಣ ಟೆಲಿಕಾಂ ಕಂಪನಿಗಳಿಗೆ ಸರ್ಕಾರ 3 ಸಾವಿರ ಕೋಟಿ ದಂಡವನ್ನು ವಿಧಿಸಿದೆ.

Comments are closed.