ಕರ್ನಾಟಕ

ಅಮೃತ ಬಳ್ಳಿ ಕಷಾಯ ಕುಡಿದು ಕರೊನಾದಿಂದ ಗುಣಮುಖನಾದೆ: ಸಿ.ಟಿ.ರವಿ

Pinterest LinkedIn Tumblr


ಬೆಂಗಳೂರು: ಕರೊನಾ ಒಂದು ಕಾಯಿಲೆಯೇ ಅಲ್ಲ, ಜನರು ಸುಮ್ಮನೆ ಆತಂಕಕ್ಕೆ ಒಳಗಾಗುತ್ತಿದ್ದಾರೆ ಅನಿಸುತ್ತಿದೆ ಎಂದು ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ. ಕಳೆದ ವಾರ ನಡೆಸಿದ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟ ಬಳಿಕ ಆಯುರ್ವೇದ ಔಷಧ ಸೇವನೆ ಮಾತ್ರ ಮಾಡುತ್ತಿದ್ದ ಸಚಿವರಿಗೆ ಇದೀಗ ಕರೊನಾ ನೆಗೆಟಿವ್ ಆಗಿದೆ. ಗುಣಲಕ್ಷಣಗಳಿಲ್ಲದ ಕಾರಣಕ್ಕೆ ಚಿಕ್ಕಮಗಳೂರಿನ ಮನೆಯಲ್ಲೇ ಪ್ರತ್ಯೇಕವಾಗಿದ್ದು ಗುಣವಾಗಿರುವ ಸಿ.ಟಿ. ರವಿ, ಈ ಕುರಿತು ಅನುಭವ ಹಂಚಿಕೊಂಡಿದ್ದಾರೆ.

‘ಆಮ್ಲಜನಕದ ಪ್ರಮಾಣ ಪರೀಕ್ಷಿಸಿಕೊಳ್ಳುತ್ತ ಮನೆಯಲ್ಲೇ ಇರಬಹುದು, ಸಮಸ್ಯೆಯಾದರೆ ಕರೆ ಮಾಡಿ’ ಎಂಬ ವೈದ್ಯರ ಸಲಹೆ ಮೇರೆಗೆ ಮನೆಗೆ ತೆರಳಿದೆ. ತೋಟದ ಮನೆಯ ಮೊದಲ ಮಹಡಿಯಲ್ಲಿ ನಾನಿದ್ದರೆ, ಪತ್ನಿ ನೆಲ ಮಹಡಿಯಲ್ಲಿದ್ದರು. ಆಯುರ್ವೆದ ವೈದ್ಯ ಡಾ. ಗಿರಿಧರ ಕಜೆ ಅವರು ನೀಡಿದ ಮಾತ್ರೆಗಳನ್ನು ವರದಿ ದೃಢಪಡುವ ನಾಲ್ಕು ದಿನಗಳ ಮೊದಲಿಂದಲೇ ಮುಂಜಾಗ್ರತೆಯಾಗಿ ಪಡೆಯುತ್ತಿದ್ದೆ.

ವರದಿ ದೃಢಪಟ್ಟ ನಂತರ 6 ದಿನ ಸೇರಿ ಒಟ್ಟು 10 ದಿನ ಮಾತ್ರೆ ಸೇವಿಸಿದೆ. ಅದು ಬಿಟ್ಟರೆ ಬೇರೆ ಯಾವುದೇ ಮಾತ್ರೆ, ಔಷಧ ಸೇವಿಸಿಲ್ಲ. ಬೆಳಗ್ಗೆ-ಸಂಜೆ ನೆಲನೆಲ್ಲಿ ಅಥವಾ ಅಮೃತಬಳ್ಳಿಯ ಕಷಾಯ ಸೇವಿಸುತ್ತಿದ್ದೆ. ವಾಕಿಂಗ್, ಯೋಗಾಸನ ಮಾಡುತ್ತಿದ್ದೆ. ಯಥೇಚ್ಛ ನೀರು ಕುಡಿಯುತ್ತಿದ್ದೆ, ಚೆನ್ನಾಗಿ ಊಟ ಮಾಡುತ್ತಿದ್ದೆ. ಮನಸ್ಸನ್ನು ಕ್ರಿಯಾಶೀಲ ಆಗಿರಿಸಿಕೊಳ್ಳಲು ಏಳೆಂಟು ಪುಸ್ತಕ ಓದಿದ್ದೇನೆ. ಮನೆಯವರ ಬೆಂಬಲ ಸಾಕಷ್ಟು ನಿರಾಳ ನೀಡುತ್ತದೆ, ಭಯಪಡುವ ಅಗತ್ಯವಿಲ್ಲ ಎಂದು ಹೇಳುತ್ತಾರೆ.

Comments are closed.