ಕರಾವಳಿ

ಹಟ್ಟಿ ಗೊಬ್ಬರದ ತ್ಯಾಜ್ಯ ನೀರಿನಿಂದ ಕುಡಿಯುವ ಬಾವಿ ನೀರು ಕಲುಷಿತ-ಕೋಟದಲ್ಲೊಂದು ಅಮಾನವೀಯ ಘಟನೆ..!

Pinterest LinkedIn Tumblr

ಉಡುಪಿ: ಜಿಲ್ಲೆಯ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಮಣೂರು ಗ್ರಾಮದ ಕಾಸಾನಗುಂದು ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಕೊಟ್ಟಿಗೆ ಸಮೀಪದಲ್ಲಿ ನಿರ್ಮಿಸಲಾದ ಗೊಬ್ಬರದ ಗುಂಡಿಯಿಂದ ಪಕ್ಕದ ಮನೆಯ ಬಾವಿ ನೀರು ಕಲುಷಿತಗೊಂಡಿದ್ದಲ್ಲದೇ ತ್ಯಾಜ್ಯ ನೀರನ್ನು ನಡೆ ದಾರಿಗೆ ಬಿಡುತ್ತಿರುವ ಬಗ್ಗೆ ಆಕ್ರೋಷ ವ್ಯಕ್ತವಾಗಿದೆ.

ಸರೋಜಮ್ಮ ಮಡಿವಾಳ ಅವರ ನಿವಾಸದ ಬಾವಿ ನೀರು ಕಲುಷಿತಗೊಂಡಿದ್ದು ಅವರ ಪತಿ ನಿವೃತ್ತ ಪುರಸಭಾ ಸಿಬ್ಬಂದಿ ಇಳಿವಯಸ್ಸಿನವರಾದ ಆನಂದ ಅವರು ತೀವೃ ಅನಾರೋಗ್ಯಕ್ಕೀಡಾಗಿದ್ದಾರೆ. ಬಾವಿ ಸಮೀಪವೇ ಇವರ ಪಕ್ಕದ ಮನೆಯವರು ಇಂಗುಗುಂಡಿ ಮತ್ತು ಗೊಬ್ಬರ ಗುಂಡಿ ನಿರ್ಮಿಸಿದ್ದಾರೆ. ಅದರ ತ್ಯಾಜ್ಯ ನೀರು ನಡೆದಾಡುವ ಕಾಂಕ್ರಿಟ್ ರಸ್ತೆಯಲ್ಲಿ ಹರಿಯುತ್ತಿದೆ. ಸ್ಥಳೀಯ ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿಯೂ ಕೂಡ ಇದ್ದಾರೆ. ಈಗಾಗಾಲೇ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರವಹಣಾಧಿಕಾರಿ, ಸ್ಥಳೀಯ ಗ್ರಾಮಪಂಚಾಯತ್, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಸಂಬಂದಪಟ್ಟವರಿಗೆ ದೂರು‌ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮನೆಯವರು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕೋಟ ಗ್ರಾಮಪಂಚಾಯತ್ ಪಿಡಿಒ, ಈಗಾಗಾಲೇ ಕೊಟ್ಟಿಗೆ ಗೊಬ್ಬರ ನೀರಿನಿಂದಾಗುವ ಸಮಸ್ಯೆ ಕುರಿತು ಗಮನಕ್ಕೆ ಬಂದಿದ್ದು ಆ ಮನೆಯವರಿಗೆ ನೋಟಿಸ್ ನೀಡಿದ್ದೇವೆ. ವಾರದೊಳಗೆ ಸಮಸ್ಯೆ ಪರಿಹಾರ‌ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

Comments are closed.